ಬೆಂಗಳೂರಲ್ಲಿ ಕ್ಷೀಣಿಸುತ್ತಿದೆ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25-ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಕಾಲಕ್ರಮೇಣ ಕ್ಷೀಣಿಸುತ್ತಿದೆ. ಇಂದು ನಗರದಲ್ಲಿ ಕೇವಲ 15,806 ಹೊಸ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ ಒಂದು ವಾರದಿಂದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇ.50 ರಷ್ಟು ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿದುಬಂದಿದೆ.

ಬೊಮ್ಮನಹಳ್ಳಿ ವಲಯದಲ್ಲಿ 1897, ದಾಸರಹಳ್ಳಿಯಲ್ಲಿ 408, ಪೂರ್ವದಲ್ಲಿ 2775, ಮಹದೇವಪುರ 2937, ಆರ್.ಆರ್.ನಗರ 746, ದಕ್ಷಿಣದಲ್ಲಿ 1815, ಪಶ್ಚಿಮ ವಲಯದಲ್ಲಿ 1051, ಯಲಹಂಕದಲ್ಲಿ 1258, ಆನೇಕಲ್‍ನಲ್ಲಿ 884 , ಪೂರ್ವ ತಾಲೂಕಿನಲ್ಲಿ 305, ಉತ್ತರ ತಾಲೂಕಿನಲ್ಲಿ 206,  ದಕ್ಷಿಣ ತಾಲೂಕಿನಲ್ಲಿ 348 ಹಾಗೂ ಬೆಂಗಳೂರು ಹೊರಗಿನ 1176 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

Facebook Comments