ಭಾರತದಲ್ಲಿ ಒಂದೇ ದಿನ 96,559 ಮಂದಿಗೆ ಕೊರೋನಾ ಪಾಸಿಟಿವ್,1,209 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.11- ಭಾರತದಲ್ಲಿ ಸೆಪ್ಟೆಂಬರ್ ವೇಳೆಗೆ ಕೊರೊನಾ ಮಾಹಾಮಾರಿಯ ಹಾವಳಿ ಕಡಿಮೆಯಾಗುತ್ತದೆ ಎಂಬ ಆಶಾಭಾವನೆ ಹುಸಿಯಾಗುತ್ತಿದ್ದು, ಬದಲಿಗೆ ಸೋಂಕು ಮತ್ತು ಸಾವು ಪ್ರಕರಣಗಳು ಆತಂಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ಜಗತ್ತಿನಕೋವಿಡ್ ಹಾವಳಿ ಪೀಡಿತ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಹೆಮ್ಮಾರಿಯ ಆರ್ಭಟ ಮತ್ತಷ್ಟು ಜೋರಾಗಿದ್ದು, ಸೋಂಕಿನಲ್ಲಿ ಮತ್ತೆ ಹೊಸ ದಾಖಲೆ ನಿರ್ಮಾಣವಾಗಿದೆ.

ಒಂದೇ ದಿನ 96,559 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಮೊನ್ನೆ 95,745 ಹೊಸ ಕೇಸ್‍ಗಳು ದಾಖಲಾಗಿತ್ತು. ಇದರೊಂದಿಗೆದೇಶದಲ್ಲಿ ಸತತಎರಡನೇ ದಿನ 95,000+ ಸೋಂಕು ಪ್ರಕರಣಗಳು ವರದಿಯಾಗಿದೆ.  24 ತಾಸುಗಳ ಅವಧಿಯಲ್ಲಿ 1,209ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದು ಕೊಂಡಿದೆ.

ಇದು ಕೂಡ ಒಂದೇ ದಿನದಲ್ಲಿಗರಿಷ್ಠ ಸಂಖ್ಯೆಯ ಸಾವಿನ ಪ್ರಕರಣವಾಗಿದೆ. ಸತತ ಐದನೇ ದಿನ 1,110ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆದೇಶದಲ್ಲಿ ಮೃತರ ಸಂಖ್ಯೆ76,000 ದಾಟಿದೆ. ಈ ತಿಂಗಳ ಆರಂಭದಿಂದಲೂ ಅಬ್ಬರಿಸಿ ಬೊಬ್ಬರಿಯುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ನಿಂದ ದೇಶದಲ್ಲಿ ಗಂಡಾಂತರಕಾರಿ ಪರಿಸ್ಥಿತಿ ತಲೆದೋರಿದೆ.

ಭಾರತದಲ್ಲಿ 11 ದಿನಗಳಿಂದಲೂ ಸರಾಸರಿ 90,000 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ನಿನ್ನೆ 96,559 ಸೋಂಕು ಪ್ರಕರಣಗಳೊಂದಿಗೆ. ಒಟ್ಟು ರೋಗಿಗಳ ಸಂಖ್ಯೆ45,62,414ಕ್ಕೇರಿದ್ದು, ಇಂದು ರಾತ್ರಿ ವೇಳೆಗೆ ಹೊತ್ತಿಗೆ 46ಲಕ್ಷ ಮೀರುವ ಸಾಧ್ಯತೆ ಇದೆ.

ಆಗಸ್ಟ್ 7ರಂದು 20 ಲಕ್ಷಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷದಾಟಿತ್ತು.  ಈ ತಿಂಗಳಲ್ಲಿ ಸತತ11ನೇದಿನ 1,000ಕ್ಕೂ ಅಧಿಕ ಸಾವು ಪ್ರಕರಣಗಳು ವರದಿಯಾಗಿರುವುದು ದೇಶದಲ್ಲಿನ ಆತಂಕಕಾರಿ ಸ್ಥಿತಿಗೆ ಸಾಕ್ಷಿಯಾಗಿದೆ.

ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.77.65ರಷ್ಟು ವೃದ್ದಿ ಕಂಡು ಬಂದಿದ್ದು, ಈವರೆಗೆ ದೇಶದಲ್ಲಿ ಸುಮಾರು 5.41ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ 9.43 ಲಕ್ಷಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ.

ಇದರ ನಡುವೆಯೂಸುಮಾರು 35.42ಲಕ್ಷ ಮಂದಿ ಹೆಮ್ಮಾರಿಯ ಬಿಗಿ ಹಿಡಿತದಿಂದರಾಗಿದ್ದಾರೆ.  ದೇಶದಲ್ಲಿಈಗ 9,43,480ಆಕ್ಟಿವ್ ಕೇಸ್‍ಗಳಿದ್ದು, 35,42,665ಕ್ಕೂ ಹೆಚ್ಚುರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಆಕ್ಟಿವ್ ಕೇಸ್‍ಗಳಿಗೆ ಹೋಲಿಸಿದಲ್ಲಿ, ರಿಕವರಿರೇಟ್‍ನಲ್ಲಿಸುಮಾರು ನಾಲ್ಕು ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಚೇತರಿಕೆ ಪ್ರಮಾಣಶೇ.77.65ರಷ್ಟುಏರಿಕೆಮತ್ತು ಸಾವಿನ ಪ್ರಮಾಣ ಶೇ.1.67ರÀಷ್ಟು ಇಳಿದಿದೆ ಎಂದುಕೇಂದ್ರಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.

ದೇಶದಾದ್ಯಂತ ನಿನ್ನೆಒಂದೇ ದಿನ 11,63,542ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ5,40,97,975ಕ್ಕೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

ಈ ಮಧ್ಯೆ, ಕಿಲ್ಲರ್‍ಕೊರೊನಾ ವೈರಸ್ ನಿಗ್ರಹಕ್ಕಾಗಿ ಲಸಿಕೆಗಳು ಮತ್ತು ಔಷಧಗಳ ಅಭಿವೃದ್ದಿಅಂತಿಮ ಹಂತದಲ್ಲಿದ್ದು ಅತಿಶೀಘ್ರದಲ್ಲೇ ಲಭಿಸುವ ಆಶಾಭಾವನೆಯೂ ಇದೆ.

Facebook Comments