ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು . ಅ.09 : ಸರಕಾರದ ಅಸ್ತಿತ್ವಕ್ಕೆ ಮೂಲ ಕಾರಣರಾದ ಅನರ್ಹರಿಗೆ ಚುನಾವಣೆಯಲ್ಲಿ ಬಂಡಾಯದ ಕಾವು ತಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಿಎಂ ನೇಮಕ ಮಾಡಿದ್ದಾರೆ.

ರಾಜ್ಯದಲ್ಲಿ 17 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ, ಅನರ್ಹ ಶಾಸಕರಿಗೆಟಿಕೆಟ್ ನೀಡಿದರೇ ಈ ಹಿಂದಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಬಂಡಾಯವೇಳುವ ಸಾಧ್ಯತೆಇದ್ದು ಹೀಗಾಗಿ ಇವರನ್ನ ಸಮಾಧಾನಪಡಿಸುವಯತ್ನಕ್ಕೆ ಸಿಎಂ ಬಿಎಸ್‍ಯಡಿಯೂರಪ್ಪ ಕೈ ಹಾಕಿದ್ದಾರೆ.

ಅನರ್ಹ ಶಾಸಕರ ಹಿತಕಾಯಲು ಮುಂದಾಗಿರುವ ಸಿಎಂ ಬಿಎಸ್‍ಯಡಿಯೂರಪ್ಪ, ಬಂಡಾಯವೇಳುವ ತಮ್ಮ ಪಕ್ಷದ ಪರಾಜಿತ ಅಭ್ಯರ್ಥಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನ ನೀಡಿದ್ದಾರೆ. 8 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷಉಪಾಧ್ಯಕ್ಷ ಸ್ಥಾನ ನೀಡಿರಾಜ್ಯ ಸರ್ಕಾರಆದೇಶ ಹೊರಡಿಸಿದೆ.

ಅನರ್ಹರಕೈಯಲ್ಲಿ ಕಳೆದ ಚುನಾವಣೆಯಲ್ಲಿ ಪರಾಜಿಗೊಂಡು ಈಗ ಬಂಡಾಯದ ಮುನ್ಸೂಚನೆನೀಡಿರುವ ನಾಯಕರ ಮೂಗಿಗೆ ಈಗ ನಿಗಮ-ಮಂಡಳಿ ಅಧ್ಯಕ್ಷಗಿರಿಯತುಪ್ಪ ಸವರಲಾಗಿದೆ. ಆ ಮೂಲಕ ಅನರ್ಹರುಒಮದು ವೇಳೆ ಚುನಾವಣಾ ಕಣಕ್ಕಿಳಿದರೆ ಅವರಿಗೆ ಬಂಡಾಯದ ಬೇಗೆ ತಾಗದಂತೆತಡೆಯುವಯತ್ನವನ್ನು ಸಿಎಂ ಮಾಡಿದ್ದಾರೆ.

ಹೊಸಕೋಟೆಯಲ್ಲಿಎಂಟಿಬಿ ನಾಗರಾಜ್ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ಶರತ್ ಬಚ್ಚೇಗೌಡರಿಗೆಆಯಕಟ್ಟಿನ ಗೃಹ ಮಂಡಳಿ ಅಧ್ಯಕ್ಷಗಿರಿ ನೀಡಲಾಗಿದೆ. ಇದೇರೀತಿ ಬಿಸಿ ಪಾಟೀಲರ ಎದುರಾಳಿ ಯುಬಿ ಬಣಕಾರ್‍ಅವರಿಗೆ ಕೃಷಿ ಉತ್ಪನ್ನ ಹಾಗೂ ಸಂಸ್ಕರಣ ಮಂಡಳಿಯ ನೊಗ ಹೊರಿಸಲಾಗಿದೆ.

ಇನ್ನು ಶ್ರೀಮಂತ್ ಪಾಟೀಲ್ ವಿರುದ್ಧ ಬಂಡಾಯದ ಸುಳಿವು ನೀಡಿರುವ ಪರಾಜಿತಅಭ್ಯರ್ಥಿ ಹಾಗೂ ಮಾಜಿ ಶಾಸಕ ರಾಜು ಕಾಗೆ ಅವರನ್ನುಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾಯೋಜನಾ (ಕಾಡಾ) ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇನ್ನು ಬೈರತಿ ಬಸವರಾಜ್‍ಅವರ ವಿರುದ್ಧ ಸೊಲ್ಲೆತ್ತಿರುವ ನಂದೀಶ ರೆಡ್ಡಿಅವರಿಗೆ ಬೆಂಗಳೂರು ನಗರ ಸಾರಿಗೆ ಸಂಸ್ಥೆಯಉಪಾಧ್ಯಕ್ಷ ಪಟ್ಟ ನೀಡಲಾಗಿದೆ. ಅಲ್ಲದೇಗಡಿಅಭಿವೃದ್ಧೀ ಪ್ರಾಧಿಕಾರದಅಧ್ಯಕ್ಷತೆಅಶೋಕ್ ಪೂಜಾರಿ ಹೆಗಲೇರಿದೆ.

ಅಶೋಕ್ ಪೂಜಾರಿ-ಅಧ್ಯಕ್ಷರು, ಕರ್ನಾಟಕಗಡಿಅಭಿವೃದ್ಧಿ ಪ್ರಾಧಿಕಾರ
ಭರಮಗೌಡ ಕಾಗೆ- ಅಧ್ಯಕ್ಷರು, ಮಲಪ್ರಭಾ-ಘಟಪ್ರಭಾಅಚ್ಚುಕಟ್ಟು ಪ್ರಾಧಿಕಾರ(ಕಾಡ)
ಯು.ಬಿ.ಬಣಕಾರ-ಅಧ್ಯಕ್ಷರು, ಕರ್ನಾಟಕರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣೆ ನಿಗಮ
ಬಸವನಗೌಡತುರುವಿ ಹಾಳ -ಅಧ್ಯಕ್ಷರು, ತುಂಗಭದ್ರಾಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡ)
ವಿ.ಎಸ್.ಪಾಟೀಲ್- ಅಧ್ಯಕ್ಷರು, ವಾಯುವ್ಯ ಕರ್ನಾಟಕರಸ್ತೆ ಸಾರಿಗೆ ಹುಬ್ಬಳಿ
ಎಚ್.ಆರ್.ಗವಿಯಪ್ಪ- ಅಧ್ಯಕ್ಷರು, ಸಣ್ಣಕೈಗಾರಿಕೆ ಅ ಭಿವೃದ್ದಿ ನಿಗಮ
ನಂದೀಶ್‍ರೆಡ್ಡಿ- ಉಪಾಧ್ಯಕ್ಷರು, ಬಿಎಂಟಿಸಿ
ಶರತ್ ಬಚ್ಚೇಗೌಡ- ಅಧ್ಯಕ್ಷರು, ಕರ್ನಾಟಕ ಗೃಹಮಂಡಳಿ

Facebook Comments

Sri Raghav

Admin