ಭಾರತ ಲಾಕ್ ಡೌನ್ ನಂತರ ತುಮಕೂರಲ್ಲಿ ಇಬ್ಬರ ಸಾವು, ಜನರಲ್ಲಿ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು : ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತ ಲಾಕ್ ಡೌನ್ ಎಂದು ಘೋಷಣೆ ಮಾಡಿದ ನಂತರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿರುವದರಿಂದ ಜಿಲ್ಲೆಯ ಜನರಲ್ಲಿ ಆತಂಕ ಎದುರಾಗಿದೆ. ಮಂಗಳವಾರದಂದು ಗುಬ್ಬಿ ತಾಲೂಕಿನ ಸಿಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಒಬ್ಬ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದು ಸ್ಥಿತಿ ಗಂಭೀರವಾಗಿದೆ.

ಹಿಂದಿಯಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ರವಾನಿಸಲು ಮುಂದಾಗುತ್ತಾರೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಯ ವೈದ್ಯರುಗಳು ನಿರಾಕರಿಸಿ ಇಲ್ಲಿಗೆ ಬೇಡ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡುತ್ತಾರೆ ಕೂಡಲೇ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದುವಷ್ಟರಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಆಂಬುಲೆನ್ಸ್ ಚಾಲಕ ಶವವನ್ನು ಬದುಕಿದ್ದಾನೆಂದು ಆಸ್ಪತ್ರೆಯಲ್ಲಿ ಇಟ್ಟು ವಾಪಸ್ ಬಂದಿದ್ದಾನೆ.

ಈ ವಿಷಯ ತಿಳಿದ ಕೂಡಲೇ ಸಿದ್ದಗಂಗಾ ಆಸ್ಪತ್ರೆಯ ಆಡಳಿತ ಮಂಡಳಿಯವರು ಆಸ್ಪತ್ರೆಯನ್ನು ಶುಚಿತ್ವ ಗೊಳಿಸಿದ್ದಾರೆ. ಈ ವಿಷಯ ಕಾಳ್ಗಿಚ್ಚಿನಂತೆ ಹರಡಿ ತುಮಕೂರಿನ ನಗರದಲ್ಲಿ ಕೋರೋನಾ ವೈರಾಣು ವಿಗೆ ಯುವಕ ಬಲಿಯಾಗಿದ್ದಾನೆ ಎಂದು ಸುದ್ದಿ ಹಬ್ಬಿತ್ತು ಆದರೆ ಈ ವಿಷಯವನ್ನ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ವಿದ್ಯಾರ್ಥಿ ಬೇರೆ ಕಾರಣಕ್ಕೆ ಮೃತಪಟ್ಟಿದ್ದಾನೆ ಅದಕ್ಕೂ ಕವನಕ್ಕೂ ಸಂಬಂಧ ಇಲ್ಲ ಆದರೂ ಆತನ ಗಂಟಲಿನ ಲೋಳೆಯನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು .

ದೆಹಲಿಯಿಂದ ಶಿರಾಕ್ಕೆ ಬಂದಿದ್ದ ಪೀರ್ ಸಾಬ್ ಎಂಬುವರು ಆರೋಗ್ಯದಲ್ಲಿ ಏರುಪೇರಾಗಿದ್ದು ಅಲ್ಲದೆ ಈತನ ಶಿರಾದಲ್ಲಿ ನಿಗಾಘಟಕದಲ್ಲಿ ಇಡಲಾಗಿತ್ತು.ಇತರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ .

ಅದರೆ ಶಿರಾದ ಅವರ ಸಂಬಂಧಿಕರು ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಮೃತಪಟ್ಟರ ಬಹುದು ಎಂದು ಅನುಮಾನಗೊಂಡ ಶವವನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಯಾವುದೋ ಕಾರಣಕ್ಕ ಮೃತಪಟ್ಟರೆ ಅದು ಕೊರೊನಾ ವೈರಸ್ ರೋಗಕ್ಕೆ ತುತ್ತಾಗಿ ಮೃತಪಟ್ಟರ ಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

# ಹಲವು ಗ್ರಾಮಗಳಲ್ಲಿ ಸ್ವಯಂ ನಿರ್ಬಂಧ ಹೇರಿಕೂಂಡ ಗ್ರಾಮಸ್ಥರು :
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೊನನಕಲ್ಲು ಗ್ರಾಮ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಗ್ರಾಮಸ್ಥರ ಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಸ್ವಯಂ ನಿರ್ಬಂಧ ಹೇರಿ ಕೊಂಡು ಬೇರೆ ಗ್ರಾಮದವರು ನಮ್ಮೂರಿಗೆ ಬರಬಾರದು ಎಂಬ ಹಿನ್ನೆಲೆಯಲ್ಲಿ ನಾಕಾಬಂದಿ ಮಾಡಿಕೊಂಡು ಬೇಲಿಯನ್ನು ಹಾಕಲಾಗಿದೆ. ಗುಬ್ಬಿ ತಾಲೂಕು ಸೇರಿದಂತೆ ಶಿರ ಚಿಕ್ಕನಾಯಕನಹಳ್ಳಿ ತಿಪಟೂರಿನಲ್ಲಿ ಯು ಕೂಡ ಹಲವು ಗ್ರಾಮಗಳಲ್ಲಿ ನಾಕ ಬಂದಿ ಮಾಡಿಕೂಂಡಿದ್ದಾರೆ .ಇದು ಜನರ ಮೆಚ್ಚುಗೆಗೆ ವ್ಯಕ್ತವಾಗಿದೆ ಬೇರೆ ಗ್ರಾಮದವರು ನಮ್ಮ ಗ್ರಾಮಕ್ಕೆ ಬರಬಾರದು ಎಂಬ ಹಿನ್ನೆಲೆಯಲ್ಲಿ ಗ್ರಾಮಗಳ ಸುತ್ತಮುತ್ತ ಇರುವ ರಸ್ತೆಗಳನ್ನು ಬಂದ ಮಾಡಿ ಕೊಳ್ಳಲಾಗಿದೆ.

