ವಿಶ್ವದಲ್ಲಿ 2.96 ಕೋಟಿ ಜನರಿಗೆ ಕೊರೊನಾ, 9.28 ಲಕ್ಷ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್, ಸೆ.14- ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ದಾಳಿಯ ಎರಡನೇಅಲೆಯಆತಂಕದ ನಡುವೆಯೇ ವಿಶ್ವಾದ್ಯಂತಡೆಡ್ಲಿ ಕೋವಿಡ್-19 ವೈರಸ್ ಪ್ರಹಾರ ಮುಂದುವರಿದಿದೆ. ಲೋಕಕಂಟಕವಾಗಿ ಪರಿಣಮಿಸಿರುವ ಪೆಡಂಭೂತದ ಹಾವಳಿಯಿಂದ ಪ್ರತಿನಿತ್ಯ ಸೋಂಕು ಮತ್ತು ಸಾವು ಪ್ರಕರಣಗಳುವರದಿಯಾಗುತ್ತಲೇ ಇವೆ.

ಜಗತ್ತಿನಾದ್ಯಂತರೋಗಪೀಡಿತರ ಸಂಖ್ಯೆ 2.96ಕೋಟಿ ಮತ್ತುಒಟ್ಟು ಸಾವಿನ ಸಂಖ್ಯೆ9.28 ಲಕ್ಷದಾಟಿದೆ. ಇದರ ನಡುವೆಯೂವಿಶ್ವದಲ್ಲಿಈವರೆಗೆ2.10ಕೋಟಿಗೂಅಧಿಕ ರೋಗಿಗಳು ಗುಣಮುಖರಾಗಿರುವುದುತುಸು ಸಮಾಧಾನಕರ ಸಂಗತಿಯಾಗಿದೆ. ಆದರೆಇನ್ನೂ72.29 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿರುವುದುಆತಂಕದ ಸಂಗತಿಯಾಗಿದೆ.

ವಿಶ್ವವ್ಯಾಪಿ ನಿನ್ನೆ ಮಧ್ಯರಾತ್ರಿವರೆಗೆ9,28,333ಮಂದಿ ಸಾವಿಗೀಡಾಗಿದ್ದು, 2,96,89,603ಸೋಂಕು ಪ್ರಕರಣಗಳು ವರದಿಯಾಗಿದೆ.. ಸಕ್ರಿಯ ಪ್ರಕರಣಗಳ ಸಂಖ್ಯೆ 72,29,520ದಾಟಿದೆ. ಅಲ್ಲದೇಇನ್ನೂ60,500ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ.

ನಾಳೆ ವೇಳೆಗೆ ಸಾವಿನ ಸಂಖ್ಯೆ9.40ಲಕ್ಷ ಮತ್ತುಸಾಂಕ್ರಾಮಿಕ ರೋಗಿಗಳ ಪ್ರಮಾಣ3ಕೋಟಿದಾಟುವಆತಂಕವಿದೆ. ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ.. ವಿಶ್ವದಲ್ಲಿಈವರೆಗೆ2,10,37,761ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತುಗುಣಮುಖರಾಗಿದ್ದಾರೆ.. .

ಅಮೆರಿಕ,ಭಾರತ, ಬ್ರೆಜಿಲ್, ರಷ್ಯಾ,ಮತ್ತುಪೆರುಕೊರೊನಾ ಕೇಸ್‍ಗಳಲ್ಲಿ ವಿಶ್ವದಟಾಪ್ ಫೈವ್ ದೇಶಗಳಾಗಿವೆ.ಇದರ ನಡುವೆಯೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹೆಮ್ಮಾರಿಯ ಪ್ರಕೋಪಕ್ಷೀಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

Facebook Comments