ಭಾರತದಲ್ಲಿ ಒಂದೇ ದಿನ 24879 ಮಂದಿಗೆ ಕೊರೊನಾ ದೃಢ, 487 ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.9- ಭಾರತದಲ್ಲಿ ಗುರುವಾರ ಗರಿಷ್ಠ ಸಂಖ್ಯೆಯ ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನ 24879 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಸೋಂಕಿತರ ಸಂಖ್ಯೆ 7,67,296ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದು ದೇಶದಲ್ಲಿ ದಾಖಲಾದ 2ನೇ ದೈನಂದಿನ ಗರಿಷ್ಠ ಸಂಖ್ಯೆಯಾಗಿದೆ. ಈ ಮೂಲಕ ಸತತ 7ನೇ ದಿನವೂ 20 ಸಾವಿರಕ್ಕಿಂತಲೂ ಅಧಿಕ ಸೋಂಕು ಪ್ರಕರಣ ದಾಖಲಾಗಿದೆ. ಇದೇ ವೇಳೆ ದೇಶದಲ್ಲಿ ಒಂದೇ ದಿನ 487 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 21,129ಕ್ಕೆ ತಲುಪಿದೆ.

ಇದೇ ವೇಳೆ 7,67,296 ಮಂದಿ ಸೋಂಕಿತರ ಪೈಕಿ 476378 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನು ದೇಶದಲ್ಲಿ 269789 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ. ಮಹಾರಾಷ್ಟ್ರದಲ್ಲಿ 6,603 ಮಂದಿ ಕೊರೋನಾಗೆ ತುತ್ತಾಗಿದ್ದು, ಸೋಂಕಿತರ ಸಂಖ್ಯೆ 2,23,724ಕ್ಕೆ ಏರಿಕೆಯಾಗಿದೆ. 198 ಸಾವಿನೊಂದಿಗೆ ಮೃತರ ಸಂಖ್ಯೆ 9448ಕ್ಕೆ ಏರಿಕೆಯಾಗಿದ್ದು, 10 ಸಾವಿರ ಗಡಿಗೆ ಸಮೀಪಿಸಿದೆ.

ಜುಲೈ 4ರಂದು 608 ಸಾವು ಸಂಭವಿಸಿದ್ದು ಇದುವರೆಗಿನ ದಾಖಲೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,68,322ಕ್ಕೇರಿದ್ದು, ಏಳು ಲಕ್ಷದ ಗಡಿ ದಾಟಿ ಕೇವಲ ಎರಡು ದಿನಗಳಲ್ಲಿ ಇಷ್ಟೊಂದು ಪ್ರಕರಣಗಳು ವರದಿಯಾಗಿವೆ. 4,75,849 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಪ್ರಮಾಣ ಶೇಕಡ 62ರಷ್ಟಿದೆ.

ಮಂಗಳವಾರ ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದ ಮಹಾರಾಷ್ಟ್ರದಲ್ಲಿ ಬುಧವಾರ 6,603 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,23,724ಕ್ಕೇರಿದೆ. 198 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 9,448ಕ್ಕೇರಿದೆ. ತಮಿಳುನಾಡಿನಲ್ಲಿ 3,756 ಪ್ರಕರಣಗಳು ವರದಿಯಾಗಿ 64 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 1,700ಕ್ಕೇರಿದೆ.

ದಿಲ್ಲಿಯಲ್ಲಿ 2,033 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,04,864ಕ್ಕೇರಿದೆ. 48 ಸಾವು ಸಂಭವಿಸಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 3,213 ಆಗಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂ.11ರಂದು 10,956, ಜೂ.12ರಂದು 11,458, ಜೂ.13ರಂದು 11,929, ಜೂನ್ 14ರಂದು 11,502, ಜೂ.15ರಂದು 10,667, ಜೂ.16ರಂದು 10,974,

ಜೂ.17ರಂದು 12,881, ಜೂ.18ರಂದು 13,586, ಜೂ.19ರಂದು 14,516, ಜೂ.20ರಂದು 15,413, ಜೂ.21ರಂದು 14,821, ಜೂ.22ರಂದು 14,933, ಜೂನ್ 23ರಂದು 15,968, ಜೂನ್ 24ರಂದು 16,922, ಜೂ.25ರಂದು 17,296, ಜೂ.26ರಂದು 18,552, ಜೂ.27ರಂದು 19,906, ಜೂ.28ರಂದು 19,459, ಜೂ.29ರಂದು 18,522, ಜೂ.30ರಂದು 18,653, ಜುಲೈ 1ರಂದು 19,148, ಜು.2ರಂದು 20,903, ಜು.3 ರಂದು 22,771, ಜು.4ರಂದು 24,850, ಜು.5 ರಂದು 24,248, ಜು.6ರಂದು 22,252, ಜು.7ರಂದು 22,752 ಹಾಗೂ ಜು.8ರಂದು 24,879 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 2,67,061 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ಈ ಬಗ್ಗೆ ಐಸಿಎಂಆರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2,67,061 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಮೂಲಕ ದೇಶದಲ್ಲಿ ಈವರೆಗೂ ಅಂದರೆ ಜು.9ರವರೆಗೂ 1,07,40,832 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

 

Facebook Comments