BREAKING : ವಿಕಾಸಸೌಧದ ಮಹಿಳಾ ಸಿಬ್ಬಂದಿಗೆ ಕೊರೋನಾ..! ಶಕ್ತಿಸೌಧ ಸೀಲ್ ಡೌನ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜೂನ್ 6. ರಾಜ್ಯ ರಾಜಧಾನಿ ಬೆಂಗಳೂರಿನ ಶಕ್ತಿಕೇಂದ್ರ ವಿಕಾಸಸೌಧದಲ್ಲಿ ಕೆಲಸ ಮಾಡುವ ಸರ್ಕಾರಿ ಮಹಿಳಾ ಉದ್ಯೋಗಿ ಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಇದರಿಂದಾಗಿ ಇಲ್ಲಿ ಕೆಲಸ ಮಾಡುವ ಸಚಿವಾಲಯದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ. ಸುಮಾರು 40 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಹಲವು ಅಧಿಕಾರಿಗಳು ಇಂದು ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರನ್ನು ಭೇಟಿ ಮಾಡಿ ಕೂಡಲೇ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಇನ್ನು ತಪಾಸಣೆಗೊಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ವಿಕಾಸಸೌಧ ವಿಧಾನಸೌಧ ಸೀಲ್ ಡೌನ್ ಆದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ .

ಸೋಂಕು ತಗುಲಿರುವ ಮಹಿಳೆ ಜೊತೆ ಸಂಪರ್ಕದಲ್ಲಿದ್ದವರನ್ನು ಕೂಡ ಪತ್ತೆ ಹಚ್ಚಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಶುರುವಾಗಿದೆ. ಇದು ಸಚಿವರನ್ನೂ ಕೂಡ ಆತಂಕಕ್ಕೀಡುಮಾಡಿದೆ.

ಇಂದು ಆಹಾರ ಸಚಿವ ಗೋಪಾಲಯ್ಯ ಅವರು ಹಾಸನ ಜಿಲ್ಲೆಯ ಅಧಿಕಾರಿಗಳನ್ನು ಕರಿಸಿಕೊನ್ದು ಸಭೆ ನಡೆಸಿದ್ದರು. ಆಹಾರ ಇಲಾಖೆಯ 2 ಕೊಠಡಿಗಳನ್ನು ಈಗ ಸೀಲ್ ಡೌನ್ ಮಾಡಲಾಗಿದೆ.

Facebook Comments

Sri Raghav

Admin