ದಂಪತಿ ಆತ್ಮಹತ್ಯೆ ವೇಳೆ ದಾಂಧಲೆ ಪ್ರಕರಣದಲ್ಲಿ 16 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ,ಜೂ.27- ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಶ್ರೀನಿವಾಸ ಪುರ ಗ್ರಾಮದಲ್ಲಿ ದಂಪತಿ ಆತ್ಮಹತ್ಯೆ ಸಂದರ್ಭದಲ್ಲಿ ರೊಚ್ಚಿಗೆದ್ದ ಮೃತರ ಫೋಷಕರು ದಾಂಧಲೆ ನಡೆಸಿ, ಅಪಾರ ಪ್ರಮಾಣದ ಅಸ್ತಿಯನ್ನು ನಾಶಪಡಿಸಿದ ಆರೋಪದಡಿ 16 ಮಂದಿಯನ್ನು ಅಕ್ಕೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಮುತ್ತಲ ಮಾರಮ್ಮ ದೇವಾಲಯದ ಅರ್ಚಕ ತ್ಯಾಗೇಶ್‍ನ ಸಹೋದರಿ ಹಾಗೂ ಭಕ್ತಾಧಿಗಳು ಈ ಘಟನೆಯ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ದೂರು ಪಡೆದ ಪೊಲೀಸರು, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ 16 ಮಂದಿಯ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು, ಅಲ್ಲದೆ ಮಡಿವಾಳ ಸಮುದಾಯದ ಆರೋಪಿ ಅರ್ಚಕ ತ್ಯಾಗೇಶ್‍ನ ಸಂಬಂಧಿಕರು ಹಾಗೂ ಭಕ್ತಾಧಿಗಳು ರಾಜಕೀಯ ಬಳಸಿ ಮೇಲಾಧಿಕಾರಿಗಳಿಂದ ಪ್ರಭಾವ ಬೀರಿದ ಪರಿಣಾಮ ಆರೋಪಿಗಳ ಶೋಧದಲ್ಲಿ ಪೊಲೀಸರು ಚುರುಕುಗೊಂಡಿದ್ದರು.

ಕಾರ್ಯಚರಣೆಗಿಳಿದು ಗ್ರಾಮದಲ್ಲಿ ಸುಳಿದಾಡಿದ ಪೊಲೀಸರನ್ನು ಕಾಣುತ್ತಿದ್ದಂತೆ, ಗ್ರಾಮದಲ್ಲಿ ಹಲವಾರು ಮಂದಿ ನಾಪತ್ತೆಯಾಗಿದ್ದರು, ಗ್ರಾಮದಲ್ಲಿ ಬಿಗುವಿನ ವಾತವರಣ ಉಂಟಾಗಿ, ಕೂಲಿಯನ್ನೇ ನಂಬಿ ಜೀವನ ಮಾಡುವ ಮಂದಿ ಅಚಾನಾಕ್ ನಡೆದ ಘಟನೆಯಲ್ಲಿ ಪಾಲ್ಗೊಂಡು ಈ ರೀತಿಯ ಪರಿಸ್ಥಿತಿ ತಂದು ಕೊಂಡಿದ್ದರು.

ಕಾಣೆಯಾದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು, ವಿವಿಧ ಕಡೆಗಳಲ್ಲಿ ತಲೆ ಮರೆಸಿಕೊಂಡಿದ್ದ 16 ಮಂದಿ ಆರೋಪಿಗಳನ್ನು ಬಂಧಿಸಿ, ಆರೋಪಿಗಳೆಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