‘ಲಸಿಕೆ ಇಲ್ಲದೇ ಕೊರೊನಾ ನಿರ್ಮೂಲನೆಯಾಗುತ್ತೆ : ‘ಜೋಕ್’ರ್ ಟ್ರಂಪ್..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಮೇ 10-ಡೆಡ್ಲಿ ಕೋವಿಡ್-19 ಅಮೆರಿಕವನ್ನು ಬೆಂಬಿಡದೇ ಕಾಡುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರ್ತನೆ ಮತ್ತು ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಇವರ ಮತ್ತೊಂದು ಅವಾಂತರ ಈ ಹಾಸ್ಯಾಸ್ಪದಕ್ಕೆ ಕಾರಣವಾಗಿದೆ.

ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 76,000ಕ್ಕೇರಿದ್ದು, ಮೂರ್ನಾಲ್ಕು ದಿನಗಳಲ್ಲಿ ಒಂದು ಲಕ್ಷ ಮಂದಿ ಅಸು ನೀಗುವ ಆತಂಕವಿದೆ.

ಆದರೆ ಅಮೆರಿಕ ರಾಷ್ಟ್ರಾಧ್ಯಕ್ಷರು ಕೊರೊನಾಗೆ ಯಾವುದೇ ಔಷಧಿ ಮತ್ತು ಲಸಿಕೆ ಅಗತ್ಯವಿಲ್ಲದೇ ಅದು ನಿರ್ಮೂಲನೆಯಾಗುತ್ತದೆ ಎಂದು ಹೇಳಿ ನಗೆಪಾಟಲಿಗೆ ಸಿಲುಕಿದ್ದಾರೆ.ರಿಪಬ್ಲಿಕನ್ ಸೆನೆಟರ್‍ಗಳೊಂದಿಗೆ ಸಮಾಲೋಚನೆ ಸಂದರ್ಭದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಮಾಣ ತಗ್ಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ವ್ಯತಿರಿಕ್ತವಾಗಿ ಅಮೆರಿಕದಲ್ಲಿ ಡೆತ್ ಮತ್ತು ಪಾಸಿಟಿವ್ ಕೇಸ್‍ಗಳು ಹೆಚ್ಚಾಗುತ್ತಿವೆ.

ಈ ಹಿಂದೆ ಅನೇಕಾನೇಕ ವೈರಸ್‍ಗಳು ಈ ವಿಶ್ವವನ್ನು ಕಾಡಿವೆ. ಅವುಗಳಲ್ಲಿ ಬಹುತೇಕ ವೈರಾಣುಗಳು ಯಾವುದೇ ಔಷಧಿ ಮತ್ತು ಲಸಿಕೆ ಇಲ್ಲದೇ ಹೊರಟು ಹೋಗಿವೆ. ಹೀಗಾಗಿ ಕಿಲ್ಲರ್ ಕೊರೊನಾ ಸಹ ಇದೇ ರೀತಿ ನಿರ್ಮೂಲನೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸೂಪರ್‍ಪವರ್ ರಾಷ್ಟ್ರದಲ್ಲಿ. ಈವರೆಗೆ 13 ಲಕ್ಷಕ್ಕೂ ಅಧಿಕ ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದು, ಅನೇಕರ ಸ್ಥಿತಿ ಶೋಚನೀಯವಾಗಿದೆ.

ಕೋವಿಡ್-19 ವೈರಸ್ ನಿಗ್ರಹಕ್ಕಾಗಿ ಇಡೀ ಅಮೆರಿಕದ ವೈದ್ಯಲೋಕವೇ ಹೊಸ ಲಸಿಕೆಯನ್ನು ಸಂಶೋಧನೆಯಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದೆ.
ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಈಗಾಗಲೇ ಕಿಲ್ಲರ್ ಕೊರೊನಾ ದಾಳಿಯಿಂದ ಕಂಗೆಟ್ಟಿದ್ದು, ಜೂನ್‍ನಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ಈಗಾಗಲೇ ಹೇಳಿದೆ.

ಜೂನ್‍ನಲ್ಲಿ ಪ್ರತಿದಿನ ವೈರಾಣು ಸರಾಸರಿ 3,000 ಜನರನ್ನು ಬಲಿತೆಗೆದುಕೊಳ್ಳಲಿದ್ದು, ದಿನಕ್ಕೆ ಸುಮಾರು ಎರಡು ಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ ಶ್ವೇತಭವನದ ಉನ್ನತಾಧಿಕಾರಿಗಳಿಗೆ ಸೋಂಕು ತಗುಲಿತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ವೈಟ್ ಹೌಸ್ ತಲ್ಲಣಗೊಂಡಿದೆ .

Facebook Comments

Sri Raghav

Admin