ಮಂಡ್ಯ ಜಿಲ್ಲೆ ಕೋವಿಡ್ -19 ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ : ಸಚಿವ ನಾರಾಯಣಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು-13 : ಮಂಡ್ಯ ಜಿಲ್ಲೆ ಕೋವಿಡ್ -19 ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಕೊರೋನಾದಿಂದ ಯಾವುದೆ ಸಾವು ಸಂಭವಿಸಿಲ್ಲ. ಮುಂಜಾಗೃತಾ ಕ್ರಮ ವಹಿಸಿದ್ದರಿಂದ ಕೊರೊನಾ ನಿಯಂತ್ರಣದಲ್ಲಿದೆ ಎಂದು ಇಂದು ನಡೆದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಯಡಿಯೂರಪ್ಪ ಅವರಿಗೆ ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರತಿನಿತ್ಯ 500-600 ಜನರ ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. ಈ ವರೆಗೆ 22 ಸಾವಿರಕ್ಕು ಹೆಚ್ಚು ಟೆಸ್ಟ್ ಮಾಡಲಾಗಿದೆ. ಆರಂಭದ ದಿನಗಳಲ್ಲಿ ಮುಂಬೈ ಹಾಗೂ ಇತರ ರಾಜ್ಯಗಳಿಂದ ಅತಿ ಹೆಚ್ಚು ಜನ ಬಂದ ಕಾರಣ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಿನ ಪ್ರಮಾಣದಲ್ಲಿತ್ತು.

ಕಟ್ಟುನಿಟ್ಟಿನ ಕ್ರಮ ವಹಿಸಿ, ಕ್ವಾರಂಟೈನ್ ಮಾಡಿದ ಕಾರಣ ಎಲ್ಲರು ಆರೋಗ್ಯವಾಗಿ ಮನೆಗೆ ಮರಳಿದ್ದಾರೆ. ಈಗ 125 ಪ್ರಕರಣಗಳು ಮಾತ್ರ ಆಕ್ಟಿವ್ ಆಗಿವೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸಿಎಂ ಗೆ ಮಾಹಿತಿ ನೀಡಿದ್ದಾರೆ. ಉಸ್ತುವಾರಿ ಸಚಿವ ನಾರಾಯಣಗೌಡ ವಾರಕ್ಕೆ ಮೂರು ಸಭೆ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮಾಡಲಾಗಿದೆ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣದಲ್ಲಿ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ವಾಡಿಕೆಗಿಂತ 28% ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿದೆ. ಹೀಗಾಗಿ ಕೆಆರ್ ಎಸ್ ಡ್ಯಾಂ 104 ಅಡಿ ತಲುಪಿದೆ.

ಕಳೆದ ವರ್ಷ ಈ ದಿನ 89 ಅಡಿ ನೀರಿತ್ತು. ಬಿತ್ತನೆ ಕಾರ್ಯ ಕೂಡ ಚುರುಕಾಗಿದೆ. ಕೃಷಿ ಕಾರ್ಯಕ್ಕೆ ಯಾವುದೆ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಈ ವೇಳೆ ಜಿಲ್ಲೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು, ನರ್ಸ್ ಗಳ ಅಗತ್ಯತೆ ಇದೆ ಸಚಿವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

# ಹೇಗಿದ್ದಾರೆ ನಮ್ಮ ಕಾಮೇಗೌಡರು.
ವಿಡಿಯೊ ಸಂವಾದದ ವೇಳೆ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯ ರೈತ ಕಾಮೇಗೌಡರ ಆರೋಗ್ಯ ವಿಚಾರಿಸಿದ್ರು. ಸಚಿವರು, ಜಿಲ್ಲಾಧಿಕಾರಿಗಳಲ್ಲಿ ಕಾಮೇಗೌಡರ ಆರೋಗ್ಯದ ಬಗ್ಗೆ, ಅವರಿಗೆ ಮನೆ ಕಟ್ಟಿಸಿಕೊಡುವುದರ ಬಗ್ಗೆ ಮತ್ತು ಪೆನ್ಶನ್ ಕೊಡಿಸುವುದರ ಬಗ್ಗೆ ಸಿಎಂ ವಿಚಾರಿಸಿದ್ರು. ಎಲ್ಲ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ಸಚಿವರು ಸಿಎಂ ಗೆ ತಿಳಿಸಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಹಾಗೂ ಜಿಲ್ಲೆಯ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ನಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin