ಕೋಟೆ ನಾಡು ಚಿತ್ರದುರ್ಗದಲ್ಲಿ ತಬ್ಲಿಘೀಗಳ ಕಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಮೇ 9- ಹಸಿರು ವಲಯ ಎಂದೇ ಗುರುತಿಸಿಕೊಂಡಿದ್ದ ಕೋಟೆ ನಾಡಿಗೂ ತಬ್ಲಿಘೀಗಳು ಕಂಟಕರಾಗಿದ್ದಾರೆ. ಮೂರು ದಿನಗಳ ಹಿಂದೆ ಅಹಮದಾಬಾದ್ ನಿಂದ ಕಾರ್ಮಿಕರೆಂದು ಹೇಳಿಕೊಂಡು ಬಂದ 30 ಜನ ತಬ್ಲಿಘೀಗಳಲ್ಲಿ 18 ಮಂದಿ ತುಮಕೂರು ಮತ್ತು 15 ಮಂದಿ ಚಿತ್ರದುರ್ಗ ದವರೆಂದು ಗುರುತಿಸಿ ಅವರನ್ನು ಜಿಲ್ಲಾಡಳಿತ ಕ್ವಾರಂಟೈನ್‍ನಲ್ಲಿ ಇಟ್ಟಿತ್ತು.

ಕ್ವಾರಂಟೈನ್‍ನಲ್ಲಿಡಲಾಗಿದ್ದ 15 ಜನರ ರಕ್ತವನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದ್ದು, ಕ್ವಾರಂಟೈನ್‍ನಲ್ಲಿಡಲಾಗಿದ್ದ 15 ತಬ್ಲಿಘೀಗಳಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕೋಟೆ ನಾಡ ಜನರಲ್ಲಿ ನಡುಕ ಸೃಷ್ಟಿಸಿದೆ.

ಚಿತ್ರದುರ್ಗದಲ್ಲಿ ಸೋಂಕು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ನಮ್ಮ ಈ ಕಾರ್ಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ಚಿತ್ರದುರ್ಗದ ಅಭೇದ್ಯ ಕಲ್ಲಿನ ಕೋಟೆಯನ್ನು ಭೇದಿಸಿ ಒಳ ನುಗ್ಗಿದ ಕೊರೊನಾ ಮಾಹಾಮಾರಿಯನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಹಾಗೂ ಜಿಲ್ಲಾಡಳಿತ ಸಜ್ಜುಗೊಂಡಿದೆ.

Facebook Comments

Sri Raghav

Admin