ವೃದ್ಧ ದಂಪತಿಯನ್ನು ಕೊಂದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.1- ವೃದ್ಧ ದಂಪತಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಶಂಕಿತ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಚನ್ನರಾಯಪಟ್ಟಣ ಪೋಲೀಸರು ಯಶಸ್ವಿಯಾಗಿದ್ದಾರೆ. ಬರಗೂರು ಗ್ರಾಮದ ಪ್ರಸಾದ್ ಅಲಿಯಾಸ್ ಗುಂಡ ಬಂಧಿತ ಆರೋಪಿ.

ಈತ ಅಲಗೊಂಡನಹಳ್ಳಿಯ ಮುರಳೀಧರ್ ಮತ್ತು ಉಮಾದೇವಿ ವೃದ್ಧ ದಂಪತಿ ಕೊಲೆ ಆರೋಪಿಯಾಗಿದ್ದು , ಬರಗೂರು ಹ್ಯಾಂಡ್‍ಪೋಸ್ಟ್ ಬಳಿಯ ಕೋಳಿ ಫಾರಂನಲ್ಲಿ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಇಂದು ಮುಂಜಾನೆ ಗುಂಡನನ್ನು ಬಂಧಿಸಲು ಮುಂದಾದಾಗ ಸಿಪಿಐ ವಿನಯ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಬೇಲೂರು ಸಿಪಿಐ ಸಿದ್ದರಾಮಪ್ಪ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

90 ಎಕರೆಗೂ ಹೆಚ್ಚು ಜಮೀನು ಹೊಂದಿದ್ದ ಮುರಳೀಧರ್ ಮತ್ತು ಉಮಾದೇವಿ ದಂಪತಿಗೆ ಮಕ್ಕಳಿರಲಿಲ್ಲ. ಸ್ವಲ್ಪ ಜಮೀನು ಮಾರಾಟ ಮಾಡಿ ಹಣವನ್ನು ಮನೆಯಲ್ಲಿಟ್ಟು ಕೊಂಡಿದ್ದರು. ಈ ಮಾಹಿತಿ ತಿಳಿದಿದ್ದ ದುಷ್ಕರ್ಮಿಗಳು ಆ.29ರಂದು ಮನೆಗೆ ನುಗ್ಗಿ ವೃದ್ಧ ದಂಪತಿ ಉಸಿರುಗಟ್ಟಿಸಿ ಕೊಲೆ ಮಾಡಿ ಕೈಗೆ ಸಿಕ್ಕ ಹಣವಲ್ಲದೆ ಬ್ಯಾಂಕ್ ಖಾತೆ ಪುಸ್ತಕ ಮತ್ತು ಎಟಿಎಂಗಳನ್ನು ಕಳ್ಳತನ ಮಾಡಿದ್ದ.

ಮಾತ್ರವಲ್ಲ ಯಾವುದೇ ಗುರುತು ಸಿಗಬಾರದು ಎಂದು ಅವರು ಓಡಾಡಿದ್ದ ಮತ್ತು ಮನೆಯಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದ ವಸ್ತುಗಳ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ. ಕೊಲೆಗಾರನನ್ನು ಪತ್ತೆ ಹಚ್ಚಲು ವಿಶೇಷ ಪೆÇಲೀಸ್ ತಂಡ ರಚನೆ ಮಾಡಲಾಗಿತ್ತು. ತುಮಕೂರಿಗೆ ತೆರಳಿದ್ದ ಪೋಲೀಸ್ ತಂಡ ಆರೋಪಿ ಮತ್ತೆ ಊರಿಗೆ ಬಂದಿದ್ದಾನೆ ಎಂಬ ಮಾಹಿತಿಯನ್ನಾಧರಿಸಿ ಆತನ ಬಂಧನಕ್ಕೆ ಜಾಲ ಬೀಸಲಾಗಿತ್ತು.

ಪೆÇಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗುಂಡನ ಕಾಲಿಗೆ ಪೆಟ್ಟಾಗಿದ್ದು , ಆತನನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದ ಕೊಲೆ ಪ್ರಕರಣಗಳನ್ನು ಬೇಧಿಸುವ ಛಲ ತೊಟ್ಟಿದ್ದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಜೋಡಿ ಕೊಲೆ ಆರೋಪಿ ಬಂಧನಕ್ಕೆ 4 ವಿಶೇಷ ತಂಡ ರಚನೆ ಮಾಡಿದ್ದರು.

ಘಟನಾ ಸ್ಥಳಕ್ಕೆ ಇಂದು ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.  ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು , ಅಪರಾಧಿಗಳ ಹೆಡೆಮುರಿ ಕಟ್ಟಲು ಪೋಲೀಸರು ಸಿದ್ಧರಿದ್ದಾರೆ ಎಂದು ವಿಪುಲ್‍ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಜೋಡಿ ಕೊಲೆ ಸಂಬಂಧಿಸಿದಂತೆ ಒಟ್ಟು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

Facebook Comments