ದೇಶದಲ್ಲಿ ಕೊರೋನಾ ಹೊಸ ದಾಖಲೆ, ಒಂದೇ ದಿನ 26,000 ಮಂದಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.10- ದೇಶದಲ್ಲಿ ಕೊರೊನಾ ಸೋಂಕು 8 ಲಕ್ಷ ಗಡಿ ದಾಟುವ ಸನಿಹದಲ್ಲಿದ್ದು ಒಂದೇ ದಿನದಲ್ಲಿ 26,506 ಮಂದಿ ಸೋಂಕಿಗೆ ಸಿಲುಕಿದ್ದಾರೆ. ಸಾವಿನ ಸಂಖ್ಯೆ 21,632ಆಗಿದೆ.  ದೇಶದಲ್ಲಿ ದಿನೇದಿನೇ ಕೊರೊನಾದ ಹಾವಳಿ ವಿಪರೀತಗೊಳ್ಳುತ್ತಿದೆ.

ಭಾರತದಲ್ಲಿ ನಿನ್ನೆಯಿಂದ ಇಂದು ಬೆಳಗ್ಗೆವರೆಗೆ 26,506 ಮಂದಿಗೆ ಸೋಂಕು ತಗುಲಿದ್ದರೆ ಮಧ್ಯಾಹ್ನದ ವೇಳೆಗೆ ಹೊಸದಾಗಿ 763 ಹೊಸ ಸೋಂಕಿತರು ಪತ್ತೆಯಾದರು, 9 ಸಾವಿನ ಪ್ರಕರಣಗಳು ವರದಿಯಾದವು.

ಮಧ್ಯಾಹ್ನದ ವೇಳೆಗೆ 7,95,605 ಸೋಂಕಿತರಿದ್ದರು. ದೇಶದಲ್ಲಿ 2,99,557 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 4,96,048 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಪ್ರಕಾರ ಮಹಾರಾಷ್ಟ್ರ ನಂಬರ್ 1 ಸ್ಥಾನದಲ್ಲಿದೆ. ಒಟ್ಟು 230599 ಮಂದಿ ಸೋಂಕಿತರಿದ್ದು 9667 ಮಂದಿ ಸಾವನ್ನಪ್ಪಿದ್ದಾರೆ. ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 126581 ಮಂದಿ ಸೋಂಕಿತರಿದ್ದು 1765 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 107051 ಸೋಂಕಿತರಿದ್ದು 3528 ಮಂದಿ ಸಾವನ್ನಪ್ಪಿದ್ದಾರೆ.

ಗುಜರಾತ್‍ನಲ್ಲಿ 39,194 ಮಂದಿ ಸೋಂಕಿತರಿದ್ದು, 2008 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 32,362 ಮಂದಿ ಸೋಂಕಿತರಿದ್ದು 842 ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಸಾವಿನ ಸಂಖ್ಯೆ ಹೆಚ್ಚಿದೆ. ಪಶ್ಚಿಮ ಬಂಗಾಳದಲ್ಲಿ 854 ಮಂದಿ, ಮಧ್ಯಪ್ರದೇಶದಲ್ಲಿ 434 ಮಂದಿ, ರಾಜಸ್ಥಾನದಲ್ಲಿ 431 ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲೇ 6ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 31,105 ಮಂದಿ ಸೋಂಕಿತರಿದ್ದು, 486 ಮಂದಿ ಸಾವನ್ನಪ್ಪಿದ್ದಾರೆ. 17,782 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12,833 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇಂದು ವರದಿ ಆದ ಪ್ರಕಾರ ಮುಖ್ಯಮಂತ್ರಿ ಕಚೇರಿಯ 10 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ. ಬೆಂಗಳೂರಿನಲ್ಲಿ 11,361 ಮಂದಿಗೆ ಸೋಂಕು ತಗುಲಿದ್ದು 10,290 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 965 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ, 106 ಮಂದಿ ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮಟ್ಟಿಗೆ ಈಗಲೂ ಕಲಬುರಗಿ, ಬೀದರ್, ದಕ್ಷಿಣ ಕನ್ನಡ ಜಿಲ್ಲೆಗಳು ಹಾಟ್‍ಸ್ಪಾಟ್‍ಗಳಾಗಿದ್ದು ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 2228 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ, 17 ಮಂದಿ ಸಾವನ್ನಪ್ಪಿದ್ದಾರೆ,

Facebook Comments