# ಯುಗಾದಿ ಹಬ್ಬದ ವರ್ಷದಡಕು ಮೀನು ಮಾಂಸ ವ್ಯಾಪಾರ ಭರ್ಜರಿ :
ಯುಗಾದಿ ಹಬ್ಬದ ಎರಡನೇ ದಿನವಾದ ವರ್ಷದಡಕು ‌ ಹಿನ್ನಲೆಯಲ್ಲಿ ಮಾಂಸ . ಮೀನು,ಮಾರಾಟ ಮಾಡಲು ಸ್ಥಳೀಯ ಸಂಸ್ಥೆಗಳು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶವನ್ನು ನೀಡಲಾಗಿದೆ ಆದರೆ ಖರೀದಿಗೆ ಬರುವವರು ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದ್ದರೂ ಆದೇಶವನ್ನು ಧಿಕ್ಕರಿಸಿ ಜನರು ಯಾವುದೇ ರೀತಿಯ ಮಾತುಗಳನ್ನು ಧರಿಸದೆ ಗುಂಪುಗುಂಪಾಗಿ ಸೇರಿಕೊಂಡು ಭಾರತ ಲಾಕ್ ಡೌನ್ ನಿಯಮವನ್ನು ಗಾಳಿಗೆ ತೂರಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಅಂಗಡಿಗೆ ತೆರಳಿ ಅಂಗಡಿಗಳನ್ನು ಮುಚ್ಚುವಂತೆ ಖಡಕ್ ಆದೇಶವನ್ನು ನೀಡಿದ್ದಾರೆ.

ತುಮಕೂರಿನಲ್ಲಿ ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನ ವಂಶಿಕೃಷ್ಣ, ಜಿಲ್ಲಾ ಕುಟುಂಬ ಇಲಾಖೆಯ ಚಂದ್ರಕಲಾ,ಜಿಲ್ಲಾ ಶಸ್ತ್ರ ಚಿಕಿತ್ಸಕ ವೀರಭದ್ರಯ್ಯ, ಸೇರಿದಂತೆ ವೈದ್ಯರು, ನರ್ಸ್ ಗಳು ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಗಲು ಇರುಳು ಶ್ರಮಿಸುತ್ತಿದ್ದಾರೆ.

# ಕಟ್ಟೆಚ್ಚರ :
ಭಾರತದ ಡೌಟ್ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿರುವ ದಲ್ಲದೆ ಕಾನೂನನ್ನ ಉಲ್ಲಂಘನೆ ಮಾಡಿ ರಸ್ತೆಗಿಳಿದರು ಅವರಿಗೆ ಬಿಸಿ ಮುಟ್ಟಿಸಲಾಗುತ್ತೀದೆ . ಜಿಲ್ಲೆಯ ಅಯಾ ಅಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಡಿವೈಎಸ್ಪಿ ಗಳು, ವೃತ್ತ ನಿರೀಕ್ಷಕರ ಗಳು, ಸಬ್ ಇನ್ಸ್ಪೆಕ್ಟರ್ ಗಳು, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು , ಸೇರಿದಂತೆ ಎಲ್ಲರೂ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ ಅಲ್ಲದೆ ಕೆಲವು ಕಡೆ ಮುಲಾಜಿಲ್ಲದೆ ಲಾಠಿ ಪ್ರಹಾರ ನಡೆಸಿ ಜನರನ್ನು ಮನೆಗೆ ಹೋಲಿಸುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ವೈರಸ್ಸನ್ನು ಹಿಂದಕ್ಕೆ ಓಡಿಸಲು ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಆದರೆ ಸಾರ್ವಜನಿಕರು ಜನರು ಸಹಕಾರ ಅತ್ಯಗತ್ಯವಾಗಿದೆ ಜನರು ಆದೇಶವನ್ನು ಉಲ್ಲಂಘಿಸಿ ಪಕ್ಕದ ಮನೆ ಬಿಟ್ಟು ಹೊರಗಡೆ ಬಂದು ಗುಂಪುಗುಂಪಾಗಿ ಸೇರಿದರೆ ಅದು ಭಯಂಕರ ಕೊರೊನಾ ವೈರಸ್ ಅಟ್ಟಹಾಸದಲ್ಲಿ ಜನರೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಹಾಗಾಗಿ ಪ್ರಧಾನಮಂತ್ರಿಗಳು ಪದೇಪದೇ ಕೈಮುಗಿದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ ಆದರೂ ಜನರು ಪದೇ ಪದೇ ಬೀದಿಗೆ ಬರುತ್ತಿರುವುದು ಆತಂಕದ ವಿಚಾರವಾಗಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ

Facebook Comments

Sri Raghav

Admin