24 ಗಂಟೆಯಲ್ಲಿ ಮತ್ತೆ 62 ಸಾವಿರ ಮಂದಿಗೆ ಕೊರೋನಾ..!
ನವದೆಹಲಿ,ಜೂ.19-ಕಳೆದ 24 ಗಂಟೆಗಳಲ್ಲಿ 62480 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 2,97,62,793ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ನಿನ್ನೆಯಿಂದ 1587 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3,83,490ಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ.
ಕೊರೊನಾ ಚೇತರಿಕೆ ಪ್ರಮಾಣ ಶೇ.96ಕ್ಕೆ ಹೆಚ್ಚಿರುವ ಹಿನ್ನಲೆಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ ಎಂಟು ಲಕ್ಷದೊಳಕ್ಕೆ ಕುಸಿದಿದೆ. ದೇಶದ್ಯಾಂತ ಸರಿ ಸುಮಾರು 39ಕೋಟಿ ಮಂದಿಯನ್ನು ತಪಾಸಣೆಗೊಳಪಡಿಸಿರುವುದರಿಂದ ಕೊರೊನಾ ಪಾಸಿಟಿವಿಟಿ ಶೇ.3.24ಕ್ಕೆ ಕುಸಿದಿದ್ದರೆ ವಾರದ ಪಾಸಿಟಿವಿಟಿ ಶೇ.3.80ಗೆ ಕುಸಿದಿದೆ.
ಕಳೆದ 36 ದಿನಗಳಿಂದ ಹೊಸ ಸೋಂಕು ಪ್ರಕರಣಗಳಿಗಿಂತ ಕೊರೊನಾದಿಂದ ಚೇತರಿಕೆಯಾಗುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. 2,97 ಕೋಟಿ ಮಂದಿ ಸೋಂಕಿತರ ಪೈಕಿ ಈಗಾಗಲೇ 2,85 ಕೋಟಿಗೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಆದರೆ ಕೊರೊನಾ ಸಾವಿನ ಪ್ರಮಾಣ ಶೇ.1.29ಕ್ಕೆ ಏರಿಕೆಯಾಗಿರುವುದು ತುಸು ಆತಂಕಕಾರಿಯಾಗಿದೆ.