ಭಾರತದಲ್ಲಿ ಕೇವಲ 11 ದಿನಗಳಲ್ಲಿ 10 ಲಕ್ಷ ಜನರಿಗೆ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.16-ಕೊರೊನಾ ಸೋಂಕು ಮತ್ತುಸಾವು ಪ್ರಕರಣಗಳಲ್ಲಿ ನಿರಂತರ ಹೆಚ್ಚಳ ಕಂಡುಬರುತ್ತಿರುವುದುದೇಶಕ್ಕೆಗಂಡಾಂತರಕಾರಿಯಾಗಿ ಪರಿಣಮಿಸಿದೆ. ಸಾಂಕ್ರಾಮಿಕ ಸೋಂಕು ಕ್ಷಿಪ್ರವಾಗಿಏರುತ್ತಿದ್ದು, ಕೇವಲ 11 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್-19 ವೈರಾಣುರೋಗತಗುಲಿದೆ ಜಗತ್ತಿನಕೋವಿಡ್ ಹಾವಳಿ ಪೀಡಿತ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಹೆಮ್ಮಾರಿಯ ಆರ್ಭಟ ಏರುಗತಿಯಲ್ಲಿಯೇ ಇದೆ.

ಇಂದು ಬೆಳಗ್ಗೆ 8 ಗಂಟೆಗೆಕೊನೆಗೊಂಡ 24 ತಾಸುಗಳ ಅವಧಿಯಲ್ಲಿ90,123 (ಮೊನ್ನೆ83,809) ಸೋಂಕು ಪ್ರಕರಣಗಳು ದಾಖಲಾಗಿದೆ. ದೇಶಲ್ಲೀಗ ಸೋಂಕಿತರ ಸಂಖ್ಯೆ51 ಲಕ್ಷ ಸನಿಹದಲ್ಲಿದೆ.  ಒಂದೇ ದಿನ 1,290 (ಮೊನ್ನೆ 1,054)ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಸತತ11ನೇ ದಿನ 1,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆದೇಶದಲ್ಲಿ ಮೃತರ ಸಂಖ್ಯೆ82,066ದಾಟಿದೆ.

ಭಾರತದಲ್ಲಿ16 ದಿನಗಳಿಂದಲೂ ಸರಾಸರಿ 90,000 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ನಿನ್ನೆ90,123 ಸೋಂಕು ಪ್ರಕರಣಗಳೊಂದಿಗೆ. ಒಟ್ಟು ರೋಗಿಗಳ ಸಂಖ್ಯೆ50,20,359ಕ್ಕೇರಿದ್ದು, ನಾಳೆ ವೇಳೆಗೆ51 ಲಕ್ಷ ಮೀರುವ ಸಾಧ್ಯತೆ ಇದೆ. ಆಗಸ್ಟ್ 7ರಂದು 20 ಲಕ್ಷಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷದಾಟಿತ್ತು.

ಕೇವಲ 11 ದಿನಗಳಲ್ಲಿ ಅಂದರೆ ಸೆ.15ರಂದು 50 ಲಕ್ಷದಾಟಿದೆ. ಪರಿಸ್ಥಿತಿ ಇದೇರೀತಿ ಮುಂದುವರಿದರೆಅಕ್ಟೋಬರ್ ವೇಳೆಗೆ ದೇಶದಲ್ಲಿ 80 ಲಕ್ಷಕ್ಕೂಅಧಿಕ ಸೋಂಕು ಪ್ರಕರಣಗಳು ದಾಖಲಾಗುವಆತಂಕವಿದೆ.  ಇದರ ನಡುವೆಯೂಚೇತರಿಕೆ ಪ್ರಮಾಣದಲ್ಲಿ ಶೇ.78.53ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆದೇಶದಲ್ಲಿಸುಮಾರು 5.94ಕೋಟಿಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿಒಂದೆಡೆಚೇತರಿಕೆಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ9.95ಲಕ್ಷಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆಕಾರಣವಾಗಿದೆ.

ಇದರ ನಡುವೆಯೂಸುಮಾರು39.42ಲಕ್ಷ ಮಂದಿ ಹೆಮ್ಮಾರಿಯಬಿಗಿಹಿಡಿತದಿಂದಪಾರಾಗಿದ್ದಾರೆ.  ದೇಶದಲ್ಲಿಈಗ 9,95,935ಆಕ್ಟಿವ್ ಕೇಸ್‍ಗಳಿವೆ. ಸಕ್ರಿಯ ಪ್ರಕರಣಗಳಿಗೆ ಗಳಿಗೆ ಹೋಲಿಸಿದಲ್ಲಿ, ರಿಕವರಿರೇಟ್‍ನಲ್ಲಿನಾಲ್ಕು ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.  ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳುವರದಿಯಾಗುತ್ತಲೇ ಇವೆ.

ದೇಶದಾದ್ಯಂತ ನಿನ್ನೆಒಂದೇ ದಿನ 11.16 ಲಕ್ಷಕ್ಕೂ ಹೆಚ್ಚುಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ5.94ಕೋಟಿಗೂಅಧಿಕಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments