ಕ್ರೂರಿ ಕೊರೋನಾ ವಿಚಾರದಲ್ಲಿ ಇಲ್ಲೊಂದಿದೆ ಸಮಾಧಾನಕರ ಸುದ್ದಿ…!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಕೊರೋನಾ ವೈರಾಸ್ ಜಗತ್ತಿನಾದ್ಯಮತ ಎಗ್ಗಿಲ್ಲದೇ ಸಾಗಿರುವ ನಡುವೆಯೇ ಭಾರತ ನೆಮ್ಮದಿಯ ನಿಟ್ಟುಸಿರು ಬಿಡವಂತಹ ಸುದ್ದಿ ಇದೆ. ಭಾರತದ ಅರ್ಧದಷ್ಟು ಜಿಲ್ಲೆಗಳಲ್ಲಿ ಸೋಂಕಿನ ಲವಲೇಶವೂ ಈವರೆಗೆ ಕಾಣದಿರುವುದೇ ಸಮಾಧಾನ ತರುವ ಸಂಗತಿ ಆಗಿದೆ.

ಹೌದು 2019 ಸರಕಾರಿ ದಾಖಲೆಗಳ ಪ್ರಕಾರ ದೇಶದಲ್ಲಿ ಒಟ್ಟು 718 ಜಿಲ್ಲೆಗಳಿವೆ. ಈ ಪೈಕಿ 400 ಜಿಲ್ಲೆಗಳಲ್ಲಿ (ಅರ್ಧಕ್ಕಿಂತ ಹೆಚ್ಚು) ಕೊರೋನಾ ಸುಳಿವೇ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.ಗಮನಿಸಬೇಕಾದ ಇನ್ನೊಂದ ವಿಚಾರವೆಂದರೇ ದೇಶದಲ್ಲಿ ಈವರೆಗೆ ದಾಖಲಾಗಿರುವ ಪ್ರಕರಣಗಳ ಬಹುಪಾಲು (ಶೇ. 80) 62 ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದೆ ಎಂದು ಮಾಹಿತಿ ತಿಳಿಸಿದೆ.

ಮಹಾನಗರಗಳೂ ಸೇರಿದಂತೆ ಅನೇಕ ರಾಜ್ಯಗಳನ್ನು ಬಾಧಿಸುತ್ತಿರುವ ಈ ಸೋಂಕಿನಿಂದ ಈವರೆಗೆ ದೇಶದ ಅರ್ಧಕ್ಕೂ ಹೆಚ್ಚಿನ ಜಿಲ್ಲೆಗಳು ಮುಕ್ತವಾಗಿವೆ. ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದು ಅವರಲ್ಲಿ 400ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದರೂ ಇನ್ನೂ ದೇಶದ ಅರ್ಧ ಭಾಗದ ಜನಕ್ಕೆ ಇದರ ಪ್ರಕೋಪ ತಟ್ಟಿಲ್ಲ ಎಂಬುದೇ ನಿರಾಳ ತರುವ ಸಮಾಚಾರವಾಗಿದೆ.

ಈ ಮಧ್ಯೆ ದೇಶದಲ್ಲಿ ಈಗಿರುವ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕೊರೋನಾ ವಿರುದ್ಧ ಹೇರಲಾಗಿರುವ ಲಾಕ್‌ಡೌನ್‌ ಸಂಪೂರ್ಣವಾಗಿ ಹಿಂಪಡೆಯುವುದು ಅಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಇನ್ನೂ ದೂರ ಸಾಗಬೇಕಿದೆ. ಈಗಿರುವ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಸಡಿಲಿಸುವುದು ಕಷ್ಟದ ಕೆಲಸ ಎಂದು ಪ್ರಧಾನಿ ಸಂಸದರ ಸಭೆಯಲ್ಲಿ ಹೇಳಿದ್ದಾರೆ.

# ಭಾಗಶಃ ತೆರವಿಗೆ ಶಿಫಾರಸು :
ಇದೇ ವೇಳೆ ಕೊರೋನಾ ಮಾರಿಯನ್ನು ಕಟ್ಟಿಹಾಕಲು ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ನಿಗದಿತ ಅವಧಿಯ ನಂತರ ಭಾಗಶಃ ಸಡಿಲಗೊಳಿಸಲು ವಿಶೇಷ ಕಾರ್‍ಯಪಡೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಮುಂದಿನ ಆರು ತಿಂಗಳ ವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಎಸಿ (ಹವಾ ನಿಯಂತ್ರಣ) ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು ಎಂದು ಹೇಳಿರುವ ಕಾರ್‍ಯಪಡೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು ಎಂದಿದೆ.  ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕಿದ್ದು, ಏಪ್ರಿಲ್ 30ರವರೆಗೆ ಎಸಿ ಬಸ್ ಮತ್ತು ಮೆಟ್ರೋ ಸೇವೆ ಸ್ಥಗಿತಕ್ಕೆ ಶಿಫಾರಸು ಮಾಡಲಾಗಿದೆ.

ಇನ್ನು ಖಾಸಗಿ ವಾಹನಗಳ ಓಡಾಟಕ್ಕೂ ನಿಯಂತ್ರಣದ ಅಗತ್ಯ ಇರುವುದರಿಂದ ಈ ಹಿಂದೆ ದಿಲ್ಲಿಯಲ್ಲಿ ಜಾರಿಗೆ ತರಲಾಗಿದ್ದ ಸರಿ-ಬೆಸೆ ಸಂಖ್ಯೆಯ ಸೂತ್ರವನ್ನು ಅನುಸರಿಸಬೇಕು ಎಂದೂ ಸಮಿತಿ ಹೇಳಿದೆ.

Facebook Comments

Sri Raghav

Admin