ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 15,968 ಮಂದಿಗೆ ಕೊರೋನಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.13- ದೇಶದಲ್ಲಿ ಕೊರೊನಾ ವೈರಸ್‍ನ ಪಾಸಿಟಿವ್ ಕೇಸ್‍ಗಳು ಒಂದೇ ದಿನದಲ್ಲಿ 15, 968 ನಮೂದಾಗಿವೆ. ಇದುವರೆಗೆ ಒಟ್ಟು ಒಂದು ಕೋಟಿ 4 ಲಕ್ಷ 95 ಸಾವಿರ 147 ಪ್ರಕರಣಗಳು ದಾಖಲಾದಂತಾಗಿದೆ. ಸಾವು ಪ್ರಕರಣಗಳು ಜಾಗತಿಕ ಅಂಕಿ ಸಂಖ್ಯೆಗೆ ಹೋಲಿಸಿದ್ದಲ್ಲಿ ಶೇ. 1.44 ರಷ್ಟು ಇರುವುದು ತೃಪ್ತಿದಾಯಕ. ಕೋವಿಡ್-19 ಸೋಂಕಿನಿಂದ ಸತ್ತವರ ಒಟ್ಟು ಸಂಖ್ಯೆ 1,51,529 ಆಗಿದ್ದರೆ, ಕಾಯಿಲೆಯಿಂದ ಚೇತರಿಸಿಕೊಂಡು ಆರೋಗ್ಯದಿಂದಿರುವವರ ಸಂಖ್ಯೆ 1 ಕೋಟಿ ಒಂದು ಲಕ್ಷ 29 ಸಾವಿರದ 111 ಮಂದಿ ಅಂದರೆ ಸರಿಸುಮಾರು ಶೇ.96.11 ರಷ್ಟು.

ಸಾಂಕ್ರಾಮಿಕ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡು ಮುಂಜಾತಾ ಕ್ರಮಗಳ ಪ್ರತಿಫಲ, ವಿಶ್ವಾದ್ಯಂತ ಮೆಚ್ಚುಗೆ ಗಳಿಸಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Facebook Comments