24 ಗಂಟೆಯಲ್ಲಿ 1.31 ಲಕ್ಷ ಮಂದಿಗೆ ಪಾಸಿಟಿವ್, 780 ಸಾವು..! ಭಾರತ ಈಗ ಕೊರೋನಾ ಹಾಟ್‌ಸ್ಪಾಟ್.!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.9-ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ಲಕ್ಷದ ಗಡಿ ದಾಟುತ್ತಲೆ ಇರುವ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಲೆ ಇಲ್ಲ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,31,968 ಲಕ್ಷ ಸೋಂಕು ಕಾಣಿಸಿಕೊಂಡಿದೆ. ಇದು ಇದುವರೆಗಿನ ಅತ್ಯಂತ ಹೆಚ್ಚು ಸೋಂಕು ಪ್ರಕರಣವಾಗಿರುವುದು ವಿಶೇಷ.

ದಿನೇ ದಿನೇ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಒಟ್ಟು ಸೋಂಕಿತರ ಸಂಖ್ಯೆ 1,30 ಕೋಟಿ ಗಡಿ ದಾಟಿದೆ. ಸೋಂಕು ಹೆಚ್ಚಳದ ಜತೆಗೆ ಸಾವಿನ ಸಂಖ್ಯೆಯು ಕ್ರಮೇಣವಾಗಿ ಏರಿಕೆಯಾಗುತ್ತಿರುವುದರಿಂದ ಭಾರತ ಇನ್ನ ಕೊರೊನಾ ಕಬಂಧ ಬಾಹುವಿನಿಂದ ಹೊರ ಬಂದಿಲ್ಲ ಎನ್ನುವುದರ ದ್ಯೋತಕವಾಗಿದೆ.

ನಿನ್ನೆಯಿಂದ ಇದುವರೆಗೂ 780 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ 1,67,642 ಲಕ್ಷ ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖವಾಗಿದೆ. ಸೋಂಕು ಉಲ್ಬಣಗೊಳ್ಳುತ್ತಲೆ ಇರುವುದರಿಂದ ಚೇತರಿಕೆ ಪ್ರಮಾಣವೂ ಗಣನೀಯವಾಗಿ ಕುಸಿತಗೊಳ್ಳುತ್ತಲೆ ಇದೆ.

Facebook Comments