ಭಾರತಕ್ಕೆ ಕಾದಿದೆ ಬಹುದೊಡ್ಡ ‘ಕೊರೋನಾ ಗಂಡಾಂತರ’..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ.1-ಕಿಲ್ಲರ್ ಕೋವಿಡ್-19 ವೈರಸ್ ದಾಳಿಯಿಂದ ದೇಶದಲ್ಲಿ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚಾಗುತ್ತಿರುವಾಗಲೇ ಸಮುದಾಯ ಸೋಂಕು ಉಲ್ಬಣ ಸಾಧ್ಯತೆಯ ದೊಡ್ಡ ಆತಂಕವೂ ಎದುರಾಗಿದೆ.

ಭಾರತದ ಬೃಹತ್ ಸಮುದಾಯಗಳು ಮತ್ತು ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸಮುದಾಯ ಸೋಂಕಿನ ಲಕ್ಷಣಗಳು ಗೋಚರಿಸುತ್ತಿದ್ದು, ಅದು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯ ಹಿರಿಯ ವೈದ್ಯರು ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ನ ಸಂಶೋಧಕರನ್ನು ಒಳಗೊಂಡ ಆರೋಗ್ಯ ತಜ್ಞರ ಸಮೂಹವೊಂದು ವರದಿ ನೀಡಿದೆ.

ಈ ಹಂತದಲ್ಲಿ ಕೊರೊನಾ ವೈರಸ್ ನಿರ್ಮೂಲನೆ ಆಗುತ್ತದೆ ಎಂಬ ಭಾವನೆ ಅವಾಸ್ತವ. ಬದಲಿಗೆ ಇದು ಸಮುದಾಯ ಸೋಂಕು ಆಗಿ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಭಾರತದಲ್ಲಿ ಈವರೆಗೆ 1.90 ಲಕ್ಷ ಮಂದಿಗೆ ಕೋವಿಡ್-19 ಸೋಂಕು ತಗುಲಿದ್ದು, ಮೃತರ ಸಂಖ್ಯೆ 5,400ಕ್ಕೇರಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಸಮುದಾಯ ಸೋಂಕು (ಕಮ್ಯೂನಿಟಿ ಇನ್‍ಫೆಂಕ್ಷನ್) ಭೀತಿ ಇಲ್ಲ ಎಂದು ಹೇಳುತ್ತಿರುವಾಗಲೇ ಆರೋಗ್ಯ ತಜ್ಞರ ವರದಿ ಆತಂಕಕ್ಕೆ ಕಾರಣವಾಗಿದೆ.

Facebook Comments

Sri Raghav

Admin