ಬೆಂಗಳೂರಿಗರೇ ಹುಷಾರ್, ಕೊರೋನಾ ಕಡಿಮೆಯಾಗಿದೆ ಎಂದು ರಸ್ತೆಗಿಳಿದರೆ ಕಾದಿದೆ ಆಪಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ನಗರವಾಸಿಗಳೇ ಕೊರೊನಾ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಇನ್ನೂ ಇದೆ ಎಚ್ಚರ ತಪ್ಪಿದರೆ ಜೋಕೆ.. ಅಗತ್ಯ ವಸ್ತುಗಳ ಖರೀದಿ ನೇಪದಲ್ಲಿ ಪ್ರತಿ ನಿತ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಜನ ಜಾತ್ರೆ ಸೇರುತ್ತಾ ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ನಿರತರಾಗಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರಿದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ನಗರದ ಬಹುತೇಕ ಕಡೆ ಎಲ್ಲಾ ಅಂಗಡಿಗಳು ಓಪನ್ ಆಗಿರುತ್ತವೆ. ಇನ್ನೂ ಜೂ.14ರ ವರೆಗೂ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಆದರೆ ಜನ ಮಾತ್ರ ನಗರದಲ್ಲಿ ಸೊಂಕು ನಿಯಂತ್ರಣಕ್ಕೆ ಬಂದಿದೆ. ಎಲ್ಲಿ ಬೇಕಾದರೂ ಓಡಾಡಬಹುದೆಂದು ಭಯವಿಲ್ಲದೆ ನಿರ್ಭೀತಿಯಿಂದ ಓಡಾಟ ಮಾಡುತ್ತಿದ್ದಾರೆ.

ಇಂದು ಬೆಳಗ್ಗೆ ನಗರದ ಹಲವು ಪ್ರದೇಶಗಳ ಚಿತ್ರಣವನ್ನು ನೋಡಿದರೆ ಎಲ್ಲಿದೆ ಕೊರೊನಾ, ಎಲ್ಲಿದೆ ಲಾಕ್‍ಡೌನ್ ಅನ್ನಿಸಿಬಿಡುತ್ತದೆ. ಅಷ್ಟು ಜನಜಂಗುಳಿ, ಅರ್ಧ ಮಾಸ್ಕ್, ಮಾಯವಾದ ಸಾಮಾಜಿಕ ಅಂತರ ಎಲ್ಲವನ್ನೂ ಮರೆತು ತರಕಾರಿ ಕೊಳ್ಳಲು ಏಕ ಕಾಲದಲ್ಲಿ ರಸ್ತೆಗಿಳಿಯುತ್ತಿದ್ದಾರೆ. ಕೆಲವರು ಚಿಕ್ಕ ಚಿಕ್ಕ ಮಕ್ಕಳನ್ನು ಸಹ ಖರೀದಿಗೆ ಕರೆದು ಕೊಂಡುಬರುತ್ತಿದ್ದಾರೆ.

ಮಕ್ಕಳಿಗೆ ಸೊಂಕು ಬಹಳ ಬೇಗ ಹಬ್ಬುವ ಸಾಧ್ಯತೆಗಳಿವೆ ಎಂದು ಹೆಳಲಾಗುತ್ತಿದ್ದರೂ ಸಹ ಜನರು ಮಾತ್ರ ಎಚ್ಚೆತ್ತು ಕೊಂಡತೆ ಕಾಣುತ್ತಿಲ್ಲ. ದೊಡ್ಡವರಿಗೆ ಸೋಂಕು ಬಂದರೆ ತಡೆದುಕೊಳ್ಳುತ್ತಾರೆ. ಆದರೆ ಚಿಕ್ಕಮಕ್ಕಳು ಹೇಗೆ ತಡೆದು ಕೊಳ್ಳುತ್ತಾರೆ, ದಯವಿಟ್ಟು ಅನಗತ್ಯವಾಗಿ ಮಕ್ಕಳನ್ನು ಹೊರೆಗೆ ಕರೆದು ಕೊಂಡು ಹೋಗದಿರಿ ನಿರ್ಲಕ್ಷ ಸಲ್ಲದು.

ಎಲ್ಲಿ ನೋಡಿದರೂ ಜನ ವಾಹನಗಳದ್ದೆ ಕಾರು ಬಾರು. ಮಾಮೂಲಿ ದಿನಕ್ಕಿಂತ ವಾಹನ ಸಂಚಾರ ಜೋರಾಗಿಯೇ ಇರುತ್ತದೆ. ಸೋಂಕಿನ ಪ್ರಮಾಣ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿದ್ದು, ಊರುಗಳಿಗೆ ಹೋಗಿದ್ದ ಜನರು ಮತ್ತೆ ನಗರಕ್ಕೆ ವಾಪಸಾಗುತ್ತಿದ್ದಾರೆ. ಇದರಿಂದ ನಗರದಲ್ಲಿ ಮತ್ತೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

# ಆನ್ ಆದ ಸಿಗ್ನಲ್ ಲೈಟ್:
ಕೊರೊನಾ ಲಾಕ್‍ಡೌನ್‍ನಿಂದ ಕಳೆದ ಒಂದೂವರೆ ತಿಂಗಳಿನಿಂದ ನಗರದ ಪ್ರಮುಖ ಕಡೆ ಸಿಗ್ನಲ್ ಲೈಟ್‍ಗಳನ್ನು ಬಂದ್ ಮಾಡಲಾಗಿತ್ತು. ವಾಹನಗಳ ಸಂಚಾರ ವಿರಳವಾಗಿದ್ದರಿಂದ ಅವಶ್ಯಕತೆ ಇರಲಿಲ್ಲ. ಆದರೆ, ಈಗ ಮತ್ತೆ ವಾಹನಗಳ ಸಂಚಾರ ಹೆಚ್ಚಾಗಿದ್ದು ಸಿಗ್ನಲ್‍ಗಳು ಬೀಳುತ್ತಿವೆ.

ಬೆಳಗ್ಗೆ 6 ರಿಂದ 10ರ ವರೆಗೂ ನಗರದ ಪ್ರಮುಖ ಕಡೆ ವಾಹನಗಳ ಸಂಚಾರ ಜೋರಾಗಿರುತ್ತದೆ. 10 ಗಂಟೆ ನಂತರ ವಿರಳ ಸಂಚಾರವಿರುತ್ತದೆ. ಮುಂಜಾನೆ ಕೆಲ ವೃತ್ತಗಳಲ್ಲಿ ಸಂಚಾರಿ ಪೂಲೀಸರು ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.

ಕೆಲವು ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ ಇದರಿಂದ ವಾಹನಗಳ ಸಂಚಾರ ದಟ್ಟವಾಗಿರುತ್ತದೆ. ಜನರು ಮಾತ್ರ ಈಗಾಗಲೇ ಲಾಕ್‍ಡೌನ್ ತೆರವಾಗಿದೆ. ಯಾವುದೇ ನಿರ್ಬಂಧ ಇಲ್ಲ ಎಂಬಂತೆ ಬೇಕಾ ಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ನಗರ ವಾಸಿಗಳೇ ಇನ್ನೂ ಕೊರೊನಾ ನಿರ್ಮೂಲನೆಯಾಗಿಲ್ಲ . ಎಚ್ಚರವಾಗಿದ್ದರೆ ಒಳಿತು. ಮನೆಯಲ್ಲೇ ಇರಿ ಆರೋಗ್ಯವಾಗಿರಿ. ಕಡ್ಡಾಯ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲಿಸಿ ಕೊರೊನಾ ನಿರ್ಮೂಲನೆಗೆ ಕೈ ಜೋಡಿಸಿ.

Facebook Comments

Sri Raghav

Admin