ಕೊರೋನಾದಿಂದ ಕಡುಬಡವರಾಗಲಿದ್ದಾರೆ 6 ಕೋಟಿ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 21- ಕೋವಿಡ್-19ರ ಪರಿಣಾಮದಿಂದಾಗಿ ಪ್ರಸಕ್ತ ಸಾಲಿನಲ್ಲಿ ಶೇ.5ರಷ್ಟು ಜಾಗತಿಕ ಆರ್ಥಿಕತೆ ಕುಸಿಯಲಿದೆ ಮತ್ತು ವಿಶ್ವಾದ್ಯಂತ 6 ಕೋಟಿ ಜನರು ಕಡುಬಡತನಕ್ಕೆ ಒಳಗಾಗುವರು.

ಇದರಿಂದ ಜಾಗತಿಕ ಅರ್ಥವ್ಯವಸ್ಥೆ ಹಲವು ವರ್ಷಗಳ ಕಾಲ ನರಳಲಿದೆ ಎಂದು ವಿಶ್ವ ಬ್ಕಾಂಕ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್‍ಪಾಸ್, ಕೋವಿಡ್‍ನಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಹಾಗೂ ವ್ಯಾಪಾರವನ್ನು ಕಳಕೊಂಡಿದ್ದಾರೆ.

ಬಡ ರಾಷ್ಟ್ರಗಳು ಇದರಿಂದ ಗರಿಷ್ಠ ಪೀಡಿತಕ್ಕೊಳಗಾಗಿವೆ. ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆ ಮೇಲೆ ಭಾರೀ ಒತ್ತಡ ಬಿದ್ದಿದೆ ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನ ನಿಟ್ಟಿನಲ್ಲಿ ಸಾಧಿಸಲಾದ ಎಲ್ಲ ಪ್ರಗತಿ ಅಳಿದುಹೋಗಲಿದೆ.

ವ್ಯಕ್ತಿಯೋಬ್ಬ ದಿನಕ್ಕೆ 1.90 ಡಾಲರ್‍ಗಿಂತ ಕಡಿಮೆ ಹಣದಲ್ಲಿ ಜೀವಿಸುವುದನ್ನು ಕಡುಬಡತನವೆಂದು ವಿಶ್ವ ಬ್ಯಾಂಕ್ ವ್ಯಾಖ್ಯಾನಿಸುತ್ತದೆ. ವಿಶ್ವಬ್ಯಾಂಕ್ ಬಡರಾಷ್ಟ್ರಗಳಿಗೆ 160 ಶತಕೋಟಿ ಡಾಲರ್ ಅನುದಾನ ಹಾಗೂ ರಿಯಾಯಿತಿ ಬಡ್ಡಿದರದ ಸಾಲಗಳನ್ನು ಕೊಡಲು ಮುಂದಾಗಿದೆ.

ವಿಶ್ವದ ಶೇ. 70ರಷ್ಟು ಜನಸಂಖ್ಯೆ ಹೊಂದಿರುವ 100 ರಾಷ್ಟ್ರಗಳಿಗೆ ಈಗಾಗಲೇ ತುರ್ತು ಹಣಕಾಸು ನೆರವು ನೀಡಲಾಗಿದೆ ಎಂದು ಮಲ್‍ಪಾಸ್ ತಿಳಿಸಿದ್ದಾರೆ.

Facebook Comments

Sri Raghav

Admin