ಯಾವ ವಯೋಮಾನದವರನ್ನು ಹೆಚ್ಚಾಗಿ ಕಾಡುತ್ತಿದೆ ಕರೋನಾ..? ಇಲ್ಲಿದೆ ಶಾಕಿಂಗ್ ರಿಪೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ದೇಶದಲ್ಲಿ 21-40 ವರ್ಷದ ವ್ಯಕ್ತಿಗಳಲ್ಲಿಯೇ ಕೋರೋನಾ ಸೋಂಕು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿರುವ ಅಂಶ ಬಹಿರಂಗವಾಗಿದೆ. ದೇಶದಲ್ಲಿ 2902 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 24 ಗಂಟೆಯಲ್ಲಿ 601 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

183 ಜನ ಕೊರೊನಾದಿಂದ ಗುಣಮುಖರಾಗಿದ್ದು ದೇಶಾದ್ಯಂತ ಇದುವರೆಗೆ 68 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶನಿವಾರ 12 ಜನ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 68 ಕ್ಕೇರಿದೆ. ಇನ್ನೊಂದೆಡೆ ಒಟ್ಟು ಸೋಂಕಿತರಲ್ಲಿ 183 ಜನರು ಚೇತರಿಸಿಕೊಂಡಿದ್ದು, ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

1-20 ವಯಸ್ಸಿನವರಲ್ಲಿ ಶೇಕಡಾ 2ರಷ್ಟು ಕೊರೊನಾ ಸೋಂಕು ಪತ್ತೆಯಾಗಿದ್ದರೇ 21-40 ವರ್ಷದವರಲ್ಲಿ ಕೊರೋನಾ ಪ್ರಕರಣ ಶೇಕಡಾ 40 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಶೇಕಡಾ 33ರಷ್ಟು ಪ್ರಕರಣಗಳು 41-60 ವಯೋಮಿತಿಯ ವ್ಯಕ್ತಿಗಳಲ್ಲಿ ದಾಖಲಾಗಿದೆ. ಹಾಗೆಯೇ 60 ವರ್ಷಕ್ಕಿಂತ ‌ಮೇಲ್ಪಟ್ಟವರಲ್ಲಿ ಶೇ. 17ರಷ್ಟು ಕಂಡುಬಂದಿದೆ.

ಭಾರತದಲ್ಲಿ ವರದಿಯಾಗಿರುವ ಕೋವಿಡ್-18 ಸೋಂಕಿತರಲ್ಲಿ ಸುಮಾರು 1,023 ಮಂದಿ ದೆಹಲಿ ಸಮಾವೇಶದಲ್ಲಿ ಭಾಗಿಯಾದವರಾಗಿದ್ದಾರೆ. ದೇಶದಲ್ಲಿ ಈವರೆಗೆ ಹೆಚ್ಚು ಕೊರೊನಾ ಸೊಂಕಿತ ಪ್ರಕರಣ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಅಲ್ಲಿ 537 ಮಂದಿಗೆ ಸೋಂಕು ತಗುಲಿದ್ದು, 26 ಮಂದಿ ಮೃತಪಟ್ಟಿದ್ದಾರೆ. ಇತ್ತ ಎರಡನೇ ಸ್ಥಾನದಲ್ಲಿ ತಮಿಳು ನಾಡಿದ್ದು, ಇಲ್ಲಿ 411 ಮಂದಿಗೆ ಸೋಂಕು ತಟ್ಟಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ದೆಹಲಿಯಲ್ಲಿ 386 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 6 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಕೇರಳದಲ್ಲಿ 295 ಮಂದಿ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಕರ್ನಾಟಕದಲ್ಲಿ 128 ಮಂದಿಗೆ ಸೊಂಕು ತಗುಲಿದ್ದು, 11 ಮಂದಿ ಗುಣಮುಖರಾಗಿದ್ದರೆ, 4 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಈ ಮಧ್ಯೆದೆಹಲಿ ನಿಜಾಮುದ್ದೀನ್ ಮಸೀದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಕರ್ನಾಟಕ ಸೇರಿ 17 ರಾಜ್ಯಗಳ 1023 ಜನರಲ್ಲಿ ‌ಇದುವರೆಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಇಲಾಖೆ ಹೇಳಿದೆ.ದೇಶಾದ್ಯಂತ ವೈದ್ಯಕೀಯ ಪರಿಕರ ಔಷಧಿ ಮತ್ತಿತರ ಅಗತ್ಯ ವಸ್ತುಗಳ ಸರಬರಾಜಿಗೆ ತೊಂದರೆ ಆಗಿಲ್ಲ. 57 ಸರಕು ವಿಮಾನಗಳ ಮೂಲಕ ಅಗತ್ಯ ವಸ್ತುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ಹೇಳಿದೆ.

ಕೊರೊನಾ ನಿಯಂತ್ರಣಕ್ಕೆ ಎಸ್ಡಿಆರ್ ಎಫ್ ನಿಧಿಯಡಿ ರಾಜ್ಯಗಳಿಗೆ 11 ಸಾವಿರ ‌ಕೋಟಿ ರೂ ಬಿಡುಗಡೆ ಮಾಡಲಾಗಿದೆ ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ. ಇಲ್ಲಿಯವರೆಗೆ ದೇಶದ 17 ರಾಜ್ಯಗಳಲ್ಲಿ ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಬೆಳಕಿಗೆ ಬಂದಿದೆ.

ಒಟ್ಟು 1,023 ಪಾಸಿಟಿವ್​ ಪ್ರಕರಣಗಳು ಈ ಘಟನೆಗೆ ಸಂಬಂಧಿಸಿವೆ. ದೇಶದ ಒಟ್ಟು ಪ್ರಕರಣಗಳಲ್ಲಿ, ಸುಮಾರು ಶೇ 30ರಷ್ಟು ಒಂದು ನಿರ್ದಿಷ್ಟ ಸ್ಥಳಕ್ಕೆ ಸಂಬಂಧಿಸಿದೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.

ಸುಮಾರು 22,000 ತಬ್ಲಿಘಿ ಜಮಾತ್ ಸದಸ್ಯರು ಮತ್ತು ಅವರ ಸಂಪರ್ಕಿಸಿದವರನ್ನು ನಮ್ಮೆಲ್ಲಾ ಭಗೀರಥ ಪ್ರಯತ್ನದ ಮೂಲಕ ಕ್ವಾರಂಟೈನ್​ನಲ್ಲಿಡಲಾಗಿದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ತಿಳಿಸಿದ್ದಾರೆ.

# ಸೋಂಕು ಬಾಧಿಸಿದ ವಯೋಮಾನದ ವಿವರ:-
ಒಟ್ಟು ಸೋಂಕಿತರಲ್ಲಿ ಶೇ. 9ರಷ್ಟು ಕೋವಿಡ್​-19 ರೋಗಿಗಳು 0-20 ವರ್ಷ ವಯಸ್ಸಿನವರು- 42 ಶೇ. ರೋಗಿಗಳು 21-40 ವರ್ಷ ವಯಸ್ಸಿನವರು- 33 ಶೇ. ಪ್ರಕರಣಗಳು 41 – 60 ವರ್ಷದೊಳಗಿನವರು- 17 ಶೇ. ರೋಗಿಗಳು 60 ವರ್ಷ ದಾಟಿದವರು.

ಈವರೆಗೆ ಭಾರತದಲ್ಲಿ 230 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ವಿಶ್ವಾದ್ಯಂತ 11,32,733 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 2,35,992 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 60,353 ಮಂದಿ ಮಹಾಮಾರಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin