ಮೈಸೂರಿನಲ್ಲಿ ಕೊರೋನಾದಿಂದ ಗುಣಮುಖರಾದ 7 ಮಂದಿ ಡಿಸ್ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು ಏಪ್ರಿಲ್. 12 . ಕೊರೋನಾ ವೈರಸ್ನಿಂದ ಬಳಲುತ್ತಿದ್ದ 7 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ. ಏಳು ಮಂದಿ ಪೈಕಿ ಆರು ಮಂದಿ ಜುಬೀಲಂಟ್ ಕಾರ್ಖಾನೆ ಸಿಬ್ಬಂದಿ ಇನ್ನೊಬ್ಬರು ವಿದೇಶದಿಂದ ವಾಪಸಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೈಸೂರಿನಲ್ಲಿ ಒಟ್ಟು 47 ಮಂದಿಗೆ ಕೋರೋಣ ವೈರಸ್ ತಗುಲಿತ್ತು ಒಂಬತ್ತು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇವರೆಲ್ಲ ಗುಣಮುಖರಾಗಲು ಶ್ರಮಿಸಿದ ವೈದ್ಯರು, ನರ್ಸುಗಳು, ಪೋಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin