ಏಷ್ಯಾದಲ್ಲೇ ಭಾರತ ನಂ.1 ಕೊರೋನಾ ಪೀಡಿತ ದೇಶ, ವಿಶ್ವದಲ್ಲಿ 9ನೇ ಸ್ಥಾನ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 29- ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ಈಗ ಏಷ್ಯಾದ ಅತಿ ಹೆಚ್ಚು ಬಾಧಿತದೇಶವಾಗಿದೆ. ಅಲ್ಲದೇ ವಿಶ್ವದಲ್ಲೇಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಭಾರತ 9ನೇ ಸ್ಥಾನಕ್ಕೇರಿದೆ.

ಸಾಂಕ್ರಾಮಿಕರೋಗ ಮತ್ತು ಸಾವು ಪ್ರಕರಣಗಳ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವಾಗಲೇ ಸಮುದಾಯ ಸೋಂಕು ಸಾಧ್ಯತೆಯ ಭೀತಿಯೂ ಭಾರತೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ.

ನಿನ್ನೆ ಒಂದೇ ದಿನ ದೇಶದಲ್ಲಿದಾಖಲೆ ಪ್ರಮಾಣದ 7,466 ಸೋಂಕು ಪ್ರಕರಣಗಳು ದಾಖಲಾಗಿದ್ದು, ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರಇದುಗರಿಷ್ಠ ಪ್ರಮಾಣದ್ದಾಗಿದೆ. ದೇಶದಲ್ಲಿ ಸತತಎಂಟನೆ ದಿನ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದುದೇಶದಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ.

ಮೃತರ ಸಂಖ್ಯೆ 4,700 ಹಾಗೂ ರೋಗಪೀಡಿತರ ಸಂಖ್ಯೆ 1.66 ಲಕ್ಷದಾಟಿದೆ. ನಿನ್ನೆಒಂದೇ ದಿನ ಅಂದರೆ 24 ತಾಸುಗಳ ಅವಧಿಯಲ್ಲಿ 7,466 (ಬುಧವಾರ 6,566 ಮಂಗಳವಾರ 6,387, ಸೋಮವಾರ 6,535, ಭಾನುವಾರ 6,977, ಶನಿವಾರ 6,767, ಶುಕ್ರವಾರ 6,654, ಮತ್ತುಗುರುವಾರ 6,088 ಕೇಸ್‍ಗಳು) ಜನರಿಗೆ ಸೋಂಕು ದೃಢಪಟ್ಟಿದೆ.

ಸಾಂಕ್ರಾಮಿಕರೋಗಉಲ್ಬಣದಲ್ಲಿ ನಿರಂತರಎಂಟನೇ ದಿನದ ಭಾರೀಜಿಗಿತಇದಾಗಿದೆ. ಅಲ್ಲದೇ ಈ ವಾರದಲ್ಲಿಆರು ದಿನಗಳಿಂದಲೂ 6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ.

ನಿನ್ನೆಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 175 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 4,706ಕ್ಕೇರಿದೆ . ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 1,65,799ತಲುಪಿದೆಎಂದುಕೇಂದ್ರಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಂದು ಮಧ್ಯರಾತ್ರಿಯೊಳಗೆ ಸಾವಿನ ಸಂಖ್ಯೆ 4,850 ಮತ್ತುಸೋಂಕಿತರ ಪ್ರಮಾಣ1.72 ಲಕ್ಷದಾಟುವ ಆತಂಕವೂ ಇದೆ. ಮೇ 1ರಿಂದಲೂ ಅತಿ ಹೆಚ್ಚು ಸೋಂಕು ಪ್ರಕರಣಗಳು ದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಲೇಇದ್ದು, ದಿನೇ ದಿನೇ ಆಘಾತಕಾರಿ ಮಟ್ಟದಲ್ಲಿ ಉಲ್ಬಣಗೊಳ್ಳುತ್ತಿದೆ. ಜೂನ್‍ನಲ್ಲಿ ಸಾಂಕ್ರಾಮಿಕರೋಗ ಮತ್ತು ಸಾವಿನ ಪ್ರಕರಣ ಮತ್ತಷ್ಟು ಹೆಚ್ಚಾಗುವ ಆತಂಕವೂಇದೆ.

ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲ್ಲಿದೇಶದ ವಿವಿಧ ರಾಜ್ಯಗಳಲ್ಲಿ 175 ಮಂದಿಯನ್ನುಕಿಲ್ಲರ್‍ಕೊರೊನಾ ಬಲಿ ತೆಗೆದುಕೊಂಡಿದೆ. ಮಹಾರಾಷ್ಟ್ರದಲ್ಲಿ105, ಗುಜರಾತ್ 23, ದೆಹಲಿ 15, ಉತ್ತರಪ್ರದೇಶ 12, ಮಧ್ಯಪ್ರದೇಶ 8, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮಬಂಗಾಳ ತಲಾ 6, ಕರ್ನಾಟಕ ಮತ್ತುರಾಜಸ್ತಾನತಲಾ 3, ಬಿಹಾರ ಮತ್ತು ಜಮ್ಮು-ಕಾಶ್ಮೀರ ತಲಾ 2, ಕೇರಳ, ಆಂಧ್ರಪ್ರದೇಶ ಮತ್ತು ಹರಿಯಾಣರಾಜ್ಯದಲ್ಲಿತಲಾ ಒಂದು ಸಾವು ಪ್ರಕರಣ ವರದಿಯಾಗಿದೆ.

ಈವರೆಗೆ ಸಂಭವಿಸಿರುವ 4,531 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 89,980ರಷ್ಟಿದೆ. ಈ ಮಧ್ಯೆ, ಈವರೆಗೆ71,105(ಚೇತರಿಕೆ ಪ್ರಮಾಣ ಶೇ.42.89) ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜÁಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

# ಏಷ್ಯಾದಲ್ಲೇ ನಂ. 1:
ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿಚೀನಾವನ್ನು ಹಿಂದಿಕ್ಕಿರುವ ಭಾರತ ಈಗ ಏಷ್ಯಾದಅತಿ ಹೆಚ್ಚು ಬಾಧಿತದೇಶವಾಗಿದೆ. ಅಲ್ಲದೇ ವಿಶ್ವದಲ್ಲೇಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಭಾರತ 9ನೇ ಸ್ಥಾನಕ್ಕೇರಿದೆ. ವಿಶ್ವದಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ 9ನೇ ಸ್ಥಾನದಲ್ಲಿದ್ದಟರ್ಕಿಯನ್ನು ಹಿಂದಿಕ್ಕಿದೆ.

ಅಮೆರಿಕ, ಬ್ರೆಜಿಲ್, ರಷ್ಯಾ, ಸ್ಪೇನ್, ಇಂಗ್ಲೆಂಡ್. ಇಟಲಿ, ಫ್ರಾನ್ಸ್, ಜರ್ಮನಿ ನಂತರದ ಸ್ಥಾನದಲ್ಲಿ ಭಾರತವಿದೆ. ಕೊರೊನಾ ದಾಳಿಯ ವೇಗ ದೇಶದಲ್ಲಿಇದೇರೀತಿ ಮುಂದುವರಿದರೆ. ಭಾರತವು ಈ ಸೋಮವಾರದ ವೇಳೆಗೆ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರುವಆತಂಕವೂಇದೆ.

ಸಾಂಕ್ರಾಮಿಕ ರೋಗ ಮತ್ತು ಸಾವು ಪ್ರಕರಣಗಳ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವಾಗಲೇ ಸಮುದಾಯ ಸೋಂಕು ಸಾಧ್ಯತೆಯ ಭೀತಿಯೂ ಭಾರತೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ.  ಮೇ ಮಾಸಾಂತ್ಯದಲ್ಲೇ ಭಾರೀ ಸೋಂಕು ಮತ್ತು ಸಾವುಗಳು ಹೆಚ್ಛಾಗಿದ್ದು, ಮಳೆಗಾಲ ಆರಂಭವಾಗುವ ಜೂನ್‍ನಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಛಾಗುವ ಭಯಭೀತ ವಾತಾವರಣ ಸೃಷ್ಟಿಯಾಗಿದೆ.

 

Facebook Comments