ಹುಬ್ಬಳ್ಳಿ ಮಂದಿಗೆ ಶುರುವಾಯ್ತು ಹೊಸ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ : ಹುಬ್ಬಳ್ಳಿಯ ಮಂದಿಗೆ ಇಂದು ಆತಂಕ ಮತ್ತಷ್ಟು ಜಾಸ್ತಿಯಾಗಿದೆ. ಕಾರಣ ಹುಬ್ಬಳ್ಳಿಯ ವಿವಿಧ ಕಡೆ ರೋಗಿ ನಂಬರ್ 236 ಆಹಾರ ಧಾನ್ಯ ಕಿಟ್ ಹಂಚಿದ್ದ…! ಆತನಿಂದ ಸ್ಮಶಾನ ಕಾವಲುಗಾರನಾಗಿರೊನಿಗೋ ಸೋಂಕು ತಗುಲಿ ಇದೀಗ ರೋಗಿ ನಂಬರ್ 363. ಎಂದು ಗುರುತಿಸಲಾಗಿದೆ.

ಆತನೊಂದಿಗೆ ಆಹಾರ ಧಾನ್ಯ ಹಂಚಿದ ಹಿನ್ನಲೆ ಇತನಿಗೂ ಕೊರೊನಾ ವಕ್ಕರಿಸಿದೆ. ಮಾಚ್9 27 ರಂದು ಹುಬ್ಬಳ್ಳಿಯ ಡಾಕಪ್ಪ ವೃತ್ತದಿಂದ ಕಾಳಮ್ಮನ ಅಗಸಿಯವರೆಗೆ ಆಹಾರ ದಾನ್ಯ ಹಂಚಿದ್ರು ಪುಣ್ಯಾತ್ಮರು…! ಹಾಗಾದ್ರೆ ಪ್ರೀಯಾಗಿ ಸಿಕ್ಕಿತು ಅಂತ ಆಹಾರ ಕಿಟ್ ಪಡೆದ ಬಡಪಾಯಿಗಳ ಗತಿ ಏನಪ್ಪ ದೇವ್ರೆ ಎಂಬ ಆತಂಕ ಇದೀಗ ಶುರುವಾಗಿದೆ.

ಇದೀಗ ಜಿಲ್ಲಾಡಳಿತ ಆತನೊಂದಿಗೆ ಕೆಲಸಕ್ಕಿದ್ದ ಇಬ್ಬರನ್ನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವಂತದ್ದು, ಇದೀಗ ಯಾರ‍್ಯಾರು ಆ ಸೋಂಕಿತರಿಂದ ಆಹಾರ ಧಾನ್ಯ ಕಿಟ್ ಪಡಿದಿದ್ರೋ ಅವರನ್ನೆಲ್ಲಾ ಪತ್ತೆಹಚ್ಚಿ ಅವನ್ನು ಪರೀಕ್ಷೆಗೆ ಒಳಪಡಿಸ ಬೇಕೆಂದು ಧಾರವಾಡ ಜಿಲ್ಲಾಧಿಕಾರಿ ದೀಪಾಚೋಳನ್ ಸೂಚಿಸಿದ್ದಾರೆ. ಒಟ್ಟಾರೆ ಹುಬ್ಬಳ್ಳಿ ಮಂದಿ ಇನ್ನಾದ್ರೂ ಹೆಚ್ಚೆತ್ತುಕೊಳ್ಳದಿದ್ದಲ್ಲಿ ಇಂತಹ ಪ್ರಕರಣಗಳು ಮತ್ತಷ್ಟು ಜಾಸ್ತಿ ಆಗೋದ್ರಲ್ಲಿ ಅನುಮಾನವೇ ಇಲ್ಲಾ..!

Facebook Comments

Sri Raghav

Admin