ಒಂದೇ ದಿನ 9,304 ಮಂದಿಗೆ ಪಾಸಿಟಿವ್, 260 ಸಾವು..! ಭಾರತದಲ್ಲಿ ಕೊರೋನಾ ಕೇಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 4- ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಮತ್ತಷ್ಟು ಉಲ್ಬಣಗೊಂಡಿದ್ದು, ಭಾರತೀಯರು ಭಯಭೀತಿಯಿಂದ ತಲ್ಲಣಗೊಂಡಿದ್ದಾರೆ. 24 ತಾಸುಗಳ ಅವಧಿಯಲ್ಲಿ ದಾಖಲೆ ಮಟ್ಟದಲ್ಲಿ ಅಂದರೆ 9.304 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 260 ರೋಗಿಗಳು ಬಲಿಯಾಗಿದ್ದಾರೆ.

ಹೆಮ್ಮಾರಿ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ಜೂನ್ ತಿಂಗಳ ನಾಲ್ಕನೆ ದಿನವೂ ಆತಂಕಕಾರಿ ಮಟ್ಟದಲ್ಲಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ.

ಈವರೆಗೆ ಮೃತರ ಸಂಖ್ಯೆ 6,000 ಹಾಗೂ ರೋಗಪೀಡಿತರ ಸಂಖ್ಯೆ 2.17 ಲಕ್ಷ ದಾಟಿದ್ದು, ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ 6,250 ಮತ್ತು ಸೋಂಕು ಬಾಧಿತರ ಸಂಖ್ಯೆ 2.21 ಲಕ್ಷ ತಲುಪುವ ಆತಂಕವಿದೆ. ದೇಶದಲ್ಲಿ ಒಂದೇ ದಿನ 9,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲು.

ಸತತ 14 ದಿನ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ, 7,000ಕ್ಕೂ ಅಧಿಕ ಪಾಸಿಟಿವ್ ಕೇಸ್‍ಗಳು ಪತ್ತೆಯಾದ ಏಳನೆ ದಿನವಾಗಿದ್ದು, ದೇಶದ ಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಸತತ ಐದನೇ ದಿನ 8,000ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ.

24 ತಾಸುಗಳ ಅವಧಿಯಲ್ಲಿ 9,304 (ಮಂಗಳವಾರ 8.910 ಸೋಮವಾರ 8,171, ಭಾನುವಾರ 8,932, ಶನಿವಾರ 8,380, ಶುಕ್ರವಾರ 7.964, ಗುರುವಾರ 7,466, ಬುಧವಾರ 6,566 ಮಂಗಳವಾರ 6,387, ಸೋಮವಾರ 6,535, ಭಾನುವಾರ 6,977, ಶನಿವಾರ 6,767, ಶುಕ್ರವಾರ 6,654, ಮತ್ತು ಗುರುವಾರ 6,088 ಕೇಸ್‍ಗಳು) ಜನರಿಗೆ ಸೋಂಕು ದೃಢಪಟ್ಟಿದೆ.

ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ನಿರಂತರ 14 ದಿನದ ಭಾರೀ ಜಿಗಿತ ಇದಾಗಿದೆ. ಅಲ್ಲದೆ, ಕಳೆದ ಎರಡು ವಾರಗಳಲ್ಲಿ 11 ದಿವಸಗಳಿಂದಲೂ 6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 260 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 6,076ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 2,16,919 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ಗಂಟೆಗಳಲ್ಲಿ ದೇಶದ ವಿವಿಧೆಡೆ ಸಂಭವಿಸಿದ 260 ಮರಣ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 122, ದೆಹಲಿ 50, ಗುಜರಾತ್ 30, ತಮಿಳುನಾಡು 11, ಪಶ್ಚಿಮ ಬಂಗಾಳ 10, ಮಧ್ಯಪ್ರದೇಶ ಉತ್ತರ ಪ್ರದೇಶ ಮತ್ತು ತೆಲಂಗಾಣ ತಲಾ 7, ರಾಜಸ್ಥಾನ 6, ಆಂಧ್ರ ಪ್ರದೇಶ 4 ಹಾಗೂ ಬಿಹಾರ, ಛತ್ತೀಸ್‍ಗಢ, ಜಮ್ಮು-ಕಾಶ್ಮೀರ, ಪಂಜÁಬ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದು ಸಾವು ಪ್ರಕÀರಣ ವರದಿಯಾಗಿದೆ.

ಈವರೆಗೆ ಸಂಭವಿಸಿರುವ 6,075 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದ್ದು, ಮರಣ ಪ್ರಮಾಣ 2,500 ದಾಟಿದೆ. ಆ ರಾಜ್ಯದಲ್ಲಿ ಈವರೆಗೆ 2,587 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ.

74,000ಕ್ಕೂ ಹೆಚ್ಚು ಮಂದಿ ರೋಗ ಪೀಡಿತರಾಗಿದ್ದಾರೆ.  ಎರಡನೆ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 1,122 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ದೆಹಲಿ (606), ಮಧ್ಯಪ್ರದೇಶ (371), ಪಶ್ಚಿಮ ಬಂಗಾಳ (345), ಉತ್ತರ ಪ್ರದೇಶ (229), ರಾಜಸ್ಥಾನ (209), ತಮಿಳುನಾಡು (208), ತೆಲಂಗಾಣ (99), ಆಂಧ್ರಪ್ರದೇಶ (68), ಕರ್ನಾಟಕ(53), ಹಾಗೂ ಪಂಜÁಬ್ (47) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 34, ಬಿಹಾರ 25, ಹರಿಯಾಣ 23, ಕೇರಳ 11, ಉತ್ತರಾಖಂಡ 8, ಒಡಿಶಾ 7, ಹಿಮಾಚಲ ಪ್ರದೇಶ ಚಂಡೀಗಢ ಮತ್ತು ಜಾರ್ಖಂಡ್ ತಲಾ 5, ಅಸ್ಸೋಂ ನಾಲ್ಕು, ಛತ್ತೀಸ್‍ಗಢ 2 ಹಾಗೂ ಪುದುಚೇರಿ, ಲಡಾಕ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 1,06,737ಕ್ಕೇರಿದೆ. ಈವರೆಗೆ 1,04,106 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.47.99ರಷ್ಟು ವೃದ್ಧಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಏಳನೇ ಸ್ಥಾನಕ್ಕೇರಿದೆ. ಒಂಭತ್ತನೇ ಸ್ಥಾನದಲ್ಲಿದ್ದ ಭಾರತ ಫ್ರಾನ್ಸ್, ಜರ್ಮನಿಯನ್ನು ಹಿಂದಿಕ್ಕೆ ಏಳನೇ ಸ್ಥಾನದಲ್ಲಿದೆ.

ಜೂನ್ ಕೊನೆ ವಾರಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಲಿದೆ ಎಂಬ ವರದಿಗಳಿದ್ದು, ಅದಕ್ಕೆ ಮುನ್ಸೂಚನೆಯಾಗಿ ಮೊದಲ ವಾರದಲ್ಲೇ ಹೆಚ್ಚಿನ ಪ್ರಕಣಗಳು ದಾಖಲಾಗುತ್ತಿರುವುದು ಆಘಾತಕಾರಿಯಾಗಿದೆ.

Facebook Comments