ಮಹಾರಾಷ್ಟ್ರದಲ್ಲಿ 19 ಕೊರೊನಾ ಪ್ರಕರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮಾ.16-ಮಾರಕ ಕೊರೊನಾ ಸೋಂಕಿನ ಬಾಧೆಯಿಂದ ಮಹಾರಾಷ್ಟ್ರ ಕೂಡ ಹೊರತಾಗಿಲ್ಲ. ರಾಜ್ಯದಲ್ಲಿ ಇನ್ನಿಬ್ಬರು ವ್ಯಕ್ತಿಗಳಿಗೆ ವೈರಾಣು ಸೋಂಕು ತಗುಲಿರುವುದು ದೃಢಪಟ್ಟಿದ್ದು, ರೋಗ ಪೀಡಿತರ ಸಂಖ್ಯೆ 19ಕ್ಕೇರಿದೆ.  ಅಹಮದ್ ನಗರದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿನ್ನೆ ಸಂಜೆವರೆಗೆ ಮಹಾರಾಷ್ಟ್ರದಲ್ಲಿ 17 ಜನರಲ್ಲಿ ವೈರಾಣು ಸೋಂಕು ತಗುಲಿತ್ತು. ಈಗ ಇನ್ನಿಬ್ಬರಲ್ಲಿ ಕೊರೊನಾ ಇರುವುದು ದೃಢಪಟ್ಟಿದ್ದು, ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆ 19ಕ್ಕೇರಿದೆ. ಸೋಂಕು ರೋಗ ವ್ಯಾಪಿಸದಂತೆ ತಡೆಯಲು ರಾಜ್ಯ ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಜನತೆಗೆ ಈಗಾಗಲೇ ಸೂಚಿಸಿದೆ.

Facebook Comments