2 ಲಕ್ಷ ಜನರನ್ನು ಬಲಿಪಡೆದು ಜಗತ್ತೇ ತನ್ನ ಮುಂದೆ ಮಂಡಿಯೂರುವಂತೆ ಮಾಡಿದ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರೋಮ್/ಮ್ಯಾಡ್ರಿಡ್, ಏ.26-ಹಲವು ವರ್ಷಗಳ ಹಿಂದೆ ಒಂದು ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೆ ಒಂದು ಗ್ರಾಮವೋ ಅಥವಾ ಆ ಒಂದು ನಿರ್ದಿಷ್ಟ ಪ್ರದೇಶದ ಜನರೇ ನಾಮಾವಶೇಷವಾಗುತ್ತಿದ್ದರು. ಆದರೆ ಡೆಡ್ಲಿ ಕೊರೊನಾ ಇಡೀ ಜಗತ್ತಿಗೆ ಕಾಡುತ್ತಿರುವ ಮಹಾಮಾರಿಯಾಗಿ ಪರಿಣಮಿಸಿದೆ.

ಈ ಹೆಮ್ಮಾರಿಯ ಅಟ್ಟಹಾಸಕ್ಕೆ ವಿಶ್ವದ ಬಹುತೇಕ ಎಲ್ಲ ದೇಶಗಳು ಕಂಗೆಟ್ಟಿವೆ. ವಿಶ್ವದಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ವಿಶ್ವದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 2 ಲಕ್ಷ ದಾಟಿರುವುದು ಕಳವಳಕಾರಿ. ಇನ್ನೆಷ್ಟು ಮಂದಿ ಈ ಮಹಾಮಾರಿಗೆ ಬಲಿಯಾಗಬೇಕೆಂಬ ಚಿಂತೆ ಕಾಡುತ್ತಿದೆ.

ಅಧಿಕೃತ ವರದಿಗಳ ಪ್ರಕಾರ ಈವರೆಗೆ ಸುಮಾರು 2 ಲಕ್ಷ 6 ಸಾವಿರ ಜನರನ್ನು ವೈರಸ್ ಹೊಸಕಿ ಹಾಕಿದೆ.. ಅಲ್ಲದೇ ಸೋಂಕಿರ ಸಂಖ್ಯೆ 28 ಲಕ್ಷ ದಾಟಿದೆ. ಇವೆಲ್ಲದರ ನಡುವೆ ಸ್ವಲ್ಪ ಸಮಾಧಾನಕರ ಸಂಗತಿ ಎಂದರೆ ಈತನಕ ಸುಮಾರು 7.70 ಲಕ್ಷ ಜನರು ರೋಗದಿಂದ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಈಗಾಗಲೇ 54,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ಯುರೋಪ್ ಖಂಡದಲ್ಲಿಯೂ ರಣಕೇಕೆ ಮುಂದುವರಿಸಿವೆ. ಇತರ ದೇಶಗಳು ಕೂಡ ವೈರಸ್ ದಾಳಿಯಿಂದ ನಲುಗಿವೆ.

ಸಾವಿನ ಸಂಖ್ಯೆಯಲ್ಲಿ ಅನುಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿದ್ದ ಇಟಲಿ, ಸ್ಪೇನ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಮರಣ ಪ್ರಮಾಣದಲ್ಲಿ ಮೊನ್ನೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಬಂದಿತ್ತು. ಆದರೆ ಕಿಲ್ಲರ್ ಕೊರೊನಾ ಅಟ್ಟಹಾಸ ಮತ್ತೆ ತೀವ್ರಗೊಂಡಿದೆ.

Facebook Comments

Sri Raghav

Admin