ಸುಪ್ರೀಂಕೋರ್ಟ್ ಸ್ತಬ್ದ : ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.23-ಮಾರಕ ಕೊರೊನಾ ವೈರಾಣು ಸೋಂಕು ದೇಶಾದ್ಯಂತ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ತನ್ನ ನ್ಯಾಯಾಂಗ ಕಲಾಪವನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಅಲ್ಲದೆ ವಿಚಾರಣೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ನಡೆಸುವುದಾಗಿ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಈ ಕುರಿತು ಇಂದು ಹೇಳಿಕೆ ನೀಡಿತು. ಮಂಗಳವಾರ ಸಂಜೆ ವೇಳೆಗೆ ಸುಪ್ರೀಂಕೋರ್ಟ್‍ನ ಎಲ್ಲ ವಕೀಲರ ಕೊಠಡಿಗಳು ಮತ್ತು ಆವರಣಗಳನ್ನು ಬಂದ್ ಮಾಡಲಾಗುತ್ತದೆ.

ಬಹುಮುಖ್ಯ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತದೆ ಎಂದು ತಿಳಿಸಿತು. ಅನಗತ್ಯವಾಗಿ ವಕೀಲರು ಮತ್ತು ಕಕ್ಷಿದಾರರು ಕೋರ್ಟ್ ಆವರಣದೊಳಗೆ ಸುಳಿಯಬಾರದು. ನಾಳೆಯಿಂದ ಈ ಸಂಬಂಧ ನಿರ್ಬಂಧ ವಿಧಿಸಲಾಗುವುದು. ಮುಂದಿನ ಆದೇಶದವರೆಗೆ ಕೋರ್ಟ್ ಕಲಾಪಗಳು ಸ್ಥಗಿತಗೊಳ್ಳಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ತಿಳಿಸಿದರು.

Facebook Comments

Sri Raghav

Admin