ಲಾರಿಯ ಟೈರ್ ಸ್ಫೋಟಗೊಂಡು ದಂಪತಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಚಳ್ಳಕೆರೆ, ಫೆ.2- ಲಾರಿಯ ಟೈರ್ ಸ್ಫೋಟಗೊಂಡು ರಸ್ತೆಗೆ ನುಗ್ಗಿದ ಪರಿಣಾಮ ದಂಪತಿ ಮೃತಪಟ್ಟಿರುವ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದ ತಿಪ್ಪೇಸ್ವಾಮಿ (45) , ಶಿವಮ್ಮ (40) ಮೃತಪಟ್ಟ ದಂಪತಿ.

ಬೆಳಗ್ಗೆ ಸುಮಾರು 11 ಗಂಟೆಯಲ್ಲಿ ಆಂಧ್ರಪ್ರದೇಶದ ಮಡಕಶಿರದಿಂದ ಹುಣಸೆಬೀಜ ತುಂಬಿಕೊಂಡು ಬರುತ್ತಿದ್ದ ಲಾರಿ ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಟೈರ್‍ಸ್ಫೋಟಗೊಂಡು ರಸ್ತೆ ಬದಿಗೆ ನುಗ್ಗಿದೆ. ತಿಪ್ಪೇಸ್ವಾಮಿ ಹಾಗೂ ಶಿವಮ್ಮ ಅವರ ಮೇಲೆಯೇ ಲಾರಿ ನುಗ್ಗಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಿಪ್ಪೇಸ್ವಾಮಿ , ಶಿವಮ್ಮ ಚಿಂದಿ ಆಯುವವರಾಗಿದ್ದು , ಬೆಳಗ್ಗೆ ಚಿಂದಿ ಆಯ್ದು ಊರಿಗೆ ಹೋಗಲು ಪೆಟ್ರೋಲ್ ಬಂಕ್ ಬಳಿ ಬಸ್‍ಗಾಗಿ ಕಾಯುತ್ತಿದ್ದರು. ಚಳ್ಳಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ,ಚಾಲಕನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments