ಡೆಡ್ಲಿ ಕರೋನ ವೈರಸ್ ಸೋಂಕಿನ ಲಕ್ಷಣಗಳೇನು..? ಮುನ್ನೆಚ್ಚರಿಕೆಗಳೇನು..? ತಪ್ಪದೆ ಓದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.28-ವಿಶ್ವದಲ್ಲಿ ಆತಂಕ ಸೃಷ್ಟಿಸಿ ಸಾವುನೋವುಗಳಿಗೆ ಕಾರಣವಾಗಿರುವ ಚೀನಾದ ಮಾರಕ ಕೊರೋನಾ ವೈರಾಣು ಸೋಂಕಿನಿಂದ ಸಾವುನೋವು ಸಂಭವಿಸಿ ಭಾರತದಲ್ಲೂ ಶಂಕಿತ ಪ್ರಕರಣಗಳು ಪತ್ತೆಯಾಗಿರುವುದು ಭಯಭೀತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ತುರ್ತು ಪ್ರಕಟಣೆಯೊಂದನು ಹೊರಡಿಸಿ ಕಿಲ್ಲರ್ ಕರೋನಾ ವೈರಾಣು ಸೋಂಕು ಬರದಂತೆ ತಡೆಯಲು ಕೆಲವು ಸರಳ ಮಾರ್ಗೋಪಾಯಗಳನ್ನು ತಿಳಿಸಿದೆ.

ಗಂಟಲು ಒಣಗುವುದನ್ನು ತಡೆಗಟ್ಟುವುದು ಈ ವೈರಾಣು ಹತ್ತಿರ ಬರದಂತೆ ಮಾಡುವುದು ಸರಳ ವಿಧಾನವಾಗಿದೆ. ವ್ಯಕ್ತಿಯ ಗಂಟಲಿನ ತೆಳುವಾದ ಪದರ ಒಣಗಿದ್ದಲ್ಲಿ ಈ ವೈರಾಣು 10 ನಿಮಿಷದಲ್ಲೇ ದೇಹವನ್ನು ಪ್ರವೇಶಿಸಿ ತನ್ನ ದುಷ್ಪ್ರಭಾವ ಬೀರುತ್ತದೆ. ಹೀಗಾಗಿ ಗಂಟಲು ಒಣಗಲು ಬಿಡಬಾರದು.

ಗಂಟಲು ಒಣಗುವುದಕ್ಕೂ ಮುನ್ನವೇ ದೊಡ್ಡವರು 50ರಿಂದ 80 ಸಿಸಿ ಬಿಸಿ ನೀರು ಮತ್ತು ಮಕ್ಕಳು 30ರಿಂದ 50 ಸಿಸಿ ಬೆಚ್ಚನೆಯ ನೀರು ಸೇವಿಸಬೇಕು. ಗಂಟಲು ಪಸೆ ಆರಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಗಂಟಲು ಒಣಗುವುದನ್ನು ತಪ್ಪಿಸಲು ಒಟ್ಟಿಗೆ ಸಾಕಷ್ಟು ನೀರು ಕುಡಿಯುವುದರಿಂದ ಏನು ಪ್ರಯೋಜನವಿಲ್ಲ ಎಂದು ಸಲಹೆ ಮಾಡಲಾಗಿದೆ.
ನೀವು ಎಲ್ಲೇ ಹೋಗಲಿ ಕೈಯಲ್ಲಿ ಒಂದು ಬಾಟಲ್ ನೀರು ಇರಲಿ. ಮಾ.30ರವರೆಗೂ ಜನರು ಸಾಧ್ಯವಾದಷ್ಟು ಜನಸಂದಣಿ ಪ್ರದೇಶಗಳಿಂದ ದೂರ ಇರುವುದು ಸೂಕ್ತ.

ಬಸ್, ರೈಲು ಮತ್ತಿತರ ಸಾರ್ವಜನಿಕ ವಲಯಗಳಲ್ಲಿ ಹೋಗಾಬೇಕಾದರೆ ಮುಖಕ್ಕೆ ಮಾಸ್ಕ್ ಧರಿಸಬೇಕು, ಸಾಧ್ಯವಾದಷ್ಟು ಉರಿದ, ಕರಿದ ಮತ್ತು ಮಸಾಲೆ ಪದಾರ್ಥಗಳಿಂದ ದೂರ ಇರಬೇಕು. ವಿಟಮಿನ್ ಸಿ ಜೀವಸತ್ವ ಸಮೃದ್ಧವಾಗಿರುವ ಆಹಾರಗಳನ್ನು ಯಥೇಚ್ಛವಾಗಿ ಸೇವಿಸಬೇಕು.

# ರೋಗ ಲಕ್ಷಣಗಳು:
ಕೊರೋನ ವೈರಾಣುವಿನಿಂದ ಉಂಟಾಗುವ ರೋಗಲಕ್ಷಣಗಳು ಈ ಕೆಳಕಂಡಂತಿವೆ.
1. ಪುನಾರವರ್ತಿತ ವಿಪರೀತ ಜ್ವರ
2. ಜ್ವರ ಕಾಣಿಸಿಕೊಂಡ ನಂತರ ಧೀರ್ಘ ಕಾಲ ಕಾಡುವ ಕೆಮ್ಮು
3. ಮಕ್ಕಳು ಈ ಸೋಂಕಿಗೆ ಬೇಗ ಒಳಗಾಗುತ್ತಾರೆ
4. ದೊಡ್ಡವರಲ್ಲಿ ಸುಸ್ತು, ಆಯಾಸ, ತಲೆನೋವು ಕಂಡುಬರುತ್ತದೆ.
5. ಯಾವುದೇ ರೋಗ ಪ್ರತಿರೋಧಕ ಔಷಧಿ ಮಾತ್ರೆಗಳಿಗೆ ಸ್ಪಂದಿಸದಿರುವುದು
6. ಸಾರ್ಸ್(ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಡ್ರೋಮ್) ರೋಗದ ರೀತಿ ಕೊರೋನ ವೈರಾಣು ಸೋಂಕಿನಲ್ಲೂ ಉಸಿರಾಟ ತೀವ್ರ ಸಮಸ್ಯೆ ಎದುರಾಗುತ್ತದೆ.

Facebook Comments

Sri Raghav

Admin