ತುಮಕೂರು ಜಿಲ್ಲೆ ಜನರಿಗೆ ಬಿಗ್ ರಿಲೀಫ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಏ.17- ದೇಶಾದ್ಯಂತ ಕೋರಾನಾ ಸೋಂಕು ಎಲ್ಲೆಡೆ ಅಟ್ಟಹಾಸ ದಿಂದ ಮೆರೆಯುತ್ತಿದ್ದ ರೆ ತುಮಕೂರಿನಲ್ಲಿ ಕಳೆದ 28 ದಿನಗಳ ಹಿಂದೆ ಶಿರಾದಲ್ಲಿ ವೃದ್ದನೊಬ್ಬ ಮೃತಪಟ್ಟಿದ್ದ ಈತನ ಹಿಸ್ಟರಿ ನೋಡಿ ತುಮಕೂರು ಜಿಲ್ಲಾಡಳಿತ ಬೆಚ್ತಿಬಿದ್ದಿತ್ತು .ದೆಹಲಿಯ ಜಮಾತ್ ಹೋಗಿ ಬಂದಿದ್ದು ಹಾಗೂ ಮೂರು ಜನ ಪತ್ನಿಯರು 16 ಜನ ಮಕ್ಕಳುನ್ನು ಹೊಂದಿದ್ದ ವೃದ್ದ ಮೃತಪಟ್ಟ ನಂತರ ಅವರ ಕುಟುಂಬದವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರೆ ಅದೃಷ್ಟವಶಾತ್ ಅತನ ಮಗನಿಗೆ ಪಾಜಿಟೀವ್‍ಎಂದು ವರದಿ ಬಂದಿತು ಅದರೆ ಆ ಬಾಲಕ ಈಗ ಗುಣ ಮುಖನಾಗಿದ್ದಾನೆ. ಇದು ತುಮಕೂರು ಜಿಲ್ಲಾಡಳಿತ ಹಾಗೂ ಶಿರಾದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯಲ್ಲಿ ಈಗ 480 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಹೋಂ ಕ್ವಾರಟೇನ್ 49 ಜನರು ಇದ್ದಾರೆ.ಅಸ್ಪತ್ರೆಯ ಐಸೋಲೋಟೇಡ್ ನಲ್ಲಿ 274 ಮಂದಿ ಇದ್ದಾರೆ. 28 ದಿನ ಹೋಂ ಕ್ವಾರಂಟೇನ್ 321 ಮಂದಿ ಮುಗಿಸಿದ್ದಾರೆ. 556 ಮಂದಿಯ ಸ್ಯಾಂಪಲ್ ನ್ನು ಲ್ಯಾಬ್ ಗೆ ಕಳುಹಿಸಲಾಗಿದೆ. ಇದರಲ್ಲಿ 384 ಮಂದಿಯ ರಿಜಲ್ಟ್ ನೆಗೆಟೀವ್ ಬಂದಿದೆ.

ಮೃತ ವೃದ್ದ ಸೇರಿ ಅತನ ಮಗನಿಗೆ ಪಾಜಿಟೀವ್ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರೆಡು ಎಂದು ದಾಖಲಾಗಿತ್ತು ಅದರೆ ಈಗ ಬಾಲಕನಿಗೆ ನೆಗೆಟೀವ್ ಬಂದ ಹಿನ್ನೆಲೆಯಲ್ಲಿ ಈಗ ಪ್ರಕರಣ 1 ಆಗಿದೆ ಇದು ಜಿಲ್ಲಾಡಳಿತ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೋರಾನ ವೈರಸ್ ಸೋಂಕು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣಿ, ಸೇರಿದಂತೆ ಜಿಲ್ಲೆಯ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಚಂದ್ರಕಲಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ರಾದ ವೀರಭದ್ರಯ್ಯ, ವಿಶೇಷವಾಗಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯಾದ ಕೋನಾ ವಂಶಿ ಕೃಷ್ಣ ಸೇರಿದಂತೆ ಜಿಲ್ಲೆಯ ಪೊಲಿಸ್ ಅಧಿಕಾರಿಗಳು, ಸಿಬ್ಬಂದಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು ಈ ಎಲ್ಲಾ ಪರಿಣಾಮ ಜಿಲ್ಲೆಯಲ್ಲಿ ಶಿರಾ ಒಂದು ಪ್ರಕರಣ ಬಿಟ್ಟರೆ ಯಾವುದು ಇಲ್ಲಾ.

# ಮೈ ಮರೆಯುವಂತ್ತಿಲ್ಲ:
ಕೋರಾನಾ ಸೋಂಕು ಪತ್ತೆಯಾಗಿಲ್ಲವೆಂದು ಯಾರೂ ಕೂಡ ಮೈಮರೆಯುವಂತಿಲ್ಲ. ಜಿಲ್ಲಾಡಳಿತ ಲಾಕ್ ಡೌನ್ ಇನ್ನಷ್ಟು ಕಠಿಣ ಕ್ರಮವನ್ನು ಕೈಗೊಂಡರೆ ಜಿಲ್ಲೆಯಲ್ಲಿ ಸೋಂಕು ಬಾರದಂತೆ ತಡೆಯಲು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಜನರ ಅಭಿಪ್ರಾಯವಾಗಿದೆ

Facebook Comments

Sri Raghav

Admin