250 ದೇಶಗಳಿಗೆ ವೈರಸ್ ಕಂಟಕ, ಈವರೆಗೆ ವಿಶ್ವದಾದ್ಯಂತ 3.58 ಲಕ್ಷ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಮೇ 28-ಡೆಡ್ಲಿ ಕೊರೊನಾ ವೈರಸ್ ಹಾವಳಿಯಿಂದ ವಿಶ್ವದ ಸುಮಾರು 250 ದೇಶಗಳ ಹೈರಾಣಗಿವೆ. ಪೆಡಂಭೂತವಾಗಿ ಕಾಡುತ್ತಿರುವ ಡೆಡ್ಲಿ ಕೊರೊನಾ ವೈರಾಣು ದಾಳಿ ವಿಶ್ವಾದ್ಯಂತ ಮತ್ತಷ್ಟು ತೀವ್ರಗೊಂಡಿದೆ. ಈವರೆಗೆ ಪ್ರಪಂಚಾದ್ಯಂತ 3.58 ಲಕ್ಷಜನರನ್ನು ಹೆಮ್ಮಾರಿಬಲಿ ಪಡೆದಿದೆ.

ಅಲ್ಲದೇಸೋಂಕಿತರ ಸಂಖ್ಯೆ 57.92 ಲಕ್ಷದಾಟಿರುವುದು ಆತಂಕಕಾರಿ ಸಂಗತಿಯಾಗಿದೆ. ಕಳೆದ 24 ತಾಸುಗಳಲ್ಲಿ ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಮಂದಿಗೆ (ಸೋಂಕು ತಗುಲಿದೆ. ಕಳೆದ ಒಂದು ವಾರದಿಂದಲೂ ಜಗತ್ತಿನಾದ್ಯಂತ ಸರಾಸರಿ 1 ಲಕ್ಷ ಮಂದಿಗೆ ಸಾಂಕ್ರಾಮಿಕರೋಗ ಕಾಣಿಸಿಕೊಳ್ಳುತ್ತಿದೆ.

ಅಲ್ಲದೇ ದಿನ ನಿತ್ಯ ಪಾಸಿಟಿವ್ ಕೇಸ್‍ಗಳು ವ್ಯಾಪಕವಾಗಿ ಹೆಚ್ಚಾಗುತ್ತಿದೆ.  ಜಗತ್ತಿನಾದ್ಯಂತ ಈವರೆಗೆ 3,57,479 ಮಂದಿ ಸಾವಿಗೀಡಾಗಿದ್ದು, 57,92,874ಸೋಂಕು ಪ್ರಕರಣಗಳು ವರದಿಯಾಗಿವೆ.

ಸಾಂಕ್ರಾಮಿಕರೋಗ ಪೀಡಿತರಲ್ಲಿ ಸುಮಾರು 53,000ಕ್ಕೂ ಮಂದಿ ಸ್ಥಿತಿ ಗಂಭೀರವಾಗಿದ್ದು, ಮರಣ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಇಂದುರಾತ್ರಿ ವೇಳೆಗೆ ಮೃತರ ಸಂಖ್ಯೆ 3.62ಲಕ್ಷ ಮತ್ತು ಸೋಂಕಿತರ ಸಂಖ್ಯೆ59 ಲಕ್ಷ ಮೀರುವಆತಂಕವಿದೆ.

ಈ ಮಧ್ಯೆ, ರೋಗಿಗಳ ಚೇತರಿಕೆ ಪ್ರಮಾಣದಲ್ಲಿಯೂ ವೃದ್ದಿ ಕಂಡುಬಂದಿವೆ. 24.99 ಲಕ್ಷ ಮಂದಿಸೋಂಕು ಪೀಡಿತರು ಚೇತರಿಸಿ ಕೊಂಡಿರುವುದು ಮತ್ತುಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಅಮೆರಿಕ, ಬ್ರೆಜಿಲ್, ರಷ್ಯಾ, ಸ್ಪೇನ್, ಮತ್ತು ಇಂಗ್ಲೆಂಡ್ – ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದಟಾಪ್ ಫೈವ್ ದೇಶಗಳಾಗಿವೆ  ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಇಟಲಿ, ಫ್ರಾನ್ಸ್, ಜರ್ಮನಿ, ಟರ್ಕಿ ಮತ್ತುಭಾರತ ದೇಶಗಳಿವೆ. ಅತಿ ಹೆಚ್ಚು ಸೋಂಕು ಮತ್ತು ಸಾವು ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ.

ಏಷ್ಯಾಖಂಡದಲ್ಲಿ ಚೀನಾ, ದಕ್ಷಿಣಕೊರಿಯಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್‍ಕೇಂದ್ರ ಬಿಂದುಚೀನಾದ ವುಹಾನ್ ನಗರದಲ್ಲಿಯೂ ಹೊಸ ಪಾಸಿಟಿವ್ ಕೇಸ್‍ಗಳು ಕಂಡುಬರುತ್ತಿವೆ.

Facebook Comments