ಕೊರೋನಾ ಹೋರಾಟಕ್ಕೆ ಸಾಥ್ ನೀಡಿದ ಭಾರತಕ್ಕೆ ಭೇಷ್ ಎಂದ WHO

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಏ.16- ಜಗತ್ತಿಗೇ ಕಂಟಕವಾಗಿ ಪರಿಣಮಿಸಿರುವ ಹೆಮ್ಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ನೀಡುತ್ತಿರುವ ಸಹಕಾರ ಮತ್ತು ಬೆಂಬಲವನ್ನು ವಿಶ್ವಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಸ್ವಾಗತಿಸಿ, ಪ್ರಶಂಸಿಸಿದೆ.

ಭಾರತದಜಂಟಿ ಪರಿಶ್ರಮವು ಈ ಪಿಡುಗನ್ನು ನಿರ್ಮೂಲನೆ ಮಾಡುವಲ್ಲಿ ದೊಡ್ಡ ಮಟ್ಟದಲ್ಲಿ ನೆರವಾಗಲಿದ ಎಂದು ಜಗತ್ತಿನ ಅತ್ಯುನ್ನತ ಆರೋಗ್ಯರಕ್ಷಣಾ ಸಂಸ್ಥೆಯಾದ ಡಬ್ಲ್ಯುಎಚ್‍ಒ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್‍ಘೆಬ್ರೆಯೆಸುಸ್ ಹೇಳಿದ್ದಾರೆ.

ಕೋವಿಡ್-19 ವೈರಾಣು ಹಾವಳಿಯನ್ನು ಮಣಿಸಲು ಭಾರತದೊಂದಿಗೆ ವಿಶ್ವಆರೋಗ್ಯ ಸಂಸ್ಥೆ ಸಹಭಾಗಿತ್ವ ಹೊಂದಿರುವುದು ಸ್ವಾಗತಾರ್ಹ ಸಂಗತಿಎಂದುಅವರು ತಿಳಿಸಿದ್ದಾರೆ. ಭಾರತವು ಸಿಡುಬು, ಪೋಲೀಯೋ ದಂಥ ಪಿಡುಗಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ.

ಇದೇ ಕಾರ್ಯತಂತ್ರವನ್ನು ಕೋರೊನಾ ಮಹಾಮಾರಿ ವಿರುದ್ಧ ಬಳಸಲು ರೂಪುರೇಷೆ ಮತ್ತು ಕಾರ್ಯತಂತ್ರ ರೂಪಿಸಲು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ನಮ್ಮ ಸಂಸ್ಥೆ ಶ್ರಮಿಸಲಿದೆ ಎಂದು ಟೆಡ್ರೋಸ್ ಹೇಳಿದ್ದಾರೆ.

ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಡಬ್ಲ್ಯುಎಚ್‍ಒ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ದೇಣಿಗೆಯನ್ನು ಕಡಿತಗೊಳಿಸಿದ ಬೆನ್ನಲ್ಲೇ ವಿಶ್ವಆರೋಗ್ಯ ಸಂಸ್ಥೆ ಭಾರತದ ಸಹಕಾರವನ್ನು ಪ್ರಶಂಸಿಸಿರುವುದು ಗಮನಾರ್ಹ ಸಂಗತಿಯಾಗಿದೆ.

Facebook Comments

Sri Raghav

Admin