ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ ಬೆಂಗಳೂರಿನ ಈ ವಲಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಪಶ್ವಿಮ ವಲಯ ಕೊರೊನಾ ಕಂಟಕ ಪ್ರದೇಶವಾಗಿ ಪರಿಣಮಿಸಿದೆ. ಈ ವಲಯದಲ್ಲಿ ಪ್ರತಿನಿತ್ಯ ಹಲವರಿಗೆ ಸೋಂಕು ತಗಲುತ್ತಿರುವುದು ಬಿಬಿಎಂಪಿಗೆ ತಲೆನೋವು ತರಿಸಿದೆ.

ಪಶ್ಚಿಮ ವಲಯಕ್ಕೆ ಸೇರುವ ಪಾದರಾಯನ ಪುರದಲ್ಲಿ ಮತ್ತೆ ಇಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಹೀಗಾಗಿ ಸ್ವತಃ ಬಿಬಿಎಂಪಿ ಆಯುಕ್ತರೆ ಇಂದು ಜೆಜೆಆರ್ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ವಾರ ಸೋಂಕು ಕಾಣಿಸಿಕೊಂಡಿದ್ದ ಗರ್ಭಿಣಿ ತಂದೆ ತಾಯಿಗೆ ಸೋಂಕು ತಗುಲಿರುವುದರಿಂದ ಪಾದರಾಯನಪುರದಲ್ಲಿ ಆತಂಕ ಉಂಟಾಗಿದೆ.ಬಿಬಿಎಂಪಿಯ ಎಂಟು ವಲಯಗಳಲ್ಲಿ ಪಶ್ಚಿಮ ವಲಯ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಇದುವರೆಗೂ ಈ ವಲಯದಲ್ಲಿ 81 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 44 ಪ್ರಕರಣಗಳು ಇನ್ನು ಜೀವಂತವಾಗಿರುವುದು ವಿಶೇಷ.ಪಾದರಾಯನಪುರ, ಮಲ್ಲೇಶ್ವರಂ, ನಾಗವಾರ, ಕೆ.ಆರ್. ಮಾರುಕಟ್ಟೆ, ಜೆಜೆಆರ್‍ನಗರಗಳು ಕಂಟೈನ್ಮೇಂಟ್ ಜೋನ್‍ಗಳಾಗಿವೆ. ಇಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆಂತಕಕ್ಕೆ ಕಾರಣವಾಗಿದೆ.

ಪೂರ್ವ ವಲಯದಲ್ಲಿ 66 ಹಾಗೂ ಬೊಮ್ಮನಹಳ್ಳಿಯಲ್ಲಿ 59 ಪ್ರಕರಣಗಳು ಪತ್ತೆಯಾಗಿವೆ. ಉಳಿದ ವಲಯಗಳಲ್ಲಿ ಕಡಿಮೆ ಪ್ರಮಾಣದ ಕೇಸ್‍ಗಳು ಕಾಣಿಸಿಕೊಂಡಿವೆ.ಆದರೆ, ಪಶ್ವಿಮ ವಲಯದಲ್ಲಿ ಮಾತ್ರ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಆಯುಕ್ತರು ವಿವಿಧ ಪ್ರದೇಶಗಳಿಗೆ ತೆರಳಿ ಸೋಂಕು ತಡೆಗಟ್ಟುವ ಕುರಿತಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

Facebook Comments

Sri Raghav

Admin