ಭಾರತದಲ್ಲಿ ಕೊರೋನಾ ಸಾರ್ವಕಾಲಿಕ ದಾಖಲೆ, ಒಂದೇ ದಿನ 90,632 ಹೊಸ ಕೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.6-ಭಾರತದಲ್ಲಿ ಕಿಲ್ಲರ್ ಕೊರೊನಾ ವೈರಸ್ ರಣಕೇಕೆ ಮುಂದುವರಿದಿದೆ. 24 ತಾಸುಗಳ ಅವಧಿಯಲ್ಲಿ ಸರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಅಂದರೆ 90,632 ಮಂದಿಯಲ್ಲಿ ಸೋಂಕು ತಗುಲಿದ್ದು, 1,065ಜನರನ್ನುಡೆಡ್ಲಿ ವೈರಸ್ ಬಲಿ ಪಡೆದಿದೆ. ದೇಶದಲ್ಲಿಒಟ್ಟಾರೆ ರೋಗಿಗಳ ಸಂಖ್ಯೆ 42 ಲಕ್ಷ ಸನಿಹವಿದ್ದು, ಮೃತರ ಪ್ರಮಾಣವೂ ಸಹ 71,000 ಸಮೀಪದಲ್ಲಿದೆ.

ಸತತಐದನೆ ದಿನ 83,000+ ಪಾಸಿಟಿವ್ ಮತ್ತು 1,000ಕ್ಕೂ ಅಧಿಕ ಸಾವು ಪ್ರಕರಣಗಳು ವರದಿಯಾಗಿರುವುದು ದೇಶದಲ್ಲಿನ ಗಂಡಾಂತರ ಸ್ಥಿತಿಗೆ ಸಾಕ್ಷಿಯಾಗಿದೆ.  ಕೋವಿಡ್-19 ಹಾವಳಿ ಸೆಪ್ಟೆಂಬರ್‍ನಲ್ಲೂಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗಲಿದೆ ಎಂಬ ಆರೋಗ್ಯತಜ್ಞರ ಮುನ್ಸೂಚನೆಯಂತೆ ವೈರಸ್ ಹಾವಳಿ ಏರುಗತಿಯಲ್ಲೇ ಸಾಗಿದೆ.

ಕೇವಲ 13 ದಿನಗಳಲ್ಲೇ 10 ಲಕ್ಷಕ್ಕೂಅಧಿಕ ಮಂದಿಗೆ ವೈರಾಣು ಸೋಂಕು ತಗುಲಿದೆ. ಆಗಸ್ಟ್ 7ರಂದು 10 ಲಕ್ಷಇದ್ದ ಸೋಂಕಿನ ಪ್ರಮಾಣಆ.23ರಂದು 20 ಲಕ್ಷಕ್ಕೇರಿತು. ನಂತರ ಕೇವಲ 16 ದಿನಗಳಲ್ಲಿ ಮತ್ತೆ 10 ಲಕ್ಷ ಪಾಸಿಟಿವ್ ಪ್ರಕರಣಗಳು ವರದಿಯಾಗಿತ್ತು. ನಿನ್ನೆ 40 ಲಕ್ಷದಾಟಿದೆ.  ಭಾರತವುಈಗ ಬ್ರೆಜಿಲ್‍ನನ್ನು ಹಿಂದಿಕ್ಕಿ ಎರಡನೇಸ್ಥಾನಕ್ಕೇರಿದೆ. ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್ ಮತ್ತು ಭಾರತ 41 ಲಕ್ಷ ಸೋಂಕು ಪ್ರಕರಣಗಳನ್ನು ದಾಟಿರುವ ವಿಶ್ವದ ಮೂರು ರಾಷ್ಟ್ರಗಳು ಎನಿಸಿವೆ.

ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕೊರೊನಾ ಹಾವಳಿ ಕ್ರಮೇಣ ಇಳಿಮುಖವಾಗುತ್ತಿದ್ದರೆ, ಭಾರತದಲ್ಲಿ ಮಾತ್ರ ವೈರಸ್ ದಾಳಿ ಏರುಗತಿಯಲ್ಲಿರುವ ಚಿಂತೆಗೀಡು ಮಾಡುವ ಸಂಗತಿಯಾಗಿದೆ.  ಸಾಂಕ್ರಾಮಿಕರೋಗದ ಮಹಾಸ್ಫೋಟದಲ್ಲಿ ಮತ್ತೆ ನಿನ್ನೆದಾಖಲೆ ಪ್ರಮಾಣದಲ್ಲಿ ಹೊಸ ವೈರಾಣು ಸೋಂಕುಗಳು ವರದಿಯಾಗಿವೆ.

ಇದರ ನಡುವೆಯೂಚೇತರಿಕೆ ಪ್ರಮಾಣದಲ್ಲಿ ಶೇ.77.32ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆದೇಶದಲ್ಲಿ4.88ಕೋಟಿಗೂ ಹೆಚ್ಚುಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆಕಾರಣವಾಗಿದೆ. ಇದರ ನಡುವೆಯೂ 31.80ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ.

24 ತಾಸುಗಳಲ್ಲಿ 1,065ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ70,626ಕ್ಕೇರಿದೆ. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 41,13,817ದಾಟಿದೆ. ದೇಶದಲ್ಲಿಈಗ 8,62,320ಆಕ್ಟಿವ್ ಕೇಸ್‍ಗಳಿದ್ದು, 31,80,865 ಹೆಚ್ಚು ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಆಕ್ಟಿವ್ ಕೇಸ್‍ಗಳಿಗೆ ಹೋಲಿಸಿದಲ್ಲಿ, ರಿಕವರಿರೇಟ್‍ನಲ್ಲಿಸುಮಾರು ನಾಲ್ಕು ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಚೇತರಿಕೆ ಪ್ರಮಾಣ ಶೇ.77.32ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.72ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.

ದೇಶದಾದ್ಯಂತ ನಿನ್ನೆ ಒಂದೇ ದಿನ 10,92,654ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ4,88,31,145ಕ್ಕೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments