ಸಾವಿನ ದಾಖಲೆ..! : ಅಮೆರಿಕದಲ್ಲಿ ಕೊರೋನಾಗೆ ಒಂದೇ ದಿನ 2,600 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.16- ಡೆಡ್ಲಿ ಕೊರೊನಾ ಸೂಪರ್ ಪವರ್ ಅಮೆರಿಕವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈಗಾಗಲೇ ಸಾವು ಮತ್ತು ಸೋಂಕಿನಲ್ಲಿ ವಿಶ್ವದ ಅಗ್ರಸ್ಥಾನದಲ್ಲಿರುವ ಅಮೆರಿಕದಲ್ಲಿ ಒಂದೇ ದಿನ 2,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಮತ್ತೊಂದು ಹೊಸ ದಾಖಲೆ ನಿರ್ಮಾಣವಾಗಿದೆ.

ಮಹಾ ಬಲಶಾಲಿ ದೇಶವುಅಗೋಚರ ವೈರಾಣು ವಜ್ರಮುಷ್ಠಿಯಲ್ಲಿ ನಲುಗುತ್ತಿದ್ದು,ಈವರೆಗೆ 27,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 6 ಲಕ್ಷಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, 24 ತಾಸುಗಳ ಅವಧಿಯಲ್ಲಿ 2,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಇದು ಒಂದೇ ದಿನ ವರದಿಯಾಗಿರುವ ಅತಿ ಹೆಚ್ಚು ಸಾವಿನ ಪ್ರಕರಣವಾಗಿದೆ.

ಅಮೆರಿಕದಲ್ಲಿ ಒಟ್ಟಾರೆ 27,176 ಮಂದಿಯನ್ನು ಕೊರೊನಾ ಬಲಿ ತೆಗೆದುಕೊಂಡಿದ್ದು, 6,19,331ಜನರು ಮಾರಕ ಸೋಂಕಿನಿಂದ ನರಳುತ್ತಿದ್ದಾರೆ. ಸಾವು ಮತ್ತು ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ವಿಶ್ವದ ಅತ್ಯಂತ ಪ್ರಸಿದ್ಧ ನಗರ ನ್ಯೂಯಾರ್ಕ್‍ಅಕ್ಷರಶಃ ಸಾವಿನ ಮನೆಯಾಗಿದೆ. ಅಲ್ಲಿ ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳಿಂದಾಗಿ ರೋಗ ನಗರಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಭಾರೀ ಕಳವಳಕಾರಿ ಸಂಗತಿಎಂದರೆ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ 11,000ಕ್ಕೂ ಹೆಚ್ಚು ಮಂದಿಯನ್ನುಕೊರೊನಾ ವೈರಸ್ ಬಲಿಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 2.50 ಲಕ್ಷಕ್ಕೇರಿದೆ. ಜಗತ್ತಿನಲ್ಲೇ ಸರ್ವಶ್ರೇಷ್ಠ ವೈದ್ಯರೀಯ ಸೌಲಭ್ಯ ಮತ್ತು ವಿಶ್ವ ಮನ್ನಣೆಯ ಆರೋಗ್ಯ ತಜ್ಞರನ್ನು ಹೊಂದಿರುವ ಅಮೆರಿಕವನ್ನೇ ವೈರಸ್‍ಅಲ್ಲೋಲ-ಕಲ್ಲೋಲ ಮಾಡಿರುವಾಗ ಪ್ರಪಂಚದ ಉಳಿದ ದೇಶಗಳ ಪಾಡೇನು ಎಂಬ ಪ್ರಶ್ನೆಎದುರಾಗಿದೆ.

# ಹೋರಾಟ ಮುಂದುವರಿಯಲಿದೆ:
ಅಮೆರಿಕ ಗರಿಷ್ಠ ಹಂತವನ್ನು ತಲುಪಿದೆ ಎಂದು ಹೇಳಿರುವ ಅಧ್ಯಕ್ಷ ಡೊನಾಲ್ಡ್‍ಟ್ರಂಪ್, ಕೊರೊನಾ ಪಿಡುಗಿನ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.  ವಾಷಿಂಗ್ಟನ್‍ನ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಸಾಮಾಜಿಕ ಅಂತರ ಕುರಿತು ಹೊಸ ಮಾರ್ಗ ಸೂಚಿಯನ್ನು ಹೊರಡಿಸುವುದಾಗಿ ತಿಳಿಸಿದರು.

ಕಿಲ್ಲರ್‍ಕೊರೊನಾ ವಿರುದ್ಧ ನಾವು ಮತ್ತಷ್ಟು ತೀವ್ರ ಹೋರಾಟ ಮುಂದುವರಿಸುತ್ತೇವೆ. ಅದನ್ನು ನಿರ್ಮೂಲನೆ ಮಾಡುವಲ್ಲಿಯೂ ನಾವು ಯಶಸ್ಸು ಸಾಧಿಸುತ್ತೇವೆ ಎಂದು ಅವರು ಹೇಳಿದರು.

Facebook Comments

Sri Raghav

Admin