ಜನರಲ್ಲಿ ಭರವಸೆಯ ಬೆಳಕು ಮೂಡಿಸುತ್ತಿರುವ ಕರೋನ ಲಸಿಕೆ ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.24-ಮಾರಕ ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಭಾರತದಲ್ಲಿ ಲಸಿಕೆ ಮತ್ತು ಔಷಧಿಗಳನ್ನು ಅಭಿವೃದ್ದಿಗೊಳಿಸಿ ಅವುಗಳನ್ನು ಶೀಘ್ರದಲ್ಲೇ ಜನರಿಗೆ ಲಭ್ಯವಾಗುವಂತೆ ಮಾಡಲು ಸಂಶೋಧಕರು ಮತ್ತು ಜೀವ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.  ಇದೇ ವೇಳೆ ದೇಶಾದ್ಯಂತ ಕೊರೊನಾ ಆರ್ಭಟ ಕ್ರಮೇಣ ಕಡಿಮೆಯಾಗುತ್ತಿದ್ದು, ಪರಿಣಾಮಕಾರಿ ಲಸಿಕೆ ಶೀಘ್ರ ಲಬಿಸಿದರೆ ಹೆಮ್ಮಾರಿಯನ್ನು ದೇಶದಿಂದ ಹೊರದಬ್ಬುವ ಆಶಾಭಾವನೆಗಳೂ ಸಹ ಸದೃಢವಾಗುತ್ತಿದೆ.

ದೇಶದಲ್ಲಿ ಅಭಿವೃದ್ದಿಗೊಳಿಲಾಗುತ್ತಿರುವ ನಾಲ್ಕೈದು ಪ್ರಮುಖ ಕೋವಿಡ್ ನಿಗ್ರಹ ಲಸಿಕೆಗಳು ವಿವಿಧ ಹಂತಗಳ ಪ್ರಯೋಗದಲ್ಲಿದ್ದು, ಮುಂದಿನ ವರ್ಷದ ತ್ರೈಮಾಸಿಕ ಅವಧಿಯೊಳಗೆ ಲಭಿಸಲಿದ್ದು, ಭರವಸೆಯ ಆಶಾಕಿರಣಗಳು ಮೂಡಿವೆ.  ಕೋವ್ಯಾಕ್ಸಿನ್, ಎಂಆರ್‍ಎನ್‍ಎ, ಆಕ್ಸ್‍ಫರ್ಡ್ ಸೇರಿದಂತೆ ದೇಶ-ವಿದೇಶಗಳ ಕೊರೊನಾ ಲಸಿಕೆಗಳು ಶೀಘ್ರದಲ್ಲೇ ಭಾರತೀಯರಿಗೆ ಲಭಿಸುವ ನಿರೀಕ್ಷೆ ಇದ್ದರೂ.

ಇವುಗಳು ವಿವಿಧ ಹಂತಗಳ ಪ್ರಯೋಗಗಳಲ್ಲಿವೆ. ಆದಷ್ಟು ಶೀಘ್ರ ವ್ಯಾಕ್ಸಿನ್‍ಗಳನ್ನು ಭಾರತೀಯರಿಗೆ ನೀಡಲು ಕೊರೊನಾ ಸಂಕಷ್ಟದಿಂದ ಎಲ್ಲರನ್ನು ಪಾರು ಮಾಡಲು ಸಂಶೋಧಕರು ಮತ್ತು ವೈದ್ಯರು ಅಹರ್ನಿಶಿ ಶ್ರಮಿಸುತ್ತಿದ್ದಾರೆ.  ಮಾರ್ಚ್ ವೇಳೆಗೆ ದೇಶದ ಜನತೆಗ ಕೊರೊನಾ ನಿಗ್ರಹ ಲಸಿಕೆ ಲಭ್ಯವಾಗಲಿದೆ. ಅವುಗಳನ್ನು ಸಮರ್ಪಖವಾಗಿ ವಿತರಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಈಗಾಗಲೇ ಹೇಳಿದ್ಧಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಸಹ ಇತ್ತೀಚಿನ ತಮ್ಮ ಭಾಷಣಗಳಲ್ಲಿ ದೇಶವಾಸಿಗಳಿಗೆ ಅತಿ ಶೀಘ್ರದಲ್ಲೆ ಕೊರೊನಾ ನಿಯಂತ್ರಣ ಔಷಧಿಗಳು ಲಭ್ಯವಾಗಲಿದೆ. ನುಮೋದನೆ ದೊರೆತ ನಂತರ ಹಂತಹಂತವಾಗಿ ಲಸಿಕೆಗಳನ್ನು ಭಾರೀ ಸಂಖೆಯಲ್ಲಿ ತಯಾರಿಸಿ ತ್ವರಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಲಸಿಕೆಗಳನ್ನು ಲಭ್ಯವಾದರೂ ಅವುಗಳನ್ನು ಸಮಪರ್ಕವಾಗಿ ದೇಶಾದ್ಯಂತ ವಿತರಿಸುವುದು ಸರ್ಕಾರ ಮತ್ತು ಸಂಸ್ಥೆಗಳ ಮುಂದಿರುವ ದೊಡ್ಡ ಸವಾಲಾಗಿದೆ.

ಕೋವ್ಯಾಕ್ಸಿನ್, ಎಂಆರ್‍ಎನ್‍ಎ, ಆಕ್ಸ್‍ಫರ್ಡ್ ಸೇರಿದಂತೆ ದೇಶ-ವಿದೇಶಗಳ ಕೊರೊನಾ ಲಸಿಕೆಗಳು ಶೀಘ್ರದಲ್ಲೇ ಭಾರತೀಯರಿಗೆ ಲಭಿಸುವ ನಿರೀಕ್ಷೆ ಇದ್ದರೂ. ಇವುಗಳು ಅಂತಿಮ ಪರೀಕ್ಷೆಯಿಂದ ಇನ್ನೂ ಹೊರ ಬಂದಿಲ್ಲ. ಇವುಗಳು ಎರಡು, ಮೂರು ಮತ್ತು ಕೊನೆ ಹಂತದ ಪರೀಕ್ಷೆಗಳಲ್ಲಿವೆ.  ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ರಷ್ಯಾ ತುದಿಗಾಲಲ್ಲಿ ನಿಂತಿದ್ದು, ಈ ಸಂಬಂಧ 100 ಕಾರ್ಯಕರ್ತರನ್ನು ಮಾನವ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಸ್ರೇಲ್ ಸಹ ಭಾರತದ ಸಹಕಾರದೊಂದಿಗೆ ಲಸಿಕೆ ಅಭಿವೃದ್ದಿಯಲ್ಲಿ ತೊಡಗಿದೆ.

ವಿತರಣೆ ಸವಾಲು : ಈ ಲಸಿಕೆಗಳಿಗೆ ಅನುಮೋದನೆ ಲಭಿಸಿದ ನಂತರ ಮುಂದಿನ ವರ್ಷ ಮಾರ್ಚ್ ನಂತರ ಬಳಕೆಗೆ ದೊರೆಯಲಿದೆ. ಆದರೆ ಇವುಗಳನ್ನು ಭಾರೀ ಸಂಖ್ಯೆಯಲ್ಲಿ ತಯಾರಿಸಿ ಸಿರಿಂಜ್ ಮತ್ತು ಇತರ ಸಾದನಗಳೊಂದಿಗೆ ಜನರಿಗೆ ಕೊರತೆಯಾಗದಂತೆ ಲಭಿಸುವಂತೆ ಮಾಡಲುವುದು ದೊಡ್ಡ ಸವಾಲಾಗಿದೆ.  ಭಾರತೀಯ ಖ್ಯಾತ ಉದ್ಯಮಿ ಮತ್ತು ಬೆಂಗಳೂರಿನ ಬಯೋಟೆಕ್ ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜೂಮ್ದಾರ್ ಷಾ ಅವರು ದೇಶದಲ್ಲಿ ಜೂನ್ ವೇಳೆಗೆ ಲಸಿಕೆ ಸಭ್ಯವಾಗುತ್ತದೆ.

ಆದರೆ ಇವುಗಳನ್ನು ಭಾರತೀಯರೆಲ್ಲರಿಗೂ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಲಭ್ಯವಾಗುವಂತೆ ಮಾಡುವದು ದೊಡ್ಡ ಸವಾಲಿನ ಕೆಲಸ ಎಂದು ಹೇಳಿದ್ದಾರೆ. ಖಾಸಗಿ ವಾರ್ತಾ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಎಂಆರ್‍ಎನ್‍ಎ ಜೂನ್ ಒಳಗೆ ಭಾರತೀಯರಿಗೆ ಲಭ್ಯಸಲಿದೆ. ಈ ವರ್ಷದೊಳಗೆ ಇದಕ್ಕೆ ಕೇಂದ್ರದಿಂದ ಅನುಮೋದನೆ ದೊರೆತರೂ ಇದು ಜೂನ್‍ಗಿಂತ ಮುನ್ನ ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.

ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಅಭಿವೃದ್ದಿಗೊಳಿಸುತ್ತಿರುವ ಕೊವ್ಯಾಕ್ಸಿನ್ ಸಹ ಅಂತಿಮ ಹಂತದ ಪ್ರಯೋಗದಲ್ಲಿದೆ. ಇದಕ್ಕೆ ಇನ್ನೆರಡು ತಿಂಗಳಲ್ಲಿ ಅನುಮೋದನೆ ಲಭಿಸಿದರೂ. ಮಾರ್ಚ್ ನಂತರವಷ್ಟೇ ದೇಶದ ಜನರಿಗೆ ಇದು ಲಭಿಸುವ ಸಾಧ್ಯತೆ ಇದೆ. ಇದೇ ವೇಳೆ ಆಸ್ಟ್ರಾ ಜೆನಾಕಾ ಮತ್ತು ಜೈಡಸ್ ಕ್ಯಾಡಿಲಾ ಲಿಮಿಟೆಡ್ ಸೇರಿದಂತೆ ಇತರ ಪ್ರಮುಖ ಸಂಸ್ಥೆಗಳ ಲಸಿಕೆಗಳೂ ಸಹ ಮುಂದಿನ ವರ್ಷ ಲಭ್ಯವಾಗಲಿದೆ.

Facebook Comments