ಭಾರತದಲ್ಲಿ ಕೇಕೆ ಹಾಕುತ್ತಿದೆ ಕೋವಿಡ್ : 7.20 ಲಕ್ಷ ಸೋಂಕಿತರು, 20,000ಕ್ಕೂ ಹೆಚ್ಚು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜು.7-ಕಿಲ್ಲರ್ ಕೋವಿಡ್ ವೈರಸ್ ಗಂಡಾಂತರದಿಂದ ತತ್ತರಿಸುತ್ತಿರುವ ಭಾರತದಲ್ಲಿ ಪಿಡುಗಿನ ಕರ್ಮಕಾಂಢ ಯಥಾಪ್ರಕಾರ ಮುಂದುವರಿದಿದೆ. ದಿನೇ ದಿನೇ ಸೋಂಕು ಮತ್ತು ಸಾವು ಪ್ರಕರಣಗಳು ಅತಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ದೇಶವಾಸಿಗಳು ಹೆದರಿ ಕಂಗಲಾಗಿದ್ದಾರೆ.

24 ತಾಸುಗಳಲ್ಲಿ 22,252 ಸಾಂಕ್ರಾಮಿಕ ರೋಗ ಪ್ರಕರಣಗಳು ವರದಿಯಾಗಿದೆ. ಒಂದೇ ದಿನ 467 ಸಾವುಗಳು ಸಂಭವಿಸಿದೆ. ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 7.20 ಲಕ್ಷ ಹಾಗೂ ಸಾವಿನ ಪ್ರಮಾಣ 20,500ರ ಸನಿಹದಲ್ಲಿದೆ. ದೇಶದಲ್ಲಿ 2.60 ಲಕ್ಷ ಆಕ್ಟಿವ್ ಕೇಸ್‍ಗಳಿದ್ದು, 4.40 ಲಕ್ಷ ರೋಗಿಗಳು ಡಿರ್ಸಾಜ್ ಆಗಿದ್ದಾರೆ.

ದೇಶದಲ್ಲಿ ನಿನ್ನೆವರೆಗೆ ಒಂದು ಕೋಟಿಗೂ ಅಧಿಕ ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಗೆ ಒಳಪಡಿಸಲಾಗಿದೆ.ದೇಶದಲ್ಲಿ ಜುಲೈ ತಿಂಗಳ ಏಳನೇ ದಿನವೂ ಹೆಮ್ಮಾರಿ ಆರ್ಭಟ ಅತಂಕಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಇನ್ನೆರಡು ತಿಂಗಳು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ.

ಈ ಪೀಡೆಯ ಹಾವಳಿ ಈ ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದ್ದು, ಭಾರತೀಯರ ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ. ಮುಂದೇನು ಎಂಬ ಭಯ ಎಲ್ಲರಲ್ಲೂ ಮನೆ ಮಾಡಿದೆ.ನಿನ್ನೆ ಒಂದೇ ದಿನ (24 ಗಂಟೆಗಳ ಅವಧಿ) 22,252 ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ಸತತ ಐದು ದಿನಗಳಿಂದ ದೇಶದಲ್ಲಿ 20,000ಕ್ಕೂ ಹೆಚ್ಚು ಸಾಂಕ್ರಾಮಿಕ ರೋಗಗಳು ಪತ್ತೆಯಾಗಿರುವುದು ಆಘಾತಕಾರಿಯಾಗಿದೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ 18,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಇದು ಸತತ ಒಂಭತ್ತನೇ ದಿನ.ನಿರಂತರ 28 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ. ಅಲ್ಲದೇ 14,000+ ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಸತತ 18ನೇ ದಿನವಾಗಿದೆ. ನಿರಂತರ 14 ದಿನಗಳಿಂದ ದಿನಂಪ್ರತಿ 15,000ಕ್ಕೂ ಅಧಿಕ ಸಾಂಕ್ರಾಮಿಕ ರೋಗಗಳು ದೃಢಪಟ್ಟಿವೆ.

ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 20,700 ಮತ್ತು ಸೋಂಕು ಬಾಧಿತರ ಸಂಖ್ಯೆ 7.35 ಲಕ್ಷ ತಲುಪುವ ಆತಂಕವಿದೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 467 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 20,166ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 7,19,665 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.61.13ರಷ್ಟು ಏರಿಕೆ ಕಂಡುಬಂದಿದ್ದು, 4.40 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿರುವುದು ಸಮಾಧಾನಕಾರ ಸಂಗತಿ.

Facebook Comments