ಇದು ರಾಜ್ಯದ ಜನ ಭಪಡಲೇಬೇಕಾದ ಬೆಳವಣಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜು.20- ಕಳೆದ ಒಂದು ವಾರದಿಂದ ಕೊರೊನಾ ಸೋಂಕಿತರ ಚೇತರಿಕೆಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ.

ಖುದ್ದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರೇ ಈ ಬಗ್ಗೆ ಟ್ವಿಟ್ ಮಾಡಿದ್ದು, ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಚೇತರಿಕೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಸುಮಾರು 23 ಸಾವಿರ ಪ್ರಕರಣಗಳಲ್ಲಿ ಶೇ.77.4 ಮಂದಿಗೆ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಈಗ ಇರುವ ಸೋಂಕಿತರು ಗುಣಮುಖರಾಗುತ್ತಿದ್ದಂತೆ ಚೇತರಿಕೆಯ ಪ್ರಮಾಣದಲ್ಲೂ ಸುಧಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗವರೆಗೂ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 63,772ರಷ್ಟಾಗಿದೆ. ಅದರಲ್ಲಿ 39,370 ಸಕ್ರಿಯ ಪ್ರಕರಣಗಳಿವೆ. 23,065 ಮಂದಿ ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಚೇತರಿಕೆ ಕಾಣುತ್ತಿರುವವರ ಪ್ರಮಾಣ ಶೇ.63ರಷ್ಟಿದೆ. ಆದರೆ, ರಾಜ್ಯದಲ್ಲಿ 36.16 ಮಾತ್ರ ರಿಕವರಿ ರೇಟ್ ಇದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.61.73ರಷ್ಟಿದೆ.

ಮರಣದ ಪ್ರಮಾಣ ಶೇ.2.08ರಷ್ಟಿದೆ. ಒಟ್ಟು 1331 ಮಂದಿ ಕೋವಿಡ್‍ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಿನ್ನೆ ಸಂಜೆ ಬಿಡುಗಡೆಯಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Facebook Comments

Sri Raghav

Admin