SHOCKING : ಭಾರತದಲ್ಲಿ ಕೊರೋನಾ ರಣಕೇಕೆ..! : ಒಂದೇ ದಿನ 22,771 ಮಂದಿಗೆ ಪಾಸಿಟಿವ್, 442 ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜು.4-ಕಿಲ್ಲರ್ ಕೋವಿಡ್ ವೈರಸ್ ಗಂಡಾಂತರದಿಂದ ತತ್ತರಿಸುತ್ತಿರುವ ಭಾರತದಲ್ಲಿ ದಿನೇ ದಿನೇ ಸೋಂಕು ಮತ್ತು ಸಾವು ಪ್ರಕರಣಗಳು ಅತಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, 24 ತಾಸುಗಳಲ್ಲಿ ಹೊಸ ದಾಖಲೆಯ 23,000 ಸಾಂಕ್ರಾಮಿಕ ರೋಗ ಪ್ರಕರಣಗಳು ವರದಿಯಾಗಿದೆ. ಒಂದೇ ದಿನ 450 ಸಾವುಗಳು ಸಂಭವಿಸಿದೆ.

ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷ 50 ಸಾವಿರ ಹಾಗೂ ಸಾವಿನ ಪ್ರಮಾಣ 19,000 ಸನಿಹದಲ್ಲಿದೆ. ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಸೋಂಕು ಮತ್ತು ಸಾವಿನ ಪ್ರಕರಣ ವರದಿಯಾಗುತ್ತಿರುವ ಭಾರತ ನಾಳೆ ವೇಳೆ ವಿಶ್ವದಲ್ಲಿ ಮೂರನೇ ಸ್ಥಾನಕ್ಕೇರುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ.

ದೇಶದಲ್ಲಿ ಜುಲೈ ತಿಂಗಳ ನಾಲ್ಕನೇ ದಿನವೂ ಆರ್ಭಟ ಅತಂಕಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಇನ್ನೆರಡು ತಿಂಗಳು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಕೊರೊನಾ ನಂಜು ನಾಗಲೋಟದಲ್ಲಿ ಹಬ್ಬುತ್ತಿರುವುದರಿಂದ ಭಾರತೀಯರ ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ.

ಕಳೆದ 24 ತಾಸುಗಳಲ್ಲಿ ಭಯ ಮೂಡಿಸುವ ರೀತಿ ಅಂದರೆ ಸುಮಾರು 23,000 ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ಮೊನ್ನೆ 20,900ಕ್ಕೂ ಹೆಚ್ಚು ಸೋಂಕು ಮತ್ತು 379 ಹೊಸ ಸಾವುಗಳು ಸಂಭವಿಸಿತ್ತು.. ಈ ಅಂಕಿ ಅಂಶಗಳನ್ನು ಗಮನಿಸಿದರೆ ಜುಲೈ ಮತ್ತು ಆಗಸ್ಟ್ ಭಾರತಕ್ಕೆ ಬಾರೀ ಗಂಡಾಂತರ ಎಂಬುದು ಮನವರಿಕೆಯಾಗುತ್ತಿದೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ 18,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಇದು ಸತತ ಏಳನೇ ದಿನ.

ನಿರಂತರ 25 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ. ಅಲ್ಲದೇ 14,000+ ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಸತತ 15ನೇ ದಿನವಾಗಿದೆ. ನಿರಂತರ 11 ದಿನಗಳಿಂದ ದಿನಂಪ್ರತಿ 15,000ಕ್ಕೂ ಅಧಿಕ ಸಾಂಕ್ರಾಮಿಕ ರೋಗಗಳು ದೃಢಪಟ್ಟಿವೆ. ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 19,200 ಮತ್ತು ಸೋಂಕು ಬಾಧಿತರ ಸಂಖ್ಯೆ 6.70 ಲಕ್ಷ ತಲುಪುವ ಆತಂಕವಿದೆ.

ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 442 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 18,655ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 6,48,315 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ತಾಸುಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 442 ಸಾವಿನ ವಿವರ : ಮಹಾರಾಷ್ಟ್ರ 198, ತಮಿಳುನಾಡು 64, ದೆಹಲಿ 59, ಕರ್ನಾಟಕ 21, ಗುಜರಾತ್ ಮತ್ತು ಪಶ್ಚಿಮ ¨ಂಗಾಳ ತಲಾ 18, ಉತ್ತರ ಪ್ರದೇಶ 14, ಪಶ್ಚಿಮ ಬಂಗಾಳ 16, ಹರಿಯಾಣ 11, ಜಮ್ಮು-ಕಾಶ್ಮೀರ 10, ರಾಜಸ್ತಾನ 9, ರಾಜಸ್ತಾನ 10, ಆಂಧ್ರಪ್ರದೇಶ ಮತ್ತು ತೆಲಂಗಾಣ ತಲಾ 8, ಪಂಜಾಬ್ 5, ಹರಿಯಾಣ, ಮಧ್ಯಪ್ರದೇಶ ಮತ್ತು ಜಮ್ಮು-ಕಾಶ್ಮೀರ ತಲಾ 4, ಅಸ್ಸಾಂ ಮತ್ತು ಒಡಿಶಾ ತಲಾ 2. ಸಾವುಗಳು ವರದಿಯಾಗಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜುಲೈ ಮತ್ತು ಅಗಸ್ಟ್‍ನಲ್ಲಿ ಸಾಂಕ್ರಾಮಿಕ ಸೋಂಕಿನ ಹಾವಳಿ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.  ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.60.80ರಷ್ಟು ಏರಿಕೆ ಕಂಡುಬಂದಿದ್ದು, 3.94 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿರುವುದು ಸಮಾಧಾನಕಾರ ಸಂಗತಿ.

Facebook Comments