ಕೊರೊನಾ ಸುನಾಮಿಗೆ 1,15,000 ಜೀವಗಳು ಬಲಿ, 22 ಲಕ್ಷ ಮಂದಿಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಮಿಲಾನ್/ಮ್ಯಾಡ್ರಿಡ್, ಏ.12- ಕಿಲ್ಲರ್ ಕೊರೊನಾ ಚಕ್ರವ್ಯೂಯದೊಳಗೆ ಸಿಲುಕಿ ಇಡೀ ಜಗತ್ತೇ ನರಳುತ್ತಿದೆ. . ವಿಶ್ವದಾದ್ಯಂತ ಈವರೆಗೆ ಸುಮಾರು 1,15,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 22 ಲಕ್ಷಕ್ಕೇರಿದೆ.

ಕೊರೊನಾ ದಾಳಿಯಿಂದ ಮಹಾಶಕ್ತಿಶಾಲಿ ದೇಶ ಅಮೆರಿಕ ಹೆದರಿ ಕಂಗಲಾಗಿದೆ. ಅಲ್ಲಿ ಈವರೆಗೆ ಸುಮಾರು 20,000ಕ್ಕೂ ಹೆಚ್ಚು ಮಂದಿಯನ್ನು ಕಿಲ್ಲರ್ ವೈರಸ್ ಬಲಿ ತೆಗೆದುಕೊಂಡಿದೆ. ಅಮೆರಿಕದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರಲ್ಲಿ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಇದರೊಂದಿಗೆ ಅಮೆರಿಕ ಕೋವಿಡ್-18 ಸಾವು ಮತ್ತು ಸೋಂಕು ಪ್ರಕರಣಗಳಲ್ಲಿ ವಿಶ್ವದಲ್ಲೇ ಅಗ್ರ ಶ್ರೇಯಾಂಕದಲ್ಲಿದೆ.

ಇಟಲಿ, ಸ್ಪೇನ್, ಜರ್ಮನಿ, ಮತ್ತು ಇಂಗ್ಗೆಂಡ್ ದೇಶಗಳಲ್ಲೂ ಅಪಾರ ಸಾವು-ನೋವುಗಳಿಗೆ ಕಾರಣವಾಗಿದೆ. ಇಟಲಿಯಲ್ಲಿ 19,000ಕ್ಕೂ ಹೆಚ್ಚು ಹಾಗೂ ಸ್ಪೇನ್‍ನಲ್ಲಿ 17,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಹಸ್ರಾರು ಜನರು ಸೋಂಕು ಪೀಡಿತರಾಗಿದ್ದಾರೆ.ಕೊರೊನಾ ವೈರಸ್‍ನ ಕೇಂದ್ರ ಬಿಂದು ಚೀನಾದಲ್ಲೂ ಮತ್ತೆ ಹೊಸ 100 ಪ್ರಕರಣಗಳು ವರದಿಯಾಗಿವೆ. . ಪಾಕಿಸ್ತಾನದಲ್ಲಿ ಕೋವಿಡ್-19 ವೈರಸ್‍ಗೆ ಈಗಾಗಲೇ 90 ಮಂದಿ ಅಸುನೀಗಿದ್ದು, ಸೋಂಕಿತರ ಸಂಖ್ಯೆ 6000 ದಾಟಿದೆ.

ಸಾಂಕ್ರಾಮಿಕ ಪೀಡೆಯಿಂದ ಬಾಧಿತರಾಗಿರುವ ಲಕ್ಷಾಂತರ ಜನರಲ್ಲಿ ಸಹಸ್ರಾರು ಜನರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಲಾಕ್‍ಡೌನ್ ಸೇರಿದಂತೆ ಅನೇಕ ಕಠಿಣ ಕ್ರಮಗಳ ಹೊರತಾಗಿಯೂ ಕೊರೊನಾ ನಿಯಂತ್ರಣಕ್ಕೆ ಬಾರದೇ ಅಟ್ಟಹಾಸ ಮೆರೆಯುತ್ತ ರಣಕೇಕೆ ಹಾಕುತ್ತಿದೆ.

Facebook Comments

Sri Raghav

Admin