ವಿಶ್ವದಾದ್ಯಂತ 24 ಗಂಟೆಯಲ್ಲಿ 1 ಲಕ್ಷ ಮಂದಿಗೆ ಕೊರೋನಾ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ಮಾಸ್ಕೋ/ಮ್ಯಾಡ್ರಿಡ್, ಮೇ 21- ಅಪಾಯಕಾರಿ ಕೊರೊನಾ ಇಡೀ ಜಗತ್ತಿಗೆ ಅಪಾಯವಾಗಿ ಪರಿಣಮಿಸಿದೆ. ಇಡೀ ಜಗವೇ ಒಗ್ಗೂಡಿ ಹೋರಾಟ ನಡೆಸುತ್ತಿದ್ದರೂ. ವೈರಸ್ ದಾಳಿಯ ವೇಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಆತಂಕಕಾರಿ ಸಂಗತಿ ಎಂದರೆ ಕಳೆದ 24 ತಾಸುಗಳಲ್ಲಿ ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಮಂದಿಗೆ (ಒಂದು ಲಕ್ಷದ ಆರು ಸಾವಿರ) ಸೋಂಕು ತಗುಲಿದೆ. ಜಗತ್ತಿನಾದ್ಯಂತಈವರೆಗೆ 3.29,763 ಮಂದಿ ಸಾವಿಗೀಡಾಗಿದ್ದು, 50,91,055 ಸೋಂಕು ಪ್ರಕರಣಗಳು ವರದಿಯಾಗಿವೆ.

ಸಾಂಕ್ರಾಮಿಕರೋಗ ಪೀಡಿತರಲ್ಲಿ ಸುಮಾರು 47,000ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದ್ದು, ಮರಣ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಇಂದು ಸಂಜೆ ವೇಳೆಗೆ ಮೃತರ ಸಂಖ್ಯೆ 3.30 ಲಕ್ಷ ಮತ್ತು ಸೋಂಕಿತರ ಸಂಖ್ಯೆ52 ಲಕ್ಷ ಮೀರುವಆತಂಕವಿದೆ.

ಈ ಮಧ್ಯೆ, ರೋಗಿಗಳ ಚೇತರಿಕೆ ಪ್ರಮಾಣದಲ್ಲಿಯೂ ವೃದ್ದಿ ಕಂಡುಬಂದಿವೆ. 20,26,150 ಮಂದಿ ಸೋಂಕು ಪೀಡಿತರು ಚೇತರಿಸಿ ಕೊಂಡಿರುವುದು ಮತ್ತು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಅಮೆರಿಕ,ರಷ್ಯಾ, ಸ್ಪೇನ್, ಬ್ರೆಜಿಲ್ ಮತ್ತುಇಂಗ್ಲೆಂಡ್ – ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದಟಾಪ್ ಫೈವ್ ದೇಶಗಳಾಗಿವೆ ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಇಟಲಿ, ಫ್ರಾನ್ಸ್, ಜರ್ಮನಿ, ಟರ್ಕಿ ಮತ್ತುಇರಾನ್ ದೇಶಗಳಿವೆ. ಅತಿ ಹೆಚ್ಚು ಸೋಂಕು ಮತ್ತು ಸಾವು ಪಟ್ಟಿಯಲ್ಲಿ ಭಾರತ 11ನೇ ಸ್ಥಾನದಲ್ಲಿದೆ.

ಜಗತ್ತಿನ 250ಕ್ಕೂ ಹೆಚ್ಚು ದೇಶಗಳು ಸತತ ಐದು ತಿಂಗಳುಗಳಿಂದ ಕೊರೊನಾ ನಿಗ್ರಹಕ್ಕಾಗಿ ನಿರಂತರ ಹೋರಾಟ ಮುಂದುವರಿಸಿದ್ದರೂ ಹೆಮ್ಮಾರಿ ನಿಯಂತ್ರಣ ಸಾಧ್ಯವಾಗದಿರುವುದು ಭಾರೀ ಕಳವಳಕಾರಿಯಾಗಿದೆ.

ಇವೆಲ್ಲದರ ನಡುವೆ ವಿಶ್ವದ ಅನೇಕ ದೇಶಗಳು ಕಿಲ್ಲರ್ ಕೊರೊನಾ ನಿಗ್ರಹಕ್ಕಾಗಿ ಔಷಧಿ ಮತ್ತು ಲಸಿಕೆಗಳ ಅನ್ವೇಷಣೆಯನ್ನು ಮುಂದುವರಿಸಿವೆ.

Facebook Comments

Sri Raghav

Admin