24 ಗಂಟೆಯಲ್ಲಿ 31,923 ಮಂದಿಗೆ ಕೊರೋನಾ, 282 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವ ದೆಹಲಿ: ಸೆ,23: ಭಾರತದಲ್ಲಿ ಬುಧವಾರ 31,923 ಮಂದಿಗೆ ಹೊಸ ಕೊವಿಡ್ -19 ಸೋಂಕು ದೃಢ ಪಟ್ಟಿದ್ದು, 282 ಸಾವುಗಳು ಸಂಭವಿಸಿದೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ತಿಳಿಸಿದೆ. 19,675 ಪ್ರಕರಣಗಳು ಕೇರಳದಲ್ಲಿ ವರದಿ ವರದಿಯಾಗಿದ್ದು, ದೇಶದಲ್ಲಿ ಸುಮಾರು 3.01 ಲಕ್ಷ ಸಕ್ರಿಯ ಪ್ರಕರಣಗಳಿವೆ ಮತ್ತು ಕೇರಳದಲ್ಲಿ 1.61 ಲಕ್ಷ ಸಕ್ರಿಯ ಸೋಂಕುಗಳಿವೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 4.46 ಲಕ್ಷಕ್ಕೆ ತಲುಪಿದೆ.

ಪಶ್ಚಿಮ ಬಂಗಾಳ: 683 ಕೊವಿಡ್ ಪ್ರಕರಣಗಳು, 13 ಮಂದಿ ಸಾವು
ಪಶ್ಚಿಮ ಬಂಗಾಳದಲ್ಲಿ ಹೊಸ ಕೊವಿಡ್ -19 ಪ್ರಕರಣಗಳ ಸಂಖ್ಯೆ ಮಂಗಳವಾರ 592 ರಿಂದ ಸ್ವಲ್ಪ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 683 ಪ್ರಕರಣಗಳು ವರದಿಯಾಗಿವೆ. ಒಟ್ಟು 53,63,393 ಪ್ರಕರಣಗಳು ಇಲ್ಲಿವೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 13 ಕೊವಿಡ್ ಸಾವುಗಳನ್ನು ವರದಿ ಆಗಿದ್ದು ಸಾವಿನ ಸಂಖ್ಯೆ 18,691 ಕ್ಕೆ ತಲುಪಿದೆ. ಗುರುವಾರ 687 ಕೊವಿಡ್ ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಚೇತರಿಕೆಯ ಒಟ್ಟು ಸಂಖ್ಯೆ 15,36,978 ಕ್ಕೆ ಏರಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 7,724 ರಷ್ಟಿದೆ.

Facebook Comments