ರಾಷ್ಟ್ರಪತಿ ಸೇರಿದಂತೆ ಸಂಸದರ 1 ವರ್ಷದ ಶೇ.30ರಷ್ಟು ವೇತನ ಕಡಿತಗೊಳಿಸಲು ಕೇಂದ್ರ ಸಂಪುಟ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ದೇಶದ ರಾಷ್ಟ್ರಪತಿ,ಉಪರಾಷ್ಟ್ರಪತಿ,ಪಧಾನಮಂತ್ರಿ, ರಾಜ್ಯಪಾಲರ, ಕೇಂದ್ರ ಸಚಿವ ಹಾಗೂ ಸಂಸದರ ಒಂದು ವರ್ಷದ ವೇತನ, ಪಿಂಚಣಿ ಮತ್ತು ಭತ್ಯೆಯನ್ನು ಶೇ.30ರಷ್ಟು ಕಡಿತಗೊಳಿಸಲು ಕೇಂದ್ರ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದೆ.

ಎಲ್ಲಾ ಸಂಸದರ ಸಂಬಳವನ್ನು ಶೇ.30ರಷ್ಟು ಪ್ರಧಾನಿ ಪರಿಹಾರ ನಿಧಿಗಾಗಿ ನೀಡುವ ಸಲುವಾಗಿ, ಏಪ್ರಿಲ್ 1ರಿಂದಲೇ ಕಡಿತ ಮಾಡಲಾಗುತ್ತಿದೆ.  ಇದರೊಂದಿಗೆ ಮುಂದಿನ ಎರಡು ವರ್ಷಗಳ ಕಾಲ ಸಂಸದರ ನಿಧಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾವಡೇಕರ್, ಎಲ್ಲಾ ಸಂಸದರ ಸಂಬಳ ಕಡಿತ ಮಾಡಲಾಗುತ್ತಿದೆ. ಸಂಸದರ ಶೇ.30ರಷ್ಟು ವೇತನ ಕಡಿತ ಮಾಡಲಾಗುತ್ತಿದೆ. 2 ವರ್ಷ ಸಂಸದರ ಸಂಬಳದಲ್ಲಿ ಕಡಿತ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ..ರಾಷ್ಟ್ರಪತಿ, ಉಪ ರಾಷ್ಟ್ರವತಿಯಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತದೆ.

ಶೇ.30ರಷ್ಟು ಸಂಬಳ ಪ್ರಧಾನಿ ಪರಿಹಾರ ನಿಧಿಗೆ ನೀಡಲಾಗುತ್ತದೆ. ವೇತನ ಕಡಿತ ಮಾಡಲು ಸಂಪುಟ ನಿರ್ಧಾರ ಕೈಗೊಳ್ಳಲಾಗಿದೆ. ಏಪ್ರಿಲ್ 1ರಿಂದಲೇ ಸಂಸದರ ವೇತನ ಕಟ್ ಮಾಡಲಾಗುತ್ತಿದೆ. 7,900 ಕೋಟಿ ರೂಪಾಯಿ ಸಂಗ್ರಹ ಆಗಲಿದೆ. ಇದನ್ನು ಪಿಎಂ ಪರಿಹಾಲ ನಿಧಿಗಾಗಿ ನೀಡಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.

ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ಹಾಗೂ ಇದರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದರು. ಈ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮುಂದಿನ ಎರಡು ವರ್ಷಗಳ ಕಾಲ ಸಂಸದರ ನಿಧಿ ಸ್ಥಗಿತಗೊಳಿಸುವುದರಿಂದ ಸುಮಾರು 7900 ಕೋಟಿ ಹಾಗೂ ಸಂಸದರ ವೇತನ, ಪಿಂಚಣಿ ಮತ್ತು ಭತ್ಯೆಯಲ್ಲಿ ಶೇ. 30ರಷ್ಟು ಕಡಿತಗೊಳಿಸುವುದರಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.

ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಹಣ ಹೊಂದಿಸಲು ಕೇಂದ್ರ ಸರ್ಕಾರ ಅನೇಕ ಮಾರ್ಗಗಳನ್ನು ಹುಡುಕಿದೆ. ವರ್ಷಕ್ಕೆ ಒಬ್ಬ ಸಂಸದರಿಗೆ 5 ಕೊಟಿ ರೂ. ಸಂಸದ ನಿಧಿ ಇರುತ್ತದೆ. ಎರಡೂ ವರ್ಷದ 10 ಕೋಟಿ ಹಣವನ್ನು ಕೇಂದ್ರ ಸರ್ಕಾರವೇ ಬಳಸಿಕೊಳ್ಳಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ 2020-21 ಮತ್ತು 2021-22ಸಾಲಿನ ಸಂಸದರ ನಿಧಿ ಸಂಪೂರ್ಣವಾಗಿ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ.

ಭಾರತ ಸರಕಾರದ ಸಂಚಿತ ನಿಧಿಯಿಂದ ಸಂಸತ್ತಿನ ರಾಜ್ಯಸಭೆ ಮತ್ತು ಲೋಕಸಭಾ ಸದಸ್ಯರಿಗೆ ವೇತನ ಮತ್ತು ಭತ್ಯೆ ನೀಡಲಾಗುತ್ತದೆ. ಇದೀಗ ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಒಂದು ರೀತಿಯ ತುರ್ತು ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿನ ಎಲ್ಲ ಸದಸ್ಯರ ವೇತನದಲ್ಲಿ ಒಂದು ವರ್ಷಕ್ಕೆ (2020) ಅನ್ವಯವಾಗುವಂತೆ 30 % ಕಡಿತ ಮಾಡಲು ನಿರ್ಧರಿಸಲಾಗಿದೆ.

ಇದರ ಜತೆಗೆ ಸಂಸದರ ಪ್ರಾದೇಶಿಕ ಅಭಿವೃದ್ದಿ ಯೋಜನೆಯನ್ನು 2 ವರ್ಷಗಳ ಅವಧಿಗೆ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಒಟ್ಟು 7,900 ಕೋಟಿ ರೂಪಾಯಿ ಸಂಚಿತ ನಿಧಿ ಸೇರಲಿದೆ ಎಂದು ಸಂಪುಟ ಸಭೆಯ ನಂತರ ಕೇಂದ್ರ ಸರಕಾರ ತಿಳಿಸಿದೆ.

Facebook Comments

Sri Raghav

Admin