ಮಹಾರಾಷ್ಟ್ರದಲ್ಲಿ ಕೋವಿಡ್ ರಣಕೇಕೆ, 41,000ಕ್ಕೂ ಹೆಚ್ಚು ಮಂದಿಗೆ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 22- ಕಿಲ್ಲರ್ ಕೊರೊನಾ ದಾಳಿಯಿಂದ ಮಹಾರಾಷ್ಟ್ರ ಕಂಗೆಟ್ಟಿದೆ. ದೇಶದಲ್ಲೇಅತಿ ಹೆಚ್ಚು ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಭಾರೀ ಗಂಡಾಂತರದಲ್ಲಿದೆ.

ಕೋವಿಡ್-19 ವೈರಸ್ ಹಾವಳಿಯ ಅತ್ಯಂತ ಅಪಾಯಕಾರಿ ರಾಜ್ಯವೆಂದೇ ಗುರುತಿಸಲ್ಪಟ್ಟಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 41,000 ದಾಟಿದ್ದು, ಮೃತರ ಸಂಖ್ಯೆಯೂ 1,500ರ ಸನಿಹದಲ್ಲಿದೆ.

ದೇಶದ ವಾಣಿಜ್ಯರಾಜಧಾನಿ ಮುಂಬೈನಲ್ಲೇ 25,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ. ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 41 ಮಂದಿ ಸಾವಿಗೀಡಾಗಿ, 1,382 ಜನರಿಗೆ ಸಾಂಕ್ರಾಮಿಕರೋಗತಗುಲಿದೆ. ರಾಜ್ಯದಲ್ಲಿ 6,751 ಮಂದಿ ಗುಣಮುಖರಾಗಿರುವುದು ಸ್ವಲ್ಪ ಸಮಾಧಾನಕರ ಸಂಗತಿಯಾಗಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಹೆಮ್ಮಾರಿ ಹತೋಟಿ ಮೀರಿರುದ್ರ ನರ್ತನ ಮುಂದುವರಿಸಿದೆ. ಮುಂದೇನು ಎಂಬ ಚಿಂತೆ ಮಹಾರಾಷ್ಟ್ರ ಜನತೆಯನ್ನು ಕಾಡುತ್ತಿದೆ.

Facebook Comments

Sri Raghav

Admin