ವಿದೇಶದಿಂದ ರಾಜ್ಯಕ್ಕೆ ಬಂದ 5 ಜನರ ಮೇಲೆ ತೀವ್ರ ನಿಗಾ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಮಾ,24- ವಿದೇಶಕ್ಕೆ ದುಡಿಯಲು ಹೋಗಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ 5ಜನರು ತಮ್ಮ ತಮ್ಮ ಊರಿಗೆ ಮರಳಿದ್ದು ಈ ಎಲ್ಲರನ್ನು ಪರೀಕ್ಷಿಸಿದ ವೈದ್ಯರು 14 ದಿನಗಳವರೆಗೆ ಮನೆಯಿಂದ ಹೊರಬಾರದಂತೆ ಸೂಚಿಸಿದ್ದಾರೆ.

ತಾಲೂಕಿನ ಮೊರಬ ಗ್ರಾಮದ ವ್ಯಕ್ತಿ (ಕುವೈತ್‍ನಿಂದ), ಪಟ್ಟಣದ ಬಸವೇಶ್ವರ ನಗರದ ವ್ಯಕ್ತಿ ಹಾಗೂ ಶಿರಕೋಳ ಗ್ರಾಮದ ವ್ಯಕ್ತಿ(ದುಬೈನಿಂದ), ವಿಯೇಟ್ನಾಂನಿಂದ ವಾಪಸ್ ಆದ ಪಡೇಸೂರ ಗ್ರಾಮದ ವ್ಯಕ್ತಿ ಹಾಗೂ ನಲವಡಿ ಗ್ರಾಮಕ್ಕೆ ಲಡಾಖನಿಂದ ಆಗಮಿಸಿದ ವ್ಯಕ್ತಿ. ಹೀಗೆ 5 ಜನರನ್ನು 14 ದಿನಗಳವರೆಗೆ ಮನೆಯಿಂದ ಹೊರಬಾರದಂತೆ(ಹೋಮ್ ಕ್ವಾರಂಟೇನ್) ತಾಲೂಕಾ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ.

ನವಲಗುಂದ ಪಟ್ಟಣದ ಬಸವೇಶ್ವರ ನಗರದ ವ್ಯಕ್ತಿಯೊಬ್ಬರ ಮನೆಗೆ ವೈದ್ಯರು ಹಾಗೂ ಅಧಿಕಾರಿಗಳು ಪದೆ ಪದೆ ತೆರಳಿ ವ್ಯಕ್ತಿಯ ಮೇಲೆ ನಿಗಾ ಇರಿಸಿ ಪರೀಕ್ಷಿಸುತ್ತಿರುವ ಹಿನ್ನೆಲೆಯಲ್ಲಿಅಲ್ಲಿನ ನಾಗರಿಕರು ಕೊರೊನಾ ಭೀತಿಯಿಂದ ಆತಂಕ್ಕೊಳಗಾದರು.

ಶಂಕಿತ ವ್ಯಕ್ತಿಯ ಮನೆಯಲ್ಲಿಶೌಚಾಲಯ ಇಲ್ಲದಿರುವುದರಿಂದ ಹೊರಗಡೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದ್ದರ ಹಿನ್ನೆಲೆಯಲ್ಲಿವ್ಯಕ್ತಿಯನ್ನು ಸರಕಾರಿ ಆಸ್ಪತ್ರೆ ಅಥವಾ ಹುಬ್ಬಳ್ಳಿಯ ಕಿಮ್ಸ್‍ನಲ್ಲಿಕ್ವಾರಂಟೇನ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Facebook Comments

Sri Raghav

Admin