ಬೆಂಗಳೂರಲ್ಲಿದ್ದಾರೆ 2,60,576 ಸೋಂಕಿತರ ಸಂಪರ್ಕಿತರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3-ನಗರದಲ್ಲಿ ಕೊರೊನಾ ಸೋಂಕಿತರಿಗಿಂತ ಅವರ ಸಂಪರ್ಕದಲ್ಲಿರುವವರ ಸಂಖ್ಯೆಯೇ ಎರಡು ಲಕ್ಷಕ್ಕಿಂತ ಹೆಚ್ಚಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ನಗರವೊಂದರಲ್ಲೇ 2,60,576 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ ಜನರನ್ನು ಬಿಬಿಎಂಪಿ ಗುರುತಿಸಿದೆ. 1,16,061 ಹೊಂದಿ ಪ್ರಾಥಮಿಕ ಸಂಪರ್ಕಿತರು ಹಾಗೂ 1,44,515 ಮಂದಿ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ.

ಎರಡು ಲಕ್ಷಕ್ಕೂ ಹೆಚ್ಚಿರುವ ಕೊರೊನಾ ಸೋಂಕಿತ ಸಂಪರ್ಕಿತರಲ್ಲಿ ಸೋಂಕು ಉಲ್ಭಣಗೊಂಡರೆ ಲಕ್ಷ ಲಕ್ಷ ಮಂದಿ ಕೊರೊನಾ ಪೀಡಿತರಾಗುವ ಸಾಧ್ಯತೆಗಳಿವೆ.

ಎಂಟು ವಲಯಗಳಲ್ಲಿ ದಕ್ಷಿಣ ವಲಯದಲ್ಲೇ ಅತಿಹೆಚ್ಚು ಸಂಪರ್ಕಿತರಿರುವುದು ವಿಶೇಷ. ಈ ವಲಯದಲ್ಲಿ 89333 ಸಂಪರ್ಕಿತರಿದ್ದರೆ ಪೂರ್ವ ವಲಯದಲ್ಲಿ 52265, ಪಶ್ಚಿಮದಲ್ಲಿ 51834, ಬೊಮ್ಮನಹಳ್ಳಿಯಲ್ಲಿ 15547, ಮಹದೇವಪುರದಲ್ಲಿ 15633, ದಾಸರಹಳ್ಳಿಯಲ್ಲಿ 14695, ಯಲಹಂಕದಲ್ಲಿ 12431 ಹಾಗೂ ರಾಜರಾಜೇಶ್ವರಿ ನಗರದಲ್ಲಿ 8838 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದಾರೆ.

ಎರಡು ಲಕ್ಷಕ್ಕೂ ಹೆಚ್ಚಿರುವ ಸೋಂಕಿತ ಸಂಪರ್ಕಿತರ ಮೇಲೆ ಬಿಬಿಎಂಪಿ ಹದ್ದಿನ ಕಣ್ಣಿಟ್ಟಿದ್ದು, ಪ್ರತಿಯೊಬ್ಬರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಮುಂದಾಗಿದೆ.

ಪಾಸಿಟಿವ್ ಕಾಣಿಸಿಕೊಳ್ಳುವ ವ್ಯಕ್ತಿಗಳನ್ನು ಕೊರೊನಾ ಆಸ್ಪತ್ರೆಗಳಿಗೆ ದಾಖಲಿಸಿ ಸೋಂಕು ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಒಂದು ವೇಳೆ ಸೋಂಕಿತರಿಗೆ ಯಾವುದೇ ಗುಣಲಕ್ಷಣಗಳು ಕಂಡುಬರದಿದ್ದರೆ ಅವರನ್ನು ಹೋಂ ಐಸೋಲೇಷನ್‍ಗೆ ಒಳಪಡಿಸಲು ತೀರ್ಮಾನಿಸಲಾಗಿದೆ.

Facebook Comments

Sri Raghav

Admin