ಹಾರರ್ ಸಿನಿಮಾಗಿಂತಲೂ ಹಾರಿಬಲ್ ಆಗಿದೆ ಅಮೆರಿಕದ ಸ್ಥಿತಿ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.26-ಹಾರರ್ ಸಿನಿಮಾಗಳನ್ನೂ ಮೀರಿಸುವ ರೀತಿಯಲ್ಲಿ ಕೊರೊನಾ ವೈರಸ್ ಅಮೆರಿಕ ಮೇಲೆ ಭಯಾನಕ ದಾಳಿ ಮುಂದುವರಿಸಿದೆ.  ವಿಶ್ವದಲ್ಲೇ ಕೋವಿಡ್-19ಗೆ ಅತಿಹೆಚ್ಚು ರೋಗಿಗಳು ಬಲಿಯಾದ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಪಾತ್ರವಾಗಿದೆ.

ಸೂಪರ್‍ಪವರ್ ದೇಶದಲ್ಲಿ ಮೃತರ ಸಂಖ್ಯೆ 54,000ಕ್ಕೇರಿದೆ. ಅಲ್ಲದೇ ಸೋಂಕಿತರ ಸಂಖ್ಯೆ 10 ಲಕ್ಷ ಸಮೀಪದಲ್ಲಿರುವ ದೊಡ್ಡ ಆತಂಕಕ್ಕೆ ಕಾರಣವಾಗಿದೆ.  ಸೋಂಕಿತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಮುಂದಿನ 24 ತಾಸುಗಳಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ವಾಷಿಂಗ್ಟನ್‍ನ ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಂಕ ಅಂಶಗಳ ಪ್ರಕಾರ, ನಿನ್ನೆ ಒಂದೇ ದಿನ ಅಮೆರಿಕದಲ್ಲಿ 2,494 ಮಂದಿ ಬಲಿಯಾಗಿದ್ದಾರೆ. ಅಲ್ಲದೇ ಸುಮಾರು 4,500 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

ಸ್ವಲ್ಪ ಸಮಾಧಾನಕರ ಸಂಗತಿ ಎಂದರೆ ಅಮೆರಿಕದಲ್ಲಿ ಸುಮಾರು 89,000 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಕಿಲ್ಲರ್ ವೈರಸ್ ಕೇಂದ್ರ ಬಿಂದು ಎನಿಸಿರುವ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ ಸು

ರು 20,000ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವೈರಸ್ ಬಲಿ ಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 3.50 ಲಕ್ಷ ದಾಟಿದೆ.
ಅನೇಕ ಭಯಾನಕ ಸಿನಿಮಾಗಳನ್ನು ನಿರ್ಮಿಸಿ ಜನರನ್ನು ಬೆಚ್ಚಿಬೀಳಿಸುತ್ತಿದ್ದ ಅಮೆರಿಕದಲ್ಲೇ ಹಾರರ್ ಮೂವೀಗಳಿಗಿಂತಲೂ ಭಯಂಕರ ಪರಿಸ್ಥಿತಿ ನೆಲೆಸಿರುವುದು ದುರದೃಷ್ಟಕರ.

Facebook Comments

Sri Raghav

Admin