ಜರ್ಮನಿಯಲ್ಲಿ ಮತ್ತೆ ಲಾಕ್‍ಡೌನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬರ್ಲಿನ್, ಮಾ.4 (ಎಪಿ)- ಜಗತ್ತಿನಾದ್ಯಂತ ಕೋವಿಡ್-19 ಹಾವಳಿ ದಿನೇ ದಿನೇ ಕಡಿಮೆಯಾಗುತ್ತಿರುವ ಸಂತೋಷ ಸುದ್ದಿ ತಿಳಿದುಬರುತ್ತಿದ್ದರೆ, ಜರ್ಮನಿ ದೇಶದಲ್ಲಿ ಮತ್ತೆ ರೂಪಾಂತರ ಕೊರೊನಾ ವೈರಾಣು ದಾಳಿ ಇಡುವ ಎಲ್ಲ ಸಾಧ್ಯತೆಗಳಿವೆ ಎಂಬ ಮುನ್ನೆಚ್ಚರಿ ಕ್ರಮವಾಗಿ ದೇಶದ 16 ರಾಜ್ಯಗಳಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆಯಾಗಿದೆ.

ಈ ರಾಜ್ಯಗಳಲ್ಲಿ ವೈರಸ್ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸುವ ಕಾರಣದಿಂದ ಮಾ.28 ರವರೆಗಿನ ಮೂರು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸಿದ್ದಾರೆ. ಆದರೆ, ಸೋಂಕಿನ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಮಳಿಗೆಗಳ ಮತ್ತು ಇತರ ಅಗತ್ಯ ವಸ್ತುಗಳ ವ್ಯವಹಾರಗಳ ವಹಿವಾಟು ನಡೆಸಲು ಯಾವುದೇ ನಿರ್ಬಂಧವನ್ನು ಹೇರಿಲ್ಲ.

ಆದರೆ, ಮುಂಜಾಗ್ರತ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ , ಸ್ಯಾನಿಟೈಸೇಷನ್ ಕ್ರಮಗಳ ಅನುಸರಿಸುವುದನ್ನು ಮುಂದು ವರಿಸ ಲಾಗಿದೆ ಎಂದು ಜರ್ಮನಿ ಚಾನ್ಸೆಲರ್ ಆ್ಯಂಜೆಲಾ ಮಾರ್ಕೆಲ್ ತಿಳಿಸಿದ್ದಾರೆ.

ಅವರು ದೇಶದ 16 ರಾಜ್ಯಗಳ ಗವರ್ನರ್‍ಗಳ ಜತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚು ಸಾಂಕ್ರಾಮಿಕ ಕೊರೊನಾ ವೈರಾಣು ರೂಪಾಂತರಗಳ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದನ್ನು ನಿಯಂತ್ರಣಗೊಳಿಸಿ ಸಮತೋಲನಕ್ಕೆ ತರುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರು ಸಾಮಾನ್ಯ ಜೀವನಕ್ಕೆ ಮರಳಲು ಕೇಳಿಬರುತ್ತಿರುವ ಕೂಗುಗಳ ಬಗ್ಗೆ ಮಾರ್ಕೆಲ್ ಒಪ್ಪಿಕೊಂಡರು. ಅದಕ್ಕಾಗಿ ಈ ಕ್ರಮಗಳನ್ನು ಅನುಸರಿಸಲು ಸರ್ಕಾರ ಬದ್ಧವಾಗಿದೆ ಎಂದರು. ಕಳೆದ ವಾರ ಅನೇಕ ಪ್ರಾಥಮಿಕ ವಿದ್ಯಾರ್ಥಿಗಳು ಶಾಲೆಗೆ ಮರಳಿದರು. ಎಂದಿನಂತೆ ಇತರ ವಹಿವಾಟು, ಕಚೇರಿಗಳು, ಅಂಗಡಿ-ಮುಂಗಟ್ಟುಗಳು ನಡೆಯುತ್ತಿವೆ.

ವರ್ಕ್ ಫ್ರಂ ಹೋಂ ಅಗತ್ಯವಿರುವೆಡೆ ಮುಂದುವರಿಸಲಾಗಿದೆ. ಇತ್ತೀಚೆಗೆ ಕೇಶವಿನ್ಯಾಸಕರು, ಸಲೂನ್‍ಗಳು ತೆರೆಯಲ್ಪಟ್ಟವು. ಕೆಲವೆಡೆ ಪ್ರಸ್ತುತ ಇರುವ ಲಾಕ್‍ಡೌನ್ ಈ ಭಾನುವಾರದವರೆಗೆ ಇರುತ್ತದೆ ಎಂದು ಅವರು ಹೇಳಿದರು.

Facebook Comments

Sri Raghav

Admin